ಡ್ರಗ್ಸ್ ಮಾಫಿಯಾ ಬಗ್ಗೆ ರಚಿತಾ ರಾಮ್ ಹೇಳಿದ್ದೇನು?

ನೋಡುಮಗ.ಕಂ ವಿಡಿಯೋ ನ್ಯೂಸ್ ಗಳನ್ನು ನೋಡಲು ನಮ್ಮ   YOUTUBE  ಚಾನೆಲ್  SUBSCRIBE  ಮಾಡಿ — >>

ಬಾಲಿವುಡ್ ನಲ್ಲಿ ಆಗಾಗ ಡ್ರಗ್ಸ್ ಪ್ರಕರಣದ ಬಗ್ಗೆ ಸುದ್ದಿ ಕೇಳುತ್ತಲೇ ಇದೆ, ಆದರೆ ಈಗ ಡ್ರಗ್ಸ್ ಮಾಫಿಯಾ ಲಿಂಕ್ ಸ್ಯಾಂಡಲ್ ವುಡ್ ಜೊತೆಗೆ ಇರುವ ಸುದ್ದಿಗಳು ಹರಿದಾಡುತ್ತಿದೆ. ಸಿಬಿಐ ಇದರ ಬಗ್ಗೆ ತನಿಖೆ ನಡೆಸುತ್ತಿದೆ, ಡ್ರಗ್ಸ್ ಮಾಫಿಯಾದಲ್ಲಿ ಸಿಲುಕಿಕೊಂಡಿರುವ ಹಲವಾರು ವ್ಯಕ್ತಿಗಳನ್ನ ಈಗಾಗಲೇ ಪೋಲಿಸರು ಬಂದಿಸಿ ತನಿಖೆ ನಡೆಸುತ್ತಿದ್ದಾರೆ. 

ಸ್ಯಾಂಡಲ್ ವುಡ್ ನಲ್ಲಿ ಈಗ ಸದ್ದು ಮಾಡುತ್ತಿರುವ ಡ್ರಗ್ಸ್ ಮಾಫಿಯಾದ ಬಗ್ಗೆ ನಟಿ ರಚಿತಾ ರಾಮ ಅವರನ್ನು ಮಾದ್ಯಮದವರು ಪ್ರಶ್ನಿಸಿದಾಗ, ಅವರು “ನನಗೆ ಅದರ ಬಗ್ಗೆ ಗೊತ್ತಿಲ್ಲ, ನನಗೆ ಅದು ಬೇಡದಿರುವ ವಿಷಯ, ನನಗೆ ಬೇಡದಿರುವ ವಿಷಯ ಬಗ್ಗೆ ನಾನ ಮಾತು ಕೂಡ ಆಡಲ್ಲ. ಇಂಡಸ್ಟ್ರಿಯಲ್ಲಿ ಇನ್ನು ಹಲವಾರು ವಿಷಯಗಳಿವೆ, ಅದನ್ನ ಕೇಳಿ ಹೇಳ್ತಿನಿ. ಆದರೆ ಡ್ರಗ್ಸ್ ಮಾಫಿಯಾ ಬಗ್ಗೆ ನನಗೇನು ಕೇಳಬೇಡಿ.”

rachita ram talks about drugs mafiya

“ಅನ್ ವಾಂಟೆಡ್ ಪ್ರಶ್ನೆಗಳನ್ನ ಅಂದರೆ ಆ ಪ್ರಶ್ನೆಗಳು  ನನ್ನ ಜೀವನಕ್ಕೆ ಹಾಗೂ ನನ್ನ ಕರೀಯರ್ ಗೆ ಸಂಬಂಧ ಇಲ್ಲದೇ ಇದ್ರೆ ನಾನು ಅದರ ಬಗ್ಗೆ ಮಾತನಾಡುವುದಿಲ್ಲ. ನಾನ ಅಷ್ಟೇ ಅಲ್ಲ, ಇಂಡಸ್ಟ್ರಿಯಲ್ಲಿ ಯಾರೂ ಸಂಬಂಧ ಇಲ್ಲದೇ ಇರುವ ಪ್ರಶ್ನೇಗಳಿಗೆ ಉತ್ತರಿಸುವುದಿಲ್ಲ. ನನ್ನ ಬಗ್ಗೆ ಕೇಳಿ, ನನ್ನ ಜೀವನದ ಬಗ್ಗೆ ಕೇಳಿ ಅಥವಾ ನನ್ನ ಕರೀಯರ್ ಬಗ್ಗೆ ಕೇಳಿ ಹೇಳ್ತಿನಿ. ನೀವು ಕೇಳ್ತಾ ಇರೋ ಪ್ರಶ್ನೇ ಬಗ್ಗೆ ನನಗೆ ಇಂಟರೆಸ್ಟ್ ಇಲ್ಲ. ನನಗೆ ಅದರ ಬಗ್ಗೆ ಮಾತನಾಡುವುದಕ್ಕೆ ನಾನು ಇಷ್ಟ ಪಡುವುದಿಲ್ಲ.” ಎಂದು ಮಾದ್ಯಮದವರ ಮೇಲೆ ಬಡಕಿದ್ದಾರೆ.

ಇನ್ನೂ ಹೆಚ್ಚು ಕನ್ನಡ ನ್ಯೂಸ್ ಓದಲು ನೋಡುಮಗ.ಕಂ ಫೇಸ್ಬುಕ್ ಪೇಜ್ ಲೈಕ್ ಮಾಡಿ -->>

(Visited 24 times, 1 visits today)

You Might Be Interested In