ರೊನಾಲ್ಡೊ ಹೇಳಿದ ಆ ಒಂದು ಮಾತಿಗೆ ಕೋಕೋ ಕೋಲಾಗೆ 29000 ಕೋಟಿ ನಷ್ಟ

ಯೂರೋ 2020 ಟೂರ್ನಿಯ ಮೊದಲ ಪಂದ್ಯ ಆಡುವ ಮುನ್ನ ಪೋರ್ಚುಗಲ್ ತಂಡದ ಫುಟ್ಬಾಲ್‌ ಮಾಂತ್ರಿಕ ಕ್ರಿಸ್ಟಿಯಾನೊ ರೊನಾಲ್ಡೋ ಪ್ರೆಸ್ ಕಾನ್ಫರೆನ್ಸ್‌ ವೇಳೆ ತಂಪು ಪಾನೀಯ ಕೋಕಾ ಕೋಲಾ ಬಾಟಲಿಗಳನ್ನು ದೂರವಿಟ್ಟು, ನೀರು ಕುಡಿಯಿರಿ ಎಂದು ಹೇಳಿದ ವಿಡಿಯೋ ವೈರಲ್ ಆಗಿದೆ..

ಮಾಧ್ಯಮ ಭೇಟಿಯ ವೇಳೆ ಟೇಬಲ್‌ ಮೇಲಿದ್ದ ಎರಡು ಕೋಕಾ ಕೋಲಾ ಬಾಟಲಿಯನ್ನು ದೂರವಿಟ್ಟು, ನೀರು ಎಂದಷ್ಟೇ ಹೇಳಿದ್ದಾರೆ, ಇದರ ಅರ್ಥ ಕೋಕಾ ಕೋಲಾ ಬದಲು ನೀರು ಕುಡಿಯಿರಿ ಆರೋಗ್ಯ ಕಾಪಾಡಿಕೊಳ್ಳಿ ಎನ್ನುವುದು ಗೊತ್ತಾಗುತ್ತದೆ.

ಆದರೆ ಇವರ ಈ ಒಂದು ಮಾತು ಕೋಕೋ ಕೋಲಾ ಕಂಪನಿ ಗೆ ನುಂಗಲಾರದ ತುತ್ತಾಗಿದೆ. ಆ ಒಂದು ಮಾತಿನಿಂದ ಕೋಲಾ ಕಂಪನಿಗೆ ಷೇರುಪೇಟೆಯಲ್ಲಿ 29000 ಕೋಟಿ ನಷ್ಟ ಉಂಟಾಗಿದೆ ಎಂದು ವರದಿಯಾಗಿದೆ

ಯೂರೋ 2020 ಟೂರ್ನಿಗೆ ಕೋಕಾ ಕೋಲಾ ಕಂಪನಿ ಕೂಡಾ ಸಹಾ ಪ್ರಾಯೋಕತ್ವ ನೀಡಿದೆ. ರೊನಾಲ್ಡೋ ಅವರ ಈ ನಡೆಗೆ ಯೂರೋಪಿನ್ ಫುಟ್ಬಾಲ್ ಚಾಂಪಿಯನ್‌ಶಿಪ್‌ ಆಯೋಜಕರು ಯಾವ ಕ್ರಮ ತೆಗೆದುಕೊಳ್ಳಲಿದ್ದಾರೆ ಎನ್ನುವ ಕುತೂಹಲ ಜೋರಾಗಿದೆ.

ಇದೇ ವೇಳೆ ಯುವೆಂಟಸ್ ತಂಡ ತೊರೆದು ಮ್ಯಾಂಚೆಸ್ಟರ್ ಯುನೈಟೆಡ್ ತಂಡ ಸೇರಲಿದ್ದಾರೆ ಎನ್ನುವ ಗಾಳಿ ಸುದ್ದಿಗೂ ರೊನಾಲ್ಡೋ ಎಳೆದಿದ್ದಾರೆ.

(Visited 195 times, 1 visits today)

You Might Be Interested In

LEAVE YOUR COMMENT

Your email address will not be published. Required fields are marked *