ಪೇಜಾವರ ಶ್ರೀಗಳು ಮಾಂಸ ತಿನ್ನುತ್ತಿದ್ದರೆ?.. ಹೇಳಿಕೆಗೆ ತೀವ್ರ ಖಂಡನೆ, ಕ್ಷಮೆ ಕೇಳಿದ ಹಂಸಲೇಖ

ಪೇಜಾವರ ಶ್ರೀಗಳು ದಲಿತರ ಕೇರಿಗೆ ಹೋಗುತ್ತಿದ್ದರು, ದಲಿತರು ಅವರ ಮನೆಯಲ್ಲಿ ಕೋಳಿ ಮಾಂಸ ಕೊಟ್ಟಿದ್ದರೆ ಶ್ರೀಗಳು ತಿನ್ನುತ್ತಿದ್ದರೆ? ಎಂಬ ಹೇಳಿಕೆ ಈಗ ಹಂಸಲೇಖ ರವರಿಗೆ ಮುಳುವಾಗಿದೆ.

ನವೆಂಬರ್ 12 ರಂದು ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವೇದಿಕೆ ಮೇಲೆಯೇ ಹಂಸಲೇಖ ಅವರು, ಪೇಜಾವರ ಶ್ರೀಗಳಾಗಿದ್ದ ವಿಶ್ವೇಷ ತೀರ್ಥರನ್ನು ಕೋಳಿ ಮಾಂಸ ತಿನ್ನುತ್ತಿದ್ದರೆ ಎಂದಿದ್ದರು. ಮಾತ್ರವಲ್ಲದೆ ರಾಜಕಾರಣಿಗಳ ಗ್ರಾಮ ವಾಸ್ತವ್ಯವನ್ನೂ ಟೀಕಿಸಿದ್ದರು. ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಮಾಡಿದರು, ಈಗ ಸಿಟಿಯಲ್ಲಿರುವ ಅಶೋಕ್, ಅಶ್ವಥ್ ನಾರಾಯಣ್ ಕೂಡ ಮಾಡುತ್ತಿದ್ದಾರೆ ಎಂದಿದ್ದರು.

ತಪ್ಪಿನ ಅರಿವಾದ ಬಳಿಕ ಹಂಸಲೇಖ ರವರು ‘ಕ್ಷಮೆ ಇರಲಿ, ಎಲ್ಲಾ ಮಾತುಗಳು ವೇದಿಕೆಗೆ ಅಲ್ಲ ಅನ್ನುವುದು ನನಗೆ ಗೊತ್ತಿದೆ, ಪ್ರಶಸ್ತಿ ಪುರಸ್ಕಾರ ಸಭೆಯಲ್ಲಿ, ನುಡಿದರೆ ಮುತ್ತಿನ ಹಾರದಂತೆ ಇರಬೇಕು ಎನ್ನುವಂತೆ ಇರಬೇಕಿತ್ತು. ನಾನು ಹಾಗೇ ಅಲಂಕರಿಸಬೇಕಿತ್ತು, ಅಸ್ಪೃಶ್ಯತೆ ನಮ್ಮ ದೇಶಕ್ಕೆ ಅಂಟಿದ ಶಾಪ. ಇದು ಜಿಡ್ಡು ಕೃಷ್ಣಮೂರ್ತಿಗಳ ಮಾತು, ನನ್ನ ಮಾತಲ್ಲ. ಅಸ್ಪೃಶ್ಯತೆಯ ಅನಿಷ್ಟವನ್ನು ತೊಡೆದು ಹಾಕೋದಕ್ಕೆ ಪೇಜಾವರ ಶ್ರೀಗಳು ಸೇರಿದಂತೆ ಎಲ್ಲ ಗುರು-ಹಿರಿಯರು ಪ್ರಯತ್ನ, ಸಂಧಾನಗಳನ್ನು ಮಾಡುತ್ತಲೇ ಇದ್ದಾರೆ. ಆ ಪ್ರಯತ್ನ, ಸಂಧಾನಗಳ ಬಗ್ಗೆ ನನಗೆ ಅಪಾರವಾದ ಗೌರವ ಇದೆ’ ಎಂದಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಹಂಸಲೇಖ ರವರು ನಾನು ಹಾಗೆ ಮಾತನಾಡಬಾರದಿತ್ತು, ನನ್ನ ಮಾತನ್ನು ನನ್ನ ಹೆಂಡತಿಯೇ ವಿರೋದಿಸಿದ್ದಾಳೆ ಎಂದು ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ

(Visited 624 times, 1 visits today)

You Might Be Interested In

LEAVE YOUR COMMENT

Your email address will not be published. Required fields are marked *