ಗಾಯಕ ಎಸ್.ಪಿ ಬಾಲಸುಬ್ರಮಣ್ಯಂರವರು ಆಸ್ಪತ್ರೆಗೆ ದಾಖಲು

ಕೊರೊನಾ ಹೇಗೆ ಜನರನ್ನು ಕಿತ್ತು ತಿನ್ನುತ್ತಿದೆ ಅಂತಾ ಎಲ್ಲರಿಗೂ ತಿಳಿದೆ ಇದೆ. 2020 ಎಲ್ಲ ಜನತೆಗೂ  ಕೆಟ್ಟ ವರ್ಷವಾಗಿದ್ದು,ಈ ವರ್ಷ ಬೇಗನೆ ಕಳೆದು ಹೋಗಬಾರದಾ ಎಂದು ಎಲ್ಲರಿಗೂ ಅನಿಸುತ್ತಿದೆ. ಅದರಲ್ಲೂ ಚಿತ್ರರಂಗಕ್ಕೆ ಸಾಲು ಸಾಲಾಗಿ ಕೆಟ್ಟ ಸುದ್ದಿಗಳು ಬರುತ್ತಲೇ ಇದೆ. ಇದೀಗ ಎಸ್ ಪಿ ಬಾಲಸುಬ್ರಮಣ್ಯಂರವರು ಆಸ್ಪತ್ರೆಗೆ ದಾಖಲಾಗಿರುವುದರಿಂದ ಅವರ ಎಲ್ಲ ಅಭಿಮಾನಿಗಳಿಗೆ ಮತ್ತು ಚಿತ್ರ ರಂಗಕ್ಕೆ ಆಘಾತವನ್ನು ಉಂಟುಮಾಡಿದೆ. 

ಇನ್ನೂ ಹೆಚ್ಚು ಕನ್ನಡ ನ್ಯೂಸ್ ಓದಲು ನೋಡುಮಗ.ಕಂ ಫೇಸ್ಬುಕ್ ಪೇಜ್ ಲೈಕ್ ಮಾಡಿ -->>

ಗಾಯಕರಿಗೆ ಎದೆನೋವು ಕಾಣಿಸಿಕೊಳ್ಳುವುದು ಸರ್ವೇಸಾಮಾನ್ಯ, ಅದೇ ರೀತಿಯಾಗಿ ಎಸ್ ಪಿ ಬಾಲಸುಬ್ರಮಣ್ಯಂರವರಿಗೂ ಮೊದಲಿಗೆ ಎದೆ ನೋವು ಕಾಣಿಸಿಕೊಂಡಿದೆ. ತದನಂತರ ಸ್ವಲ್ಪ ಕೆಮ್ಮು, ನೆಗಡಿ ಮತ್ತು ಜ್ವರ ಕಾಣಿಸಿಕೊಂಡಿದೆ. ಇದನ್ನು ನಿರ್ಲಕ್ಷ್ಯ ಮಾಡದೆ ಆಸ್ಪತ್ರೆಗೆ ತೊರಿಸಿಕೊಂಡಿದ್ದಾರೆ. ನೆಗಡಿ, ಜ್ವರ ಮತ್ತು ಕೆಮ್ಮು ಇರುವುದರಿಂದ ಎಸ್ ಪಿ ಬಿ ಅವರನ್ನ ಕೊರೊನಾ ಪರೀಕ್ಷೆಗೆ ಒಳಪಡಿಸಿದಾಗ, ಅವರಿಗೆ ಕೊರೊನಾ ಪಾಸಿಟಿವ್ ಆಗಿರುವುದು ದೃಡಪಟ್ಟಿದೆ. ಮನೆಯಲ್ಲೇ ವೈದ್ಯರ ಸಲಹೆಯಂತೆ ಚಿಕೆತ್ಸೆ ಪಡೆದುಕೊಳ್ಳುವುದಾಗಿ ಎಸ್ ಪಿ ಬಿ ವ್ಯಕ್ತಪಡಿಸಿದಾಗ, ಆತಂಕಕ್ಕೆ ಒಳಗಾದ ಅವರ ಕುಟುಂಬ ಒತ್ತಾಯ ಮಾಡಿ, ಎಸ್ ಪಿ ಬಿ ಅವರನ್ನು ಆಸ್ಪತ್ರೆಗೆ ದಾಖಲಿಸಿದರು. 

S. P Balasubramanyam

ನೋಡುಮಗ.ಕಂ ವಿಡಿಯೋ ನ್ಯೂಸ್ ಗಳನ್ನು ನೋಡಲು ನಮ್ಮ   YOUTUBE  ಚಾನೆಲ್  SUBSCRIBE  ಮಾಡಿ — >>

ಆಸ್ಪತ್ರೆಗೆ ದಾಖಲಾದ ನಂತರ ಎಸ್ ಪಿ ಬಾಲಸುಬ್ರಮಣ್ಯರವರು ವಿಡೀಯೋ ಮೂಲಕ ಎಲ್ಲರೊಂದಿಗೆ ಮಾತನಾಡಿದ್ದಾರೆ. “ಸ್ವಲ್ಪ ಕೆಮ್ಮು, ನೆಗಡಿ ಮತ್ತು ಜ್ವರ ಕಾಣಿಸಿಕೊಂಡಿದ್ದರಿಂದ, ಆಸ್ಪತ್ರೆಗೆ ಬಂದು ಕೊರೊನಾ ಟೆಸ್ಟ ಮಾಡಿಸಿದೆ. ಆವಾಗ ಕೊರೊನಾ ಪಾಸಿಟಿವ್ ಆಗಿದೆ ಎಂದು ತಿಳಿಯಿತು. ಯಾರೂ ಆತಂಕ ಪಡಬೇಕಿಲ್ಲ, ನಾನು ಆರೋಗ್ಯವಾಗಿದ್ದೆನೆ. ನಾನು ಬೇಗನೆ ಹುಷಾರಿಗಿ ಹೋರಬರುತ್ತೆನೆ. ನನ್ನ ಕುಟುಂಬದವರು ಮತ್ತು ನನ್ನ ಸ್ನೇಹಿತರು ನನ್ನೊಂದಿಗೆ ಇದ್ದಾರೆ. ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ನನ್ನ ಚೆನ್ನಾಗಿಲ್ಲದಿರುವುದರಿಂದ ನನಗೆ ಅಭಿಮಾನಿಗಳಿಂದ ಮತ್ತು ಸ್ನೇಹಿತರಿಂದ ತುಂಬಾ ಕರೆಗಳು ಬರುತ್ತಿವೆ. ನಾನು ಒಳ್ಳೆಯ ವೈದ್ಯರ ಆರೈಕೆಯಲ್ಲಿದ್ದೇನೆ.ಎಲ್ಲರ ಕರೆಗಳನ್ನು ಸ್ವೀಕರಿಸಲು ನನಗೆ ಸಾಧ್ಯವಾಗದೇ ಇರಬಹುದು. ಯಾರೂ ಆತಂಕ ಪಡಬೇಕಿಲ್ಲ, ನಾನು ಚೆನ್ನಾಗಿದ್ದೆನೆ, ಯಾರೂ ಕರೆಗಳನ್ನ ಮಾಡಬೇಡಿ. ನಾನು ಆದಷ್ಟು ಬೇಗ ಗುಣಮುಖನಾಗಿ ಬರ್ತೇನೆ” ಎಂದು ಹೇಳಿದ್ದಾರೆ. ಆದಷ್ಟು ಬೇಗ ಎಸ್ ಪಿ ಬಾಲಸುಬ್ರಮಣ್ಯಂ ಅವರು ಗುಣಮುಖರಾಗಿ ಹಿಂದುರಗಲಿ ಎಂದು ಅವರ ಎಲ್ಲ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. 

ಇನ್ನೂ ಹೆಚ್ಚು ಕನ್ನಡ ನ್ಯೂಸ್ ಓದಲು ನೋಡುಮಗ.ಕಂ INSTAGRAM ಪೇಜ್ Follow ಮಾಡಿ -->>

(Visited 107 times, 1 visits today)

You Might Be Interested In