ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ಬಗ್ಗೆ ಮಾತನಾಡಿದ ಸುಮಲತಾ ಅಂಬರೀಷ್

ಬಾಲಿವುಡ್ ನಲ್ಲಿ ಮಾತ್ರ ಕೇಳಿ ಬರುತ್ತಿದ್ದ ಡ್ರಗ್ಸ ಜಾಲದ ಸುದ್ದಿ, ಈಗ ಸ್ಯಾಂಡಲ್ ವುಡ್ ನಲ್ಲೂ ಕೇಳಿಬರುತ್ತಿದೆ. ಸ್ಯಾಂಡಲ್ ವುಡ್ ಗೂ ಡ್ರಗ್ಸ ಜಾಲದ ನಂಟಿದೆ ಎನ್ನವ ಸುದ್ದಿ ಹಬ್ಬಿದ ಮೇಲೆ, ದಿನಕ್ಕೊಂದು ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾ ಬಗ್ಗೆಹೊಸ ಸಂಗತಿಗಳು ಹೊರಬೀಳುತ್ತಿವೆ.  

ನೋಡುಮಗ.ಕಂ ವಿಡಿಯೋ ನ್ಯೂಸ್ ಗಳನ್ನು ನೋಡಲು ನಮ್ಮ   YOUTUBE  ಚಾನೆಲ್  SUBSCRIBE  ಮಾಡಿ — >>

ಡ್ರಗ್ಸ್ ಮಾಫಿಯಾ ದಲ್ಲಿ ಸ್ಯಾಂಡಲ್ ವುಡ್ ನಟ ನಟಿಯರು ಭಾಗಿಯಾಗಿರುವ ವಿಷಯ, ಇಡೀ ಚಿತ್ರ ರಂಗಕ್ಕೆ ಅಷ್ಟೇ ಅಲ್ಲ , ಎಲ್ಲ ಅಭಿಮಾನಿಗಳಿಗೂ ಆಘಾವನ್ನುಂಟು ಮಾಡಿದೆಇಷ್ಟು ದಿನ ಕೆಲವು ಯುವಜನತೆ ಮಾತ್ರ ಮಾದಕ ವ್ಯಸನಗಳ ದಾಸರಾಗಿದ್ದರು, ಈಗ ಸ್ಯಾಂಡಲ್ ವುಡ್ ನಟ ನಟಿಯರಿಗೂ ಕೂಡ ಮಾದಕ ವ್ಯಸನಗಳ ನಂಟು ಇರುವುದು ನಂಬಲು ಅಸಾಧ್ಯವಾದರೂ ನಂಬಲೇಬೇಕಾದ ಪರಿಸ್ಥಿತಿ ಉಂಟಾಗಿದೆ

ಸ್ಯಾಂಡಲ್ ವುಡ್ ನ ಡ್ರಗ್ಸ್ ಜಾಲದ ನಂಟಿನ ಕುರಿತು ಸುದ್ದಿಗಾರರು ಸುಮಲತಾ ಅಂಬರೀಷ್ ಅವರಿಗೆ ಪ್ರಶ್ನೇ ಕೇಳಿದಾಗ, “ನಮ್ಮ ಅನುಭವದಲ್ಲಿ ಡ್ರಗ್ಸ್ ಬಗ್ಗೆ ಕೇಳಿಲ್ಲ, ನೋಡಿಲ್ಲ. ಇಲ್ಲವೇ ಇಲ್ಲ ಅಂತ ಹೇಳಕಾಗಲ್ಲ, ಚಿತ್ರ ರಂಗದಲ್ಲಿ ಮಾತ್ರ ಅಲ್ಲ, ಎಲ್ಲ ಕಡೆ ಡ್ರಗ್ಸ್ ಬಗ್ಗೆ ಕೇಳಿದ್ದೇವೆ. ಅದರಲ್ಲೂ ಇವಾಗಿನ ಯುವಪೀಳಿಗೆಗೆ ಡ್ರಗ್ಸ್ನ ಎಡಿಕ್ಷನ್ ಇರುವುದು ಒಂದು ಕಹಿ ಸತ್ಯ

ಆದರೆ ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಜಾಲದ ನಂಟಿನ ಬಗ್ಗೆ ನನಗೆ ಗೊತ್ತಿಲ್ಲ. ನನಗೆ ಗೊತ್ತಿಲ್ಲದೇ ಇರುವ ವಿಚಾರದ ಬಗ್ಗೆ ನನ್ನ ಅಭಿಪ್ರಾಯದ ಬಗ್ಗೆ ಹೇಳುವುದು ಸರಿಯಲ್ಲ. ಏಕೆಂದರೆ ಆರೋಪ ಮಾಡುವುದು, ಆದರೆ ಆ ವ್ಯಕ್ತಿ ಅಪರಾಧಿ ಹೌದೊ ಅಲ್ಲವೋ ಎಂದು ಸಾಬೀತು ಆಗುವವರೆಗೂ ಹೇಳೊಕಾಗಲ್ಲ. ಈವಾಗ ವಿಚಾರಣೆ ನಡೀತಾ ಇದೆ, ಸತ್ಯಾಂಶ ಎಂಬುವುದು ಎಲ್ಲರಿಗೂ ತಿಳಿಯುತ್ತದೆ, ಅಲ್ಲಿಯವರಿಗೂ ನಾವು ಕಾಯಬೇಕು.” ಎಂದು ಹೇಳಿದ್ದಾರೆ.

ಇನ್ನೂ ಹೆಚ್ಚು ಕನ್ನಡ ನ್ಯೂಸ್ ಓದಲು ನೋಡುಮಗ.ಕಂ ಫೇಸ್ಬುಕ್ ಪೇಜ್ ಲೈಕ್ ಮಾಡಿ -->>

ಸುದ್ದಿಗಾರರು ಕೇಳಿದ ಹಲವಾರು ಪ್ರಶ್ನೇಗಳಿಗೆ ಸುಮಲತಾ ಅಂಬರೀಷ ಅವರು ಎನೇನು ಉತ್ತರಿಸಿದ್ದಾರೆ ಎಂಬುವುದನ್ನು ತಿಳಿಯಲು ವೀಡಿಯೊವನ್ನು ಸಂಪೂರ್ಣವಾಗಿ ನೋಡಿ ತಿಳಿಯಿರಿ.

(Visited 9 times, 1 visits today)

You Might Be Interested In