ಡ್ರೋನ ಪ್ರತಾಪ ಹೇಳಿದ್ದು ನೀಜನಾ? ಅಥವಾ ಸುಳ್ಳಾ?

ಹೇಗೆ ಚೆನ್ನಾಗಿ ಮಾತಾಡಿ ಜನರನ್ನು ಮೂರ್ಖರನ್ನಾಗಿ ಮಾಡಬೇಕು ಎನ್ನುವುದನ್ನು ಡ್ರೋನ ಪ್ರತಾಪ ಎಂದು ಗುರುತಿಸಲ್ಪಟ್ಟ ಈ ಹುಡುಗನನ್ನ ನೋಡಿ ಕಲಿಯಬೇಕು. ಕೇವಲ ೨೩ ವರ್ಷದ ಈತ ಹೇಗೆ ಕಾಗೆ ಹಾರಿಸಿದ್ದಾನೆಂದರೆ, ಇವನ ಮಾತಿಗೆ ಚಾತುರ್ಯಕ್ಕೆ ದೊಡ್ಧ ದೊಡ್ಡ ದಿಗ್ಗಜರು ಮೋಸ ಹೋಗಿ ಇತನಿಗೆ

ಧನ ಸಹಾಯ ಅಥವಾ ಸನ್ಮಾನ ಮಾಡಿದ್ದಾರೆ. ಅಷ್ಟಕ್ಕೆ ನಿಂತಿಲ್ಲ, ಈತನ ಆಡಿದ ಮಾತುಗಳಿಗೆ ಬೆರಗಾಗಿ ಟಿವಿ ಶೋ ಗಳಲ್ಲಿ, ಶಾಲಾ ಕಾಲೇಜಗಳಲ್ಲಿ ಇತರರಿಗೆ ಸ್ಪೂರ್ತಿ ನೀಡಲು ಪ್ರತಾಪನನ್ನು ಬಾಷಣ ಮಾಡಲು ಕರೆಸುತ್ತಿದ್ದರು.

ಡ್ರೋನ ಪ್ರತಾಪ ತನ್ನ ಬಡತನದ ಬಗ್ಗೆ ಕಟ್ಟುಕತೆ ಹೇಳಿದ್ದ. ಹಾಗೆಯೇ ತಾನು ಟಿವಿ ಮತ್ತು ಮಿಕ್ಸರ್/ಗ್ರೈಂಡರ್ ನ ಬಿಡಿ ಬಾಗ ಗಳನ್ನು ಉಪಯೋಗಿಸಿ ಡ್ರೋನ ತಯಾರಿಸಿದ್ದೆನೆ ಎಂದು ಹೇಳಿದ್ದ. ಆದರೆ ಇದಕ್ಕೆ ಯಾವುದೆೇ ಪುರಾವೆಗಳನ್ನು ನೀಡಿಲ್ಲ.

drone pratap on BTV

ಪ್ರತಾಪ ಮಾಡಿದ ಮೋಸಗಳನ್ನು ತಿಳಿದ ಜನರು, ಆತನ ವಿರುದ್ದ ರೊಚ್ಚಿಗೆದ್ದಿದ್ದಾರೆ. ಆತ ನಿಜವಾಗಲು ಡ್ರೋನ ತಯಾರಿಸಿದ್ದೆಯಾದರೆ, ಅದಕ್ಕೆ ತಕ್ಕ ಪುರಾವೆಗಳನ್ನು ತೋರಿಸಿ ಎಂದು ಜನ ಅವನನ್ನು ಕೇಳುತ್ತಿದ್ದಾರೆ. ಅದಕ್ಕಾಗಿ ಚಾನೆಲ್ ಗಳು ಪ್ರತಾಪನನ್ನು ಸಂಪರ್ಕಿಸಲು ತುಂಬಾ ಪ್ರಯತ್ನಿಸಿದರೂ, ಪ್ರತಾಪನ ಸುಳಿವೆ ಸಿಕ್ಕಿರಲಿಲ್ಲ.  ಕೊನೆಗೂ, ನಿನ್ನೆ ಬಿಟಿವಿಯಲ್ಲಿ ಈತ ಪ್ರತ್ಯಕ್ಷನಾದ. ಆಮೇಲೆ ನಡಿದಿದ್ದೆ ಬೇರೆ. ನಿರ್ವಾಕರು ಕೇಳಿದ ಪ್ರಶ್ನೆಗಳಿಗೆ ಪ್ರತಾಪ ಕಂಗಾಲಾಗಿದ್ದ. ಚಾನೆಲ್ ಎಂದರೆ ಸುಮ್ನೆನಾ, ಪ್ರತಾಪ ಇನ್ನೊಮ್ಮೆ ಸುಳ್ಲೇ ಹೇಳದ ಹಾಗೆ, ಪ್ರತಾಪ ಮಾಡಿದ ಬಾಷಣದ ಕ್ಲಿಪಗಳನ್ನು ಸಂಗ್ರಹಿಸಿ ಅದಕ್ಕೆ ತಕ್ಕ ಉತ್ತರ ಕೊಡಲು ಹೇಳಿದರು.

ಪ್ರತಾಪ ತನ್ನ ಬಾಷಣದಲ್ಲಿ ಹೇಗೆ ಕಥೆ ಹೇಳಿದ್ದನೆಂದರೆ. ಒಂದು ಬುಡಕಟ್ಟು ಜನಾಂಗದ ಒಂದು ಹುಡುಗಿಗೆ ವಿಷಪೂರಿತ ಹಾವು ಕಚ್ಚಿತ್ತಂತೆ, ಆ ಹಾವಿನ ವಿಷ ಹೇಗೆಂದರೆ, ಕಚ್ಚಿದ ಕೆಲವೆ ಕ್ಷಣಗಳಲ್ಲಿ ಜೀವ ಹೋಗುತ್ತದೆಯಂತೆ. ಆಗ ಆ ಬುಡಕಟ್ಟು ಜನಾಂಗ ತಮ್ಮ ದೇಶದ ಸರ್ಕಾರಕ್ಕೆ ಹುಡುಗಿಯನ್ನು ಬದುಕಿಸಲು ಸಹಾಯ ಮಾಡಿ ಎಂದು ಮನವಿ ಮಾಡಿದ್ರಂತೆ. ಆಗ ಆ ದೇಶದ ಸರ್ಕಾರ ಪ್ರತಾಪನ ತಂಡಕ್ಕೆ ಕಾರ್ಯವನ್ನು ಕೊಟ್ಟರಂತೆ. ಪ್ರತಾಪ ಬಾಷಣದಲ್ಲಿ ಹೇಳುವ ಪ್ರಕಾರ ೧೦ ಗಂಟೆ ಪ್ರಯಾಣ ಮಾಡುವಂತಹ ಜಾಗಕ್ಕೆ, ಕೆವಲ ೯ ಅಥವಾ ೧೦ ನಿಮಿಷಗಳಲ್ಲಿ ಡ್ರೋನ ಮುಖಾಂತರ ಔಷಧಿಯನ್ನ ರವಾನಿಸದರಂತೆ. ಇದನ್ನ ಪ್ರಶ್ನಿಸಿದ ನಿರ್ವಾಹಕರಿಗೆ, ಪ್ರತಾಪ ಉತ್ತರಿಸಲು ತಡವರಿಸಿದ, “ನಾನು ಮಾತಿನ ಬರದಲ್ಲಿ ಸಂಖ್ಯೆಗಳನ್ನು ತಪ್ಪಾಗಿ ಹೇಳಿರಬಹುದು”  ಎಂದು  ನಮ್ಮ ಯುವವಿಜ್ಞಾನಿ ಪ್ರತಾಪ ಹೇಳುತ್ತಾರೆ.

ಮತ್ತೆ ಪ್ರತಾಪ ತಮ್ಮ ಬಾಷಣದಲ್ಲಿ ಹೇಳ್ತಾರೆ, ಅವರು Kennedy Space Center ಫ್ಲೋರಿಡದಲ್ಲಿ ಲೆಕ್ಚರಿಂಗ ಕೊಟ್ಟಿದ್ದರಂತೆ. ಅದನ್ನು ಪ್ರಶ್ನಿಸಿದಾಗ “ಇಲ್ಲಾ, ನಾನು ಲೆಕ್ಚರಿಂಗ ಕೊಟ್ಟಿಲ್ಲ, ನಾನು ನನ್ನ ಡ್ರೋನನ ಪ್ರದರ್ಶನಕ್ಕೆ ಹೊಗಿದ್ದೆ” ಅಂತ ಹೇಳುತ್ತಾರೆ. ಲೆಕ್ಚರಿಂಗ ಮತ್ತು ಪ್ರೊಜೆಕ್ಟ ಪ್ರದರ್ಶನಕ್ಕೂ ತುಂಬಾ ವ್ಯತ್ಯಾಸವಿದೆ. ಅಷ್ಟಕ್ಕೆ ನಿಲ್ಲದ ಪ್ರತಾಪ, ತನಗೆ ೩ ದೇಶಗಳಿಂದ gold medals, ೪ ದೇಶಗಳಿಂದ young scientist awards ಕೊಟ್ಟಿದೆಯಂತೆ, ಮತ್ತು ರಾಜ್ಯ ಸರ್ಕಾರ ಧನ ಸಹಾಯ & ಸಂಶೋಧನೆಗಾಗಿ ಸ್ಥಳವನ್ನು ಕೋಡುವುದಾಗಿ ಹೇಳಿತ್ತು ಆದರೆ ಎನು ಸಿಕ್ಕಿಲ್ಲ ಎಂದು ಪ್ರತಾಪ ಹೇಳಿದ್ದ. ನಮಗೆಲ್ಲ ತಿಳಿದ ಹಾಗೆ awards ಅನ್ನೊದು ತುಂಬಾ ಮಹತ್ವವಾದದ್ದು, ಅಷ್ಟು ಬೇಗನೆ ಸಿಗುವಂತದಲ್ಲ.” ನಿನಗೆ ಯಾವ್ಯಾವ ದೇಶಗಳಿಂದ, ಯಾವ್ಯಾವ awards ಬಂದಿದೆ? ಅದಕ್ಕೆ ಪುರಾವೆಗಳನ್ನು ತೊರಿಸ್ತಿರಾ” ಅಂತ ಕೇಳಿದ್ರೆ, ಆವಾಗ ನಮ್ಮ ಡ್ರೋನ ಪ್ರತಾಪ ಏನು ಹೇಳಿದ್ರು ಅಂದ್ರೆ “ನನಗೆ awards  ಅಲ್ಲಾ, young scientist ಅಂತ ಗುರುತಿಸಿದ್ದಾರೆ.” ಅಂತ. ಹೋಗ್ಲಿ ಎನಾದ್ರು ಪುರಾವೆ ತೋರಿಸು ಅಂದ್ರೆ, ಇಲ್ಲಾ ನಂಗೆ ಸರ್ಟಿಫಿಕೆಟ್ ಕೊಟ್ಟಿಲ್ಲ, ಮೇಲ್ ಮಾಡಿದ್ದಾರೆ. ಗೌಪ್ಯ ಒಪ್ಪಂದ ಆಗಿರುವುದರಿಂದ, ಮೇಲ್ ತೋರಿಸಲಾಗುವುದಿಲ್ಲ ಅಂತ ಹೇಳ್ತಾರೆ ನಮ್ಮ ಯುವ ವಿಜ್ಞಾನಿ.

drone pratap on BTV 2

ಲೈವ ಟೆಲಿಕಾಸ್ಟನಲ್ಲಿ ಪ್ರತಾಪ ಇಷ್ಟೆಲ್ಲ ಕಾಗೆಗಳನ್ನು ಹಾರಿತ್ತಿರುವಾಗ, ಜಪಾನನಿಂದ ಪ್ರತಾಪನ ಒಬ್ಬ ಸ್ನೇಹಿತ ದರ್ಶನನಿಂದ ಕರೆ ಬರುತ್ತೆ, ಆ ಕರೆಯಲ್ಲಿ ದರ್ಶನ ಅವರು ತುಂಬಾ ಬೆಸಿಕ್ ಪ್ರಶ್ನಗಳನ್ನು ಕೇಳಿದರು. ದರ್ಶನ ಒಬ್ಬ ಎರೋಸ್ಪೇಸ್ ರಿಸರ್ಚರ್ ಆಗಿದ್ದು, ಅವರಿಗೆ ಡ್ರೋನ ತಯಾರಿಸುವ ಬಗ್ಗೆ ಚೆನ್ನಾಗಿ ತಿಳಿದೆ ಇರುತ್ತೆ. ದರ್ಶನ ಕೇಳಿದ ಯಾವುದೇ ಪ್ರಶ್ನೆಗಳಿಗೂ, ಸರಿಯಾದ ಉತ್ತರ ಕೊಡಲಿಲ್ಲ. ದರ್ಶನ ಅವರ ಸುಮಾರು ಪ್ರಶ್ನೆಗಳಿಂದ ತಬ್ಬಿಬ್ಬಾದ ಪ್ರತಾಪ “ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಡಲು ಇದು ಸರಿಯಾದ ಸಮಯವಲ್ಲ” ಅಂತ ಹೇಳುತ್ತಾರೆ.

ಪ್ರತಿಯೊಬ್ಬರು ತಮ್ಮ ಪ್ರತಿಭೆಯನ್ನು ತೋರಿಸಲು ಸಮಯ ಮುಖ್ಯವಾದದ್ದು. ಆದರೆ ಪ್ರತಾಪ ಅವರಿಗೆ ಕೇಳಿದ ಪ್ರಶ್ನೆಗಳಿಗೆಲ್ಲ ಈ ಸಮಯ ಸರಿ ಅಲ್ಲ ಅಂತ ಹೇಳ್ತಾರೆ. ಹಾಗೆ ದರ್ಶನ ಕೇಳಿದ ಪ್ರಶ್ನೆಗಳಿಗೆ ಮೇಲ್ ಮಾಡುತ್ತೆನೆ ಎಂದ ಪ್ರತಾಪ, ಮೇಲ್ ಮಾಡುತ್ತಾರೋ ಇಲ್ಲವೋ ಎಂದು ಕಾದು ನೋಡಬೇಕಾಗಿದೆ.

ಇಷ್ಟೇ ಅಲ್ಲ, ಪ್ರತಾಪ ಅವರ ಹೇಳಿಕೆಗಳಲ್ಲಿ ಅತ್ಯಂತ ದೊಡ್ಡ ಹೇಳಿಕೆಯೆಂದರೆ, ೩೬೦ ಕೆಜಿ ಭಾರವಾದ ತಮ್ಮ ಪ್ರೋಜೆಕ್ಟಗಳನ್ನು ಹೊತ್ತು ಹೊಗಿದ್ದರಂತೆ. ಈ ಹೇಳಿಕೆಯಿಂದಾಗಿ ಪ್ರತಾಪ ಅವರು ಟ್ರೋಲ್ ಆಗಿದ್ದಾರೆ. ಹೇಗೆ ಅಷ್ಟು ಭಾರ ಹೊತ್ತುಕೊಂಡ ಹೋದ್ರಿ ಅಂತ ಕೇಳಿದ್ರೆ, ಪ್ರತಾಪ ಅವರ ಉತ್ತರ ನಂಬಲು ಅಸಾಧ್ಯ. “೩೬೦ ಕೆಜಿ ಪ್ರೋಜೆಕ್ಟಗಳನ್ನು ೧೫ ಬಾಕ್ಸಗಳಲ್ಲಿ ತುಂಬಿ, ಮೂರು ಮೂರು ಬಾಕ್ಸಗಳಂತೆ ಪ್ರದರ್ಶನ ಸ್ಥಳಕ್ಕೆ ಸಾಗಿಸಲು ೩ ದಿನ ತೊಗೊಂಡೆ” ಎಂದು ಧೈರ್ಯದಿಂದ ಹೇಳುತ್ತಾರೆ ಪ್ರತಾಪ. ಇದನ್ನು ನಂಬಬೇಕೋ ಬೇಡವೋ!! ಇದು ಎಷ್ಟು ಸತ್ಯ ಎಂದು ನಮಗೆ ಅರ್ಥವಾಗ್ತಿಲ್ಲ.

Drone pratap medals

ಡ್ರೋನ ಪ್ರತಾಪ ತನಗೆ ಸುಮಾರು medalಗಳು ಸಿಕ್ಕಿವೆ ಅಂತ ಹೇಳಿದ್ರು. ಅದಕ್ಕೆ medal ಸಿಕ್ಕಿರುದಾಗೆ ಪುರಾವೆ ಕೇಳಿದಾಗ, ಇಷ್ಟು ದಿನ ಎಷ್ಟೇ ಟ್ರೋಲ್ ಆದ್ರು, ಎಷ್ಟೇ ಜನ ನಿಂದಿಸಿದರೂ, medal ಗಳ ಚಿತ್ರಗಳನ್ನ ತೋರಿಸದ ಪ್ರತಾಪ. ಧೀಡಿರ್ ಅಂತ ಚಾನೆಲ್ ನಲ್ಲಿ ಪ್ರತ್ಯಕ್ಷವಾಗಿ ಈವಾಗ ಪ್ರತಾಪ medal ಗಳ ವಿಡೀಯೋ ಮಾಡಿ ತೋರಿಸುತ್ತಿದ್ದಾರೆ. ಈ medalಗಳು ನಿಜವಾದದ್ದೋ ಇಲ್ಲವೋ ಕಾದು ನೋಡಬೇಕಾಗಿದೆ.

ಹೀಗೆ ಡ್ರೋನ ಪ್ರತಾಪ ಒಂದರ ಮೇಲೊಂದು ಕಾಗೆ ಹಾರಿಸಿ ಜನರನ್ನ ಮೋಸ ಮಾಡುತ್ತಿದ್ದಾನೆ. ಚಾನೆಲ್ ನಲ್ಲಿ ಕೇಳಿದ ಯಾವುದೇ ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಡದ ಪ್ರತಾಪನನ್ನು ನಂಬುವುದು ಹೇಗೆ ಸಾಧ್ಯ!! ತನ್ನ ಬಾಷಣದಲ್ಲಿ ಹೀಗೆ ಇಲ್ಲಸಲ್ಲದನ್ನು ಹೇಳಿರುವುದರ ಬಗ್ಗೆ ಕೇಳಿದರೆ, ಮಾತಿನ ಬರದಲ್ಲಿ ಕೆಲವು ಹೇಳಿಕೆಗಳನ್ನ ತಪ್ಪಾಗಿ ಹೇಳಿರುವುದಾಗಿ ಒಪ್ಪಿಕೊಳ್ಳುತ್ತಾರೆ ಪ್ರತಾಪ.

ಅದಕ್ಕಾಗಿ ದೊಡ್ಡವರು ಹೇಳಿರುವುದು “ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು” ಅಂತ, ಯಾವುದೇ ಹೇಳಿಕೆಗಳನ್ನ ಕೊಡುವಾಗ, ಯೋಚಿಸಿ ಮಾತನಾಡುವುದು ಉತ್ತಮ. ಚಾನೆಲ್ ನಲ್ಲಿ ಕೇಳಿದ ಪ್ರಶ್ನೆಗಳಿಗೆ ನಿಖರವಾದ ಉತ್ತರಗಳಿಲ್ಲದೆ ಜನರು ಗೊಂದಲಕ್ಕೊಳಗಾಗಿದ್ದಾರೆ. ಇನ್ನು ಎಷ್ಟರ ಮಟ್ಟಿಗೆ ಪ್ರತಾಪನನ್ನು ನಂಬಬೇಕು ಎಂಬುದನ್ನ ಜನರಿಗೆ ಬಿಟ್ಟಿದ್ದು.

(Visited 178 times, 1 visits today)

You Might Be Interested In

LEAVE YOUR COMMENT

Your email address will not be published. Required fields are marked *