ಕೋಟಿಗೊಬ್ಬ-3 ಸಿನಿಮಾ ವಿಚಾರ ಹಂಚಿಕೊಂಡ ಕಿಚ್ಚ ಸುದೀಪ್

ಇತ್ತೀಚಿನ ದಿನಗಳಲ್ಲಿ ಕೊರೊನ ಸುದ್ದಿ ಬಿಟ್ರೆ ಬೇರೆ ಯಾವುದೇ ಇಲ್ಲ, ಕಿಚ್ಚ ಸುದೀಪ್ ರವರ ಕೋಟಿಗೊಬ್ಬ-3 ಸಿನಿಮಾ ಸದ್ದಂತೂ ಇರ್ಲೇ ಇರ್ಲಿಲ್ಲ.ಸುದೀಪ್ ಅಭಿನಯದ ಫ್ಯಾಂಟಮ್ ಚಿತ್ರದ ವಿಡಿಯೋಗಳ ಸದ್ದಿನ ನಡುವೆ ಕೋಟಿಗೊಬ್ಬ-3 ಚಿತ್ರದ ವಿಚಾರವನ್ನು ಸುದೀಪ್ ಅವರು ತಮ್ಮ ಟ್ವಿಟರ್ ಖಾತೆಯಿಂದ ಹಂಚಿಕೊಂಡಿದ್ದಾರೆ.

ಎಷ್ಟೋ ಜನರು ಸುದೀಪ್ ರವರನ್ನು ಕೋಟಿಗೊಬ್ಬ-3 ಚಿತ್ರ ಏನಾಯ್ತು, ಅದರ ಬಗ್ಗೆ ಹೇಳಿ ಎಂದು ಒತ್ತಾಯಿಸಿದ್ದರಿಂದ ಇವತ್ತು ಟ್ವಿಟರ್ ಮೂಲಕ ಉತ್ತರಿಸಿದ್ದಾರೆ.

ಕೋಟಿಗೊಬ್ಬ-3 ಸಿನಿಮಾ ಮುಗಿದಿದೆ ಹಾಗು ಪೋಸ್ಟ್ ಪ್ರೊಡಕ್ಷನ್ ಕೆಲ್ಸಗಳು ಒಂದಷ್ಟು ಬಾಕಿ ಇದೆ. ಕೊರೊನ ಅವಾಂತರಗಳಿಂದ ಮುಗಿಸಲು ಇನ್ನಷ್ಟು ಸಮಯ ಬೇಕಿದೆ.
ನಾನು ಮತ್ತು ನಮ್ಮ ತಂಡ ಆದಷ್ಟು ಬೇಗ ಮುಗಿಸು ತೆರೆ ಮೇಲೆ ತರಲು ಕಾತುರದಿಂದ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.

ಇತ್ತೀಚೆಗಷ್ಟೇ ಫ್ಯಾಂಟಮ್ ಚಿತ್ರದ ಕೆಲವು ವಿಡಿಯೋ ಗಳು ಹೊರ ಬಂದಿದ್ದು ಸುದೀಪ್ ಅಭಿಮಾನಿಗಳು ಫ್ಯಾಂಟಮ್ ಗುಂಗಿನಿಂದ ಹೊರ ಬಂದು ಸುದೀಪ್ ರವರ ಟ್ವೀಟ್ ನಿಂದ ಕೋಟಿಗೊಬ್ಬ-3 ಚಿತ್ರವನ್ನು ನೆನೆಸಿಕೊಳ್ಳುತ್ತಿದ್ದರೆ. ಕೋಟಿಗೊಬ್ಬ-2 ಹಿಟ್ ಆಗಿದ್ದು ಕೋಟಿಗೊಬ್ಬ-3 ಮೇಲೆ ಸಾಕಷ್ಟು ಕುತೂಹಲ ಹಾಗು ಭರವಸೆಗಳಿವೆ.

(Visited 105 times, 1 visits today)

Share and Enjoy !

You Might Be Interested In