ಅಜಿಂಕ್ಯ ರಹಾನೆ ನಾಯಕತ್ವ ಕೊಂಡಾಡಿದ ರಿಕಿ ಪಾಟಿಂಗ್

ಆಸ್ಟ್ರೇಲಿಯಾ ವಿರುದ್ಧ ಮೆಲ್ಬೋರ್ನ್​ನಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕತ್ವವನ್ನ ಅಜಿಂಕ್ಯಾ ರಹಾನೆ ವಹಿಸಿಕೊಂಡಿದ್ದಾರೆ. ಅಜಿಂಕ್ಯ ರಹಾನೆಯ ನಾಯಕತ್ವ ಶೈಲಿಯನ್ನ ನೋಡಿದ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಟಿಂಗ್​ ರಹಾನೆಯನ್ನ ಕೊಂಡಾಡಿದ್ದಾರೆ.

ಅಜಿಂಕ್ಯ ರಹಾನೆ ನಾಯಕತ್ವ ಇಲ್ಲಿಯವರೆಗೆ ಅದ್ಭುತವಾಗಿದೆ. ಅಡಿಲೇಡ್​ ಅಂಗಳದಲ್ಲಿ ಟೀಂ ಇಂಡಿಯಾ ಕಳಪೆ ಪ್ರದರ್ಶನದ ಬಳಿಕ ರಹಾನೆ ತಂಡವನ್ನ ಹೇಗೆ ಸಂಘಟಿಸ್ತಾರೆ ಎಂಬ ಆತಂಕ ಎಲ್ಲರಲ್ಲಿತ್ತು. ಆದರೆ ರಹಾನೆ ನಾಯಕತ್ವದಲ್ಲಿ ಇಂದು ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡಿದೆ.

ನಟ ರಜನಿಕಾಂತ್ ಇವತ್ತು ಸಂಜೆ ಡಿಸ್ಚಾರ್ಜ್

ರಹಾನೆಯ ಕ್ಷೇತ್ರ ನಿರ್ವಹಣೆ ಟ್ಯಾಲೆಂಟ್​, ಬೌಲಿಂಗ್​ ಕ್ರಮಾಂಕಗಳಲ್ಲಿ ಮಾಡುವ ಬದಲಾವಣೆ ಇವೆಲ್ಲವೂ ಗಮನಾರ್ಹ ಸ್ಥಾನವನ್ನ ಪಡೆದಿವೆ ಎಂದು ಹೇಳಿದ್ದಾರೆ

(Visited 3 times, 1 visits today)

You Might Be Interested In

LEAVE YOUR COMMENT

Your email address will not be published. Required fields are marked *