ಆ ಮನುಷ್ಯ ನಿಜವಾಗಿಯೂ ಚಿರು ಆತ್ಮದ ಜೊತೆ ಮಾತನಾಡಿದ್ದಾನಾ? ಇಲ್ಲಿದೆ ಉತ್ತರ

ಚಿರಂಜೀವಿ ಸರ್ಜಾ ಅವರು ನಿಧನರಾಗಿ ಅನೇಕ ದಿನಗಳು ಕಳೆದಿದೆ,  ಮೊನ್ನೆ ಮೊನ್ನೆ ಚಿರು ಅವರ ಆತ್ಮ ಮಾತನಾಡುತ್ತಿದೆ ಅನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಬಿತ್ತರವಾಗುತ್ತಿದ್ದು ನೀವು ಕೂಡ ಅದನ್ನು  ಕೇಳಿರುತ್ತೀರಿ. ಇನ್ನು ಆ ವಿಡಿಯೋ ನೋಡಿದ ಅದೆಷ್ಟೋ ಜನರಿಗೆ ಒಂದು ಕ್ಷಣ ಶಾಕ್ ಆಗಿತ್ತು, ಇನ್ನು ಇದನ್ನ ನೋಡಿದ ಕೆಲವರಿಗೆ ಇದು ನಿಜಾನಾ ಅಥವಾ ಸುಳ್ಳಾ ಅನ್ನುವ ಪ್ರಶ್ನೆ ಮೂಡಿತ್ತು. ಈಗ ಜನರಲ್ಲಿ ಮೂಡಿರುವ ಈ ಪ್ರಶ್ನೆಗೆ ರಾಷ್ಟ್ರ ಪ್ರಶಸ್ತಿ ವಿಜೇತ ಹುಲಿಕಲ್ ನಟರಾಜ್ ಅವರು ಸ್ಪಷ್ಟನೆ ಕೊಟ್ಟಿದ್ದಾರೆ.

ಇತ್ತೀಚಿಗೆ ವಿದೇಶಿ ಪ್ಯಾರಾ ನಾರ್ಮಲ್ ತಜ್ಞರೊಬ್ಬರು ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಹಾಕಿದ ಚಿರು ಆತ್ಮ ಮಾತನಾಡುವ ವಿಡಿಯೋ ತುಂಬಾ ವೈರಲ್ ಆಗಿತ್ತು. ಈ ವಿಡಿಯೋ ಬಗೆಗಿನ ಕೆಲವು ಸತ್ಯವನ್ನ ಶಿಕ್ಷಕ ಹುಲಿಕಲ್ ನಟರಾಜ್ ಅವರು ಹೇಳಿದ್ದಾರೆ.

ಆ ಯಂತ್ರದಲ್ಲಿ ಕೆಲವು ಧ್ವನಿಗಳು ಹೊರಬರುತ್ತಿದ್ದವು ಮತ್ತು ಆ ಶಬ್ದಗಳನ್ನ ಆತ್ಮಗಳ ಧ್ವನಿ ಎಂದು ಆ ತಜ್ಞ ಬಿಂಬಿಸಿದ್ದ. ಈಗ ಇದರ ಸತ್ಯಾಸತ್ಯತೆಯನ್ನ ಬಯಲಿಗೆಳೆದಿರುವ ಹುಲಿಕಲ್ ನಟರಾಜ್ ಅವರು ಇದೊಂದು ಎಲೆಕ್ಟ್ರಾನಿಕ್ ಉಪಕರಣ ಮತ್ತು ನಾವು ಅದರ ಮುಂದೆ ಮಾತನಾಡಿದರೆ ಅದೂ ನಮ್ಮ ಮಾತನ್ನ ರೆಕಾರ್ಡ್ ಮಾಡಿಕೊಂಡು ಬೇರೊಂದು ಧ್ವನಿಯಲ್ಲಿ ಅರ್ಥವಾಗದ ರೀತಿಯಲ್ಲಿ ಶಬ್ದವನ್ನ ಹೊರಡಿಸುತ್ತದೆ ಮತ್ತು ಇಂತಹ ಶಬ್ದವನ್ನೇ ಆ ತಜ್ಞ ಆತ್ಮದ ಧ್ವನಿ ಎಂದು ಜನರನ್ನ ನಂಬಿಸಿದ್ದಾನೆ ಮತ್ತು ಮೂರ್ಖರನ್ನಾಗಿ ಮಾಡುತ್ತಿದ್ದಾನೆ ಎಂದು ಹುಲಿಕಲ್ ನಟರಾಜ್ ಹೇಳಿದ್ದಾರೆ

ಚಿರು ಆತ್ಮ ಮಾತ್ರವಲ್ಲದೆ ಈತ ಕೆಲವು ದಿನಗಳ ಹಿಂದೆ ಸುಶಾಂತ್ ಸಿಂಗ್ ರಾಜಪುತ್ ಅವರ ಆತ್ಮದ ಜೊತೆ ಕೂಡ ನಾನು ಮಾತನಾಡಿದ್ದೇನೆ ಎಂದು ವಿಡಿಯೋ ಮೂಲಕ ತೋರಿಸಿದ್ದ, ಹುಲಿಕಲ್ ನಟರಾಜ್ ಅವರು ಈ ಮೋಸದ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನ ಕೊಟ್ಟಿದ್ದು ಇದೊಂದು ಸುಳ್ಳು ಮತ್ತು ಯಾರು ಕೂಡ ಆತ್ಮದ ಜೊತೆ ಮಾತನಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ

(Visited 1109 times, 1 visits today)

Share and Enjoy !

You Might Be Interested In