ಬೆಂಗಳೂರಿನಲ್ಲಿ ಹಾಡಹಗಲೇ ಲಾಂಗ್ ಬೀಸಿ ಬಂಕ್ ಕ್ಯಾಶಿಯರ್ ರಾಬರಿಗೆ ಪ್ರಯತ್ನ!

ಪೆಟ್ರೋಲ್ ಬಂಕ್​ನಲ್ಲಿ ಹಾಡಹಗಲೇ ಹಣದ ಬ್ಯಾಗ್ ಎಗರಿಸಲು ಲಾಂಗ್ ಬೀಸಿದ ದುಷ್ಕರ್ಮಿ! ಸಿಸಿಟಿವಿ ದೃಶ್ಯ ಸೆರೆಯಾಗಿದೆ.

ಇಲ್ಲೊಬ್ಬ ದುಷ್ಕರ್ಮಿ ಅಡ್ರೆಸ್ ಕೇಳೋ ನೆಪದಲ್ಲಿ ಪೆಟ್ರೋಲ್​ ಬಂಕ್​ಗೆ ಬಂದು ಏನ್​ ಮಾಡಿದ ನೋಡಿ. ಬಂಕ್​ನ ಸಿಬ್ಬಂದಿಗೆ ಹಾಡಹಗಲೇ ಲಾಂಗ್ ತೋರಿಸಿ ಹಣವಿದ್ದ ಬ್ಯಾಗ್​​ ಅನ್ನು ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿದ್ದಾನೆ. ರಸ್ತೆಯಲ್ಲಿ ಎಳೆದಾಡಿ, ಲಾಂಗ್ ಬೀಸಿದರೂ ಪೆಟ್ರೋಲ್​ ಬಂಕ್​ ನೌಕರ ಹಣವಿದ್ದ ಬ್ಯಾಗ್​ ಅನ್ನು ಕೊಟ್ಟಿಲ್ಲ. ತಕ್ಷಣ ನೆರವಿಗೆ ಸ್ಥಳದಲ್ಲಿದ್ದ ಇತರ ಸಿಬ್ಬಂದಿ ರಸ್ತೆಯಲ್ಲಿದ್ದ ಕಲ್ಲು ತೆಗೆದುಕೊಂಡು ಬೀಸುತ್ತಿದ್ದಂತೆ ದುಷ್ಕರ್ಮಿ ಪರಾರಿಯಾಗಿದ್ದಾನೆ. ಇಂತಹ ಘಟಣೆ ಬೆಂಗಳೂರಿನ ಮೈಸೂರು ರಸ್ತೆಯ ರಚನಾ ಪೆಟ್ರೋಲ್ ಬಂಕ್‌ನಲ್ಲಿ ನಡೆದಿದೆ.

(Visited 339 times, 1 visits today)

You Might Be Interested In

LEAVE YOUR COMMENT

Your email address will not be published. Required fields are marked *