ಮುಂಗಾರು ಮಳೆ’ ಬಗ್ಗೆ ವಿಶೇಷ ಲೇಖನ ಬರೆದ ಯೋಗರಾಜ್ ಭಟ್

ಸ್ಯಾಂಡಲ್ ವುಡ್ ಚಿತ್ರರಂಗಕ್ಕೆ ಹಾಗೂ ಕನ್ನಡ ಸಿನಿ ರಸಿಕರ ಮನದಲ್ಲಿ ಸುರಿದ ಮುಂಗಾರು ಮಳೆಗೆ ಇದೀಗ 14 ವರ್ಷ. ಹೊಸತನದ ಚಿತ್ರ, ಹೊಸ ಕಲಾವಿದರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಿಸಿದ ಯೋಗರಾಜ್ ಭಟ್ ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದಲ್ಲಿ ಮೂಡಿಬಂದಿರುವ ಮುಂಗಾರು ಮಳೆ ಚಿತ್ರ ತೆರೆಕಂಡು ಇದೀಗ 14 ವರ್ಷಗಳು ಕಳೆದಿವೆ.

ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟ ಝಾರಾ ಯಾಸ್ಮಿನ್

ಈ ಹಿನ್ನೆಲೆಯಲ್ಲಿ ಯೋಗರಾಜ್ ಭಟ್ ಹಾಗೂ ನಟ ಗಣೇಶ್ ಸಾಮಾಜಿಕ ಜಾಲತಾಣಗಳಲ್ಲಿ ವಿಶೇಷ ಬರಹಗಳನ್ನು ಹಂಚಿಕೊಂಡಿದ್ದಾರೆ.

2006ರ ಡಿಸೆಂಬರ್ 29ರಂದು ತೆರೆ ಕಂಡ ಮುಂಗಾರು ಮಳೆ ಚಿತ್ರ ಸ್ಯಾಂಡಲ್ ವುಡ್ ನಲ್ಲಿ ಹೊಸ ದಾಖಲೆ ನಿರ್ಮಿಸಿತ್ತು. ಚಿತ್ರದ ಹಾಡುಗಳಂತು ಅಂದಿನಿಂದ ಇಂದಿನವರಿಗೂ ಎಲ್ಲರ ಬಾಯಲ್ಲೂ ಗುನುಗುತ್ತಲೇ ಇದೆ..ಇದೀಗ ಯೋಗರಾಜ್ ಭಟ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಮುಂಗಾರು ಮಳೆ ಬಗ್ಗೆ ಜಂಟಿ ಲೇಖನ ಬರೆದಿದ್ದಾರೆ.

‘ನಾವಿಬ್ಬರೂ, ಜೊತೆಗೆ ಇಡೀ ತಂಡ ಅದೇ ತಾನೇ ಕಣ್ತೆರೆದ ಶಿಶುಗಳಂತೆ ‘ಮುಂಗಾರು ಮಳೆ’ ಚಿತ್ರ ಮಾಡಿ, ಜನತೆಗೆ ಅರ್ಪಿಸಿ 14 ವರ್ಷಗಳಾಗಿವೆ. ಚಿತ್ರಕ್ಕಷ್ಟೇ ಅಲ್ಲದೇ ನಮ್ಮಿಬ್ಬರಿಗೂ ಇದು ಒಂದು ರೀತಿಯ ಹುಟ್ಟುಹಬ್ಬ. ಕೆಲಸ ಕಲಿಸಿದ, ಬದುಕು ಕೊಟ್ಟ, ಪ್ರೀತಿ ತಿಳಿಸಿದ, ನಾಡು ನಲಿಸಿದ ಈ ಪ್ರೇಕ್ಷಕರ ಆಸ್ತಿಯಂತಹ ಮಹಾನ್ ಚಿತ್ರಕ್ಕೆ ನಮ್ಮಿಬ್ಬರ ದೀರ್ಘದಂಡ ನಮನಗಳು ಎಂದಿದ್ದಾರೆ

(Visited 5 times, 1 visits today)

You Might Be Interested In

LEAVE YOUR COMMENT

Your email address will not be published. Required fields are marked *