ಲಂಡನ್ ನಲ್ಲಿ ಹರಡುತ್ತಿರುವ ಕೊರೋನಾ ವೈರಸ್ ಹೊಸ ತಳಿ ಭಾರತದಲ್ಲಿ ಪತ್ತೆಯಾಗಿಲ್ಲ

ಯುನೈಟೆಡ್ ಕಿಂಗ್ಡಮ್ ನ ಕೆಲವು ಭಾಗಗಳಲ್ಲಿ ಹರಡುತ್ತಿರುವ ಕೊರೊನಾವೈರಸ್ ನ ಹೊಸ ತಳಿ ಭಾರತದಲ್ಲಿನ್ನೂ ಪತ್ತೆಯಾಗಿಲ್ಲ ಎಂದು ಸರ್ಕಾರದ ಉನ್ನತ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಈ ಹೊಸ ತಳಿಯು ಹೆಚ್ಚು ಸೋಂಕು ಪೀಡಿತವಾಗಿದೆ ಮತ್ತು 70% ಹೆಚ್ಚು ಹರಡುವ ಸಾಧ್ಯತೆ ಇದೆ ಎಂದು ಯುಕೆಯ ತಜ್ಞರು ವಾರಾಂತ್ಯದಲ್ಲಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತವೂ ಸೇರಿದಂತೆ 40 ಕ್ಕೂ ಹೆಚ್ಚು ರಾಷ್ಟ್ರಗಳು ವಿಮಾನ ಹಾರಾಟದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ.

‘ಇದು ಕೇವಲ ಮುನ್ನೆಚ್ಚರಿಕೆ ಯ ಕ್ರಮವಷ್ಟೇ. ಭಾರತದಲ್ಲಿ ಈ ಸಮಸ್ಯೆ ಕಂಡು ಬಂದಿಲ್ಲ’ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಖಚಿತಪಡಿಸಿದ್ದಾರೆ.

ಸಾಂಕ್ರಾಮಿಕ ರೋಗ ಮತ್ತು ಸಾಂಕ್ರಾಮಿಕ ರೋಗಗಳ ಮುಖ್ಯಸ್ಥ ಡಾ.ಸಮೀರನ್ ಪಾಂಡಾ, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಸಹ ಈ ಬಗ್ಗೆ ಮಾತನಾಡಿ, ‘ನಮ್ಮ ಯಾವುದೇ ಮಾದರಿಗಳಲ್ಲಿ ಇದುವರೆಗೆ ಯುಕೆ ಗೆ ಸಂಬಂಧಿಸಿದ ಯಾವುದೇ ಅಂಶವು ನಮಗೆ ದೊರೆತಿಲ್ಲ. 

ಶ್ರೀನಿವಾಸ ರಾಮಾನುಜನ್‌ ನೆನಪಿನಲ್ಲಿ ಇಂದು ರಾಷ್ಟ್ರೀಯ ಗಣಿತ ದಿನ

ಪುಣೆಯ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್ ಐವಿ) ಅಥವಾ ದೇಶದ ಯಾವುದೇ ಪ್ರಯೋಗಾಲಯಗಳಲ್ಲಿ ಜೀನೋಮ್ ಸೀಕ್ವೆನ್ಸಿಂಗ್ ಮಾಡುವ ಪ್ರಯೋಗಶಾಲೆಯಲ್ಲಿ ಈ ರೀತಿಯ ರೂಪಾಂತರದ ಬಗ್ಗೆ ಯಾವುದೇ ಪುರಾವೆಗಳಿಲ್ಲ’ ಎಂದು ಅವರು ಹೇಳಿದ್ದಾರೆ.

English Version:

A new breed of coronavirus spreading in parts of the United Kingdom has not been found in India, top government officials said on Monday.UK experts say over the weekend that this new breed is highly infected and 70% more likely to spread. In this backdrop, more than 40 countries, including India, have suspended flights.’It is only a precautionary measure. This problem is not found in India, ”Union Health Secretary Rajesh Bhushan confirmed.
Dr Sameeran Panda, Head of Infectious Diseases, Indian Council of Medical Research (ICMR), also said, ‘We have not found any evidence for the UK in any of our models.There is no evidence of this kind of mutation in Pune’s National Institute of Virology (NIV) or genome sequencing laboratories in any of the country’s laboratories, he said.

(Visited 94 times, 1 visits today)

You Might Be Interested In

LEAVE YOUR COMMENT

Your email address will not be published. Required fields are marked *