ಕನ್ನಡಿಗರ’ ಕ್ಷಮೆ ಕೋರಿದ ‘ಕಾಮಿಡಿ ಕಿಲಾಡಿಗಳು’ ನಯನಾ | Nodumaga

ಎಲ್ಲರಿಗೂ ನಮಸ್ಕಾರ ಈ ವೀಡಿಯೋ ಅಪ್ಪಟ ಕನ್ನಡ ಅಭಿಮಾನಿಗಳಿಗೆ….. ಈ ಮುಂಚೆ ನಾನು ಕನ್ನಡದಲ್ಲಿ ಸಾಲುಗಳನ್ನ ಹಾಕಿದಾಗ ಒಬ್ಬ ವ್ಯಕ್ತಿ ಅವ್ಯಾಚ್ಯ ಶಬ್ದ ಬಳಕೆ ಮಾಡಿದರು ನಿನಗೆ ಕೊಬ್ಬು ದುರಂಕರ ಅಂತ ಅದನ್ನ ಒಂದಷ್ಟು ಜನ ದುರುಪಯೋಗ ಪಡಿಸಿಕೊಂಡು ಅವರುಗಳು ಕೂಡ ಕೆಟ್ಟ ಪದಬಳಕೆ ಮಾಡಿದ್ದರೂ,, ನಾನು ಯಾವುದೇ ಪೋಸ್ಟ್ ಹಾಕಿದರು ಕೂಡ ಆ ತರಹದ ನೆಗೆಟಿವ್ ಕಾಮೆಂಟ್ ಗಳು ಬರುತ್ತಿದ್ದವು ನಾನು ತುಂಬಾ ದಿನಗಳಿಂದ ಗಮನಿಸುತ್ತಾ ಇದ್ದೆ.

ನನ್ನ ತಾಳ್ಮೆಗೂ ಮಿತಿಯಿದೆ ಅಲ್ಲವೆ ನಾನು ಆ ವ್ಯಕ್ತಿಗೆ ಅದನ್ನು ಹೇಳಿರುವುದೆ ವಿನಹ ಅವರು ಕನ್ನಡದ ಅಭಿಮಾನಿ ಎಂದು ಅಥವಾ ಕನ್ನಡ ಭಾಷೆ ಬಗ್ಗೆಯಾಗಲಿ ನಾನು ಮಾತನಾಡಲಿಲ್ಲ,, ನಾನು ಎಲ್ಲಿಯೂ ಯಾವುದೇ ಕಾರ್ಯಕ್ರಮಗಳಲ್ಲಿಯೂ ಕೂಡ ಕನ್ನಡ ಭಾಷೆ ಕನ್ನಡದ ಅಭಿಮಾನಗಳ ಬಗ್ಗೆ ಕೀಳಾಗಿ ಮಾತನಾಡಿದವಳು ಅಲ್ಲಾ ,,

ನಮ್ಮ ಕನ್ನಡವನ್ನು ಎಲ್ಲಾ ಕಡೆಯೂ ನಾವು ಬೆಳೆಸಬೇಕು ಅನ್ನೊ ಕೆಲಸ ಮಾಡಬೇಕೆ ಹೊರೆತು ವ್ಯಕ್ತಿಗೆ ಹೇಳಿದನ್ನ ಕನ್ನಡ ಭಾಷೆಗೆ ಹೇಳಿದೀನಿ ಎಂದು ಹೇಳುವುದು ತಪ್ಪಾಗಿ ಕಾಣಿಸುತ್ತೆ .. ಆದರೆ ಕೆಲವರು ಕನ್ನಡ ಅಭಿಮಾನಿಗಳು ಎಂದು ಹೇಳಿ ಒಬ್ಬ ಹೆಣ್ಣಿಗೆ ಉಪಯೋಗಿಸಿರುವ ಪದಬಳಕೆ ಮೇಲೆ ಕೂಡ ಗಮನವಿರಲಿ ಅದರಲ್ಲಿ ನಿಮ್ಮ ವ್ಯಕ್ತಿತ್ವವನ್ನು ತೋರಿಸುತ್ತದೆ .

ಅಪ್ಪಟ ಅಭಿಮಾನಿಗಳಿಗೆ ಮಾತ್ರ ಕ್ಷಮೆ ನಾನೂ ಕನ್ನಡ ಶಾಲೆಯಲ್ಲಿ ಓದಿರೋದ್ರಿಂದ ಅದರ ಮೇಲೆ ಅಭಿಮಾನ ಮತ್ತು ಅಧಿಕಾರವಿದೆ. ಮತ್ತೊಮ್ಮೆ ಕ್ಷಮೆ ಕೇಳುತ್ತೇನೆ, ಕನ್ನಡದ ಅಪ್ಪಟ ಅಭಿಮಾನಿಗಳಿಗೆ ಮಾತ್ರ. ನನ್ನ ಕಡೆಯಿಂದ ತಪ್ಪಾಗಿದ್ದರೆ ಕ್ಷಮಿಸಬೇಕು. ಯಾರೆಲ್ಲ ಕಾಮೆಂಟ್ ಸೆಕ್ಷನ್‌ನಲ್ಲಿ ಅವಾಚ್ಯ ಶಬ್ಧಗಳಿಂದ ರಿಪ್ಲೈ ಮಾಡಿದ್ದೀರಿ, ಅಂತಹವಳು ಇಂತಹವಳು ಎಂದಿದ್ದೀರಿ. ಅಂತಹವರಿಗೆಲ್ಲ ಉತ್ತರ ನೀಡಲೆಂದೇ ಒಬ್ಬರು ಸಹಾಯ ಮಾಡುವುದಾಗಿ ಹೇಳಿದ್ದಾರೆ. ಅದನ್ನು ಅವರು ನೋಡಿಕೊಳ್ಳುತ್ತಾರೆ. ಆ ಧೈರ್ಯದಿಂದಲೇ ವಿಡಿಯೋ ಮಾಡಿ ಹೇಳುತ್ತಿದ್ದೇನೆ. ನಿಮ್ಮ ಕಡೆಯಿಂದ ಏನು ತಪ್ಪಾಗಿದೆ ದಯವಿಟ್ಟು ಅದನ್ನು ಅರ್ಥ ಮಾಡಿಕೊಳ್ಳಿ.

ನಮಸ್ಕಾರಗಳೊಂದಿಗೆ ನಯನಶರತ್

(Visited 237 times, 1 visits today)

You Might Be Interested In

LEAVE YOUR COMMENT

Your email address will not be published. Required fields are marked *