ಇಂದು ಪ್ರಾರಂಭಗೊಳ್ಳುವ ವಿಶ್ವ ಟೆಸ್ಟ್ ಚಾಂಪಿಯನ್ ಫೈನಲ್ ಪಂದ್ಯ ಗೆದ್ದವರಿಗೆ ಸಿಗುವ ಬಹುಮಾನದ ಮೊತ್ತ ಎಷ್ಟು ಗೊತ್ತೇ?

ಇಂದು ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ವಿಶ್ವಟೆಸ್ಟ್ ಚಾಂಪಿಯನ್‍ಶಿಪ್ ಟ್ರೋಫಿಗಾಗಿ ಕಾದಾಟ ಆರಂಭವಾಗಲಿದೆ. ಐಸಿಸಿ ಆಯೋಜಿಸುವ ಪ್ರತಿಷ್ಠಿತ ಟೂರ್ನಿಗಳಲ್ಲಿ ಭಾರತ ತಂಡ ಇದುವರಗೆ ನ್ಯೂಜಿಲೆಂಡ್ ತಂಡದ ವಿರುದ್ಧ ಕಳೆದ 18 ವರ್ಷಗಳಿಂದ ಮುಗ್ಗರಿಸಿದೆ. ಈ ಬಾರಿ ಭಾರತ, ನ್ಯೂಜಿಲೆಂಡ್ ವಿರುದ್ಧ ಗೆದ್ದು ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ತವಕದಲ್ಲಿದೆ.

ಭಾರತ ತಂಡ 2003ರಲ್ಲಿ ಐಸಿಸಿಯ ಏಕದಿನ ವಿಶ್ವಕಪ್‍ನಲ್ಲಿ ಕೀವಿಸ್ ತಂಡವನ್ನು ಸೋಲಿಸಿತ್ತು. ಬಳಿಕ 2007, 2016 ಮತ್ತು 2019ರಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತಿದೆ. ಅದರಲ್ಲೂ ನ್ಯೂಜಿಲ್ಯಾಂಡ್ ವಿರುದ್ದದ 2019ರ ಏಕದಿನ ವಿಶ್ವಕಪ್ ಸೆಮಿಫೈನಲ್‍ ಸೋಲು ಅಭಿಮಾನಿಗಳಲ್ಲಿ ಈಗಲೂ ಕಾಡುತ್ತಿದೆ.

virat kohli vs williamson invsnz

12 ಕೋಟಿ ಬಹುಮಾನ
ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್‍ನಲ್ಲಿ ಗೆಲ್ಲುವ ತಂಡ 1.6 ಮಿಲಿಯನ್ ಡಾಲರ್(ಅಂದಾಜು 12 ಕೋಟಿ ರೂಪಾಯಿ) ಬಹುಮಾನವಾಗಿ ಪಡೆದರೆ. ಸೋತ ತಂಡ 6 ಕೋಟಿ ರೂಪಾಯಿ ಪಡೆಯಲಿದೆ. ಒಂದು ವೇಳೆ ಪಂದ್ಯ ಡ್ರಾಗೊಂಡರೆ ಎರಡು ತಂಡಗಳು ಬಹುಮಾನ ಮೊತ್ತವನ್ನು ಸರಿಸಮಾನವಾಗಿ ಹಂಚಿಕೊಳ್ಳಲಿದೆ.

ಐಸಿಸಿ ಟ್ರೋಫಿಗಳ ಮ್ಯಾಚುಗಳಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಈವರೆಗೆ ಒಟ್ಟು 11 ಬಾರಿ ಮುಖಾಮುಖಿಯಾಗಿದೆ. ಇದರಲ್ಲಿ ಭಾರತ 3 ಬಾರಿ ಜಯಗಳಿಸಿದರೆ, ನ್ಯೂಜಿಲೆಂಡ್ 8 ಬಾರಿ ಗೆದ್ದಿದೆ. ಭಾರತ ತಂಡ ಕೀವಿಸ್ ವಿರುದ್ಧ 2003 ಮತ್ತು 1987ರ ಏಕದಿನ ವಿಶ್ವಕಪ್‍ನಲ್ಲಿ ಮಾತ್ರ ಜಯ ಸಾಧಿಸಿದೆ. ಬಳಿಕ ನಡೆದ ಎಲ್ಲಾ ಪಂದ್ಯಗಳಲ್ಲಿ ಸೋಲಿನ ಕಹಿ ಅನುಭವಿಸಿದೆ. ಈ ಎಲ್ಲಾ ಸೋಲಿನ ಸೇಡನ್ನು ಈ ಬಾರಿ ತೀರಿಸುವ ತವಕದಲ್ಲಿ ಭಾರತ ಕಾಯುತ್ತಿದೆ. 

(Visited 1473 times, 1 visits today)

You Might Be Interested In

LEAVE YOUR COMMENT

Your email address will not be published. Required fields are marked *