ಎಸ್ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: 6 ವಿದ್ಯಾರ್ಥಿಗಳಿಗೆ 625/625

ಕೊರೊನಾ ಭೀತಿಯ ಮಧ್ಯೆಯೂ ಎಸ್ ಎಸ್ ಎಲ್ ಸಿ ಪರೀಕ್ತೆ ಯಶಸ್ವಿಯಾಗಿ ನಡೆಸಲಾಗಿತ್ತು. ಎಸ್ ಎಸ್ ಎಲ್ ಸಿ ಪರೀಕ್ತೆಗಾಗಿ ಸರ್ಕಾರ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ತುಂಬಾ ಕಾಳಜಿ ವಹಿಸಿತ್ತು. ಸರ್ಕಾರ ಹೇಳಿದ ಮುನ್ನಚ್ಚರಿಕೆಗಳನ್ನು ಮನದಲ್ಲಿಟ್ಟುಕೊಂಡು ಮಾಸ್ಕ ಧರಿಸಿಕೊಂಡು, ಸಾಮಾಜಿಕ ಅಂತರ ಕಾಯ್ದುಕೊಳ್ಳಯವುದರ ಮೂಲಕ ಎಲ್ಲ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದಿದ್ದರು. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಪರೀಕ್ತೆ ಬರೆದ ಎಲ್ಲ ವಿದ್ಯಾರ್ಥಿಗಳಿಗೆ ಉತ್ತಮ ಅಂಕಗಳಿಂದ ಪಾಸಾಗಲಿ ಎಂದು ಎಲ್ಲರೂ ಹಾರೈಸಿದ್ದರು. ಅದೇ ರೀತಿಯಾಗಿ ಈ ವರ್ಷ ಹೆಚ್ಚಿನ ವಿದ್ಯಾರ್ಥಿಗಳು ಈ ಬಾರಿ ಉತ್ತಮ ಅಂಕಗಳಿಂದ ಪಾಸಾಗಿದ್ದಾರೆ.

nodu maga website logo

ಇನ್ನೂ ಹೆಚ್ಚು ಕನ್ನಡ ನ್ಯೂಸ್ ಓದಲು ನೋಡುಮಗ.ಕಂ ಫೇಸ್ಬುಕ್ ಪೇಜ್ ಲೈಕ್ ಮಾಡಿ -->>

ಆದರೆ ಕಳೆದ ವರ್ಷಕ್ಕೆ ಹೊಲಿಸಿದರೆ, ಈ ಬಾರಿ ಫಲಿತಾಂಶ ಕಡಿಮೆಯಾಗಿದೆ. ಕಳೆದ ವರ್ಷ ಶೇ 73.70% ಫಲಿತಾಂಶ ಬಂದಿತ್ತು. ಆದರೆ ಈ ವರ್ಷ 71.80% ಫಲಿತಾಂಶ ಬಂದಿದೆ, ಏಕೆಂದರೆ ಕೆಲವು ವಿದ್ಯಾರ್ಥಿಗಳಿಗೆ ಸೊಂಕು ದೃಡವಾಗಿದ್ದರಿಂದ ಚಿಕೆತ್ಸೆಗೆ ಒಳಗಾಗಿದ್ದರು. ಇನ್ನು ಕೆಲವರು ಕೊರೊನದ ಹೆದರಿಕೆಯಿಂದ ಪರೀಕ್ಷೆಗೆ ಹಾಜರಾಗಿರಲಿಲ್ಲ. ಹೀಗಾಗಿ ಫಲಿತಾಂಶ ಕಡಿಮೆ ಬಂದಿದೆ. 

ಜೂನ 24 ರಿಂದ ಜುಲೈ 4 ರವರೆಗೆ ಪರೀಕ್ಷೆ ನಡೆಸಲಾಗಿತ್ತು. 8,11,050 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅದರಲ್ಲಿ 5,82,316 ವಿದ್ಯಾರ್ಥಿಗಳು ಪಾಸ್‌ ಆಗಿದ್ದರೆ, 2,28,734 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಈ ವರ್ಷ ರಾಜ್ಯದ ಸರ್ಕಾರಿ ಶಾಲೆಗಳು ಶೇ.72.79 ರಷ್ಟು ಫಲಿತಾಂಶ ನೀಡಿವೆ. 19,086 ಮಂದಿ ಹಾಜರಾತಿ ಕೊರತೆಯಿಂದ ಪರೀಕ್ಷೆ ಬರೆಯದಿದ್ದರೆ, 8,067 ವಿದ್ಯಾರ್ಥಿಗಳು ಪೂರಕ ಪರೀಕ್ಷೆ ಬರೆಯಲಿದ್ದಾರೆ.

ರಾಜ್ಯದಲ್ಲಿ ಶೇ. 66.41 ವಿದ್ಯಾರ್ಥಿಗಳು ಪಾಸ್‌ ಆಗಿದ್ದರೆ, ಶೇ.77.74 ರಷ್ಟು ವಿದ್ಯಾರ್ಥಿನಿಯರು ಪಾಸ್‌ ಆಗಿದ್ದಾರೆ. ಎಂದಿನಂತೆ ಈ ಈ ವರ್ಷವೂ ಹೆಣ್ಣು ಮಕ್ಕಳೇ ಮೇಲುಗೈ ಸಾಧಿಸಿದ್ದಾರೆ

ಈ ಬಾರಿಯ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ವಿವರ ಇಲ್ಲಿದೆ.

ಚಿಕ್ಕಬಳ್ಳಾಪುರಕ್ಕೆ ಮೊದಲ ಸ್ಥಾನ ಪಡೆದಿದೆ. ದ್ವೀತಿಯ ಸ್ಥಾನ ಬೆಂಗಳೂರು ಗ್ರಾಮಾಂತರಕ್ಕೆ ಬಂದಿದೆ, ಮಧುಗಿರಿಗೆ ತೃತಿಯ ಸ್ಥಾನ ಬಂದಿದ್ದು, ಯಾದಗಿರಿ ಕೊನೆಯ ಸ್ಥಾನದಲ್ಲಿದೆ.

ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ವಿವರ
 • 625 ಅಂಕ ಪಡೆದವರು – 06 ವಿದ್ಯಾರ್ಥಿಗಳು
 1. ಚಿರಾಯು (ಬೆಂಗಳೂರು)
 2. ನಿಖಿಲೇಶ (ಬೆಂಗಳೂರು)
 3. ಧೀರಜ ರೆಡ್ಡಿ (ಮಂಡ್ಯ)
 4. ಅನುಷಾ (ಸುಳ್ಯ)
 5. ತನ್ಮಯಿ (ಚಿಕ್ಕ ಮಂಗಳೂರು)

ಸನ್ನಿದಿ ಹೆಗಡೆ (ಶಿರಸಿ)

 • 624 ಅಂಕ ಪಡೆದವರು 11 ವಿದ್ಯಾರ್ಥಿಗಳು
 • 623 ಅಂಕ ಪಡೆದವರು 43 ವಿದ್ಯಾರ್ಥಿಗಳು
 • 622 ಅಂಕ ಪಡೆದವರು 56 ವಿದ್ಯಾರ್ಥಿಗಳು 
 • 621 ಅಂಕ ಪಡೆದವರು 68 ವಿದ್ಯಾರ್ಥಿಗಳು
 • 620 ಅಂಕ ಪಡೆದವರು 117 ವಿದ್ಯಾರ್ಥಿಗಳು
ವಿಷಯವಾರು ಅತಿ ಹೆಚ್ಚು ಅಂಕ ಗಳಿಸಿದವರು ವಿದ್ಯಾರ್ಥಿಗಳ ಸಂಖ್ಯೆ
 1. ಪ್ರಥಮ ಭಾಷೆ – 125 ಅಂಕ ಪಡೆದವರು 8995 ವಿದ್ಯಾರ್ಥಿಗಳು
 2. ದ್ವಿತೀಯ ಭಾಷೆ- 100 ಅಂಕ ಪಡೆದವರು 6044 ವಿದ್ಯಾರ್ಥಿಗಳು
 3. ತೃತೀಯ ಭಾಷೆ- 100 ಅಂಕ ಪಡೆದವರು 21745 ವಿದ್ಯಾರ್ಥಿಗಳು
 4. ಗಣಿತ 100 ಅಂಕ ಪಡೆದವರು 1796 ವಿದ್ಯಾರ್ಥಿಗಳು
 5. ವಿಜ್ಞಾನ 100 ಅಂಕ ಪಡೆದವರು 910 ವಿದ್ಯಾರ್ಥಿಗಳು
 6. ಸಮಾಜ ವಿಜ್ಞಾನ 100 ಅಂಕ ಪಡೆದವರು 4171 ವಿದ್ಯಾರ್ಥಿಗಳು

ಇನ್ನೂ ಹೆಚ್ಚು ಕನ್ನಡ ನ್ಯೂಸ್ ಓದಲು ನೋಡುಮಗ.ಕಂ INSTAGRAM ಪೇಜ್ Follow ಮಾಡಿ -->>

(Visited 55 times, 1 visits today)

You Might Be Interested In

LEAVE YOUR COMMENT

Your email address will not be published. Required fields are marked *