ಡ್ರಗ್ಸ್ ಮಾಫಿಯಾ ಬಗ್ಗೆ ಉಪ್ಪಿ ಮತ್ತು ಶಿವಣ್ಣ ಹೇಳಿದ್ದೇನು?

ಡ್ರಗ್ಸ್ ಮಾಫಿಯಾ ಲಿಂಕ್ ಸ್ಯಾಂಡಲ್‍ವುಡ್  ಜೊತೆಗೆ ಇದೆ ಎನ್ನುವ ಸುದ್ದಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ.  ಡ್ರಗ್ಸ್ ಜಾಲದ ಪ್ರಕರಣದಲ್ಲಿ ಯಾರು ಯಾರು ಸಿಲುಕಿದ್ದಾರೆ? ಡ್ರಗ್ಸ್ ಜಾಲದ ಪ್ರಕರಣದಲ್ಲಿ ಸಿಲುಕಿರುವ ಯುವ ನಟ ನಟಿಯರು ಯಾರು? ಸಂಗೀತ ನಿರ್ದೇಶಕರು ಯಾರು? ಸ್ಟಾರ ನಟ ನಟಿಯರು ಯಾರು? ಎನ್ನುವ ಹಲವಾರು ಪ್ರಶ್ನೇಗಳಿಗೆ ಉತ್ತರ ಹುಡುಕಬೇಕಿದೆ. ಇಂದ್ರಜಿತ ಲಂಕೇಶ ಅವರು ಡ್ರಗ್ಸ್ ಜಾಲದ ಪ್ರಕರಣದಲ್ಲಿ ಪಾಲ್ಗೊಂಡಿರುವ 15 ನಟ ನಟಿಯರ ಹೇಸರುಗಳನ್ನು ಸಾಕ್ಷಿ ಸಮೇತ ಸಿಬಿಐಗೆ ಒಪ್ಪಿಸಿದ್ದಾರೆ. 

ನೋಡುಮಗ.ಕಂ ವಿಡಿಯೋ ನ್ಯೂಸ್ ಗಳನ್ನು ನೋಡಲು ನಮ್ಮ   YOUTUBE  ಚಾನೆಲ್  SUBSCRIBE  ಮಾಡಿ — >>

ಇಂದ್ರಜಿತ ಲಂಕೇಶ ಕೊಟ್ಟಿರುವ ಆ 15 ಜನರಲ್ಲಿ ಕೆಲವರು ಯುವ ನಟ ಮತ್ತು ನಟಿಯರಾದರೆ, ಇನ್ನು ಕೆಲವರು ಸಂಗೀತ ನಿರ್ದೇಶಕರು ಹಾಗೂ ಸ್ಟಾರ ನಟ ನಟಿಯರಾಗಿದ್ದಾರೆ.

Upendra and shivarajkumar

ಸೂಪರ್ ಸ್ಟಾರ್ ಉಪೇಂದ್ರ ಅವರು ತಮ್ಮ ಹೊಸ ಸಿನಿಮಾ “ಕಬ್ಜ”ದ ಎಕ್ಸ್ಕ್ಲೂಸಿವ್ ವೆಬ್ ಸೈಟ್ ಲಾಂಚ್ ಮಾಡಿದ್ದರು, ಆ ಕಾರ್ಯಕ್ರಮದಲ್ಲಿ ಹ್ಯಾಟ್ರಿಕ್ ಹೀರೊ ಶಿವರಾಜಕುಮಾರ ಅವರು ಅತಿಥಿಯಾಗಿ ಪಾಲ್ಗೊಂಡಿದ್ದರು. ಆಗ ಮಾದ್ಯಮದವರು ಕಬ್ಜ ಚಿತ್ರದ ಬಗ್ಗೆ ಪ್ರಶ್ನೇ ಕೇಳವುದರ ಜೊತೆಗೆ ಡ್ರಗ್ಸ್ ಜಾಲದ ಪ್ರಕರಣದ ಬಗ್ಗೆ ಪ್ರಶ್ನೇಗಳನ್ನ ಕೇಳಿದಾಗ, ಉಪೇಂದ್ರ ಹಾಗೂ ಶಿವರಾಜಕುಮಾರ ಅವರು ಡ್ರಗ್ಸ್ ಜಾಲದ ಪ್ರಕರಣದ ಬಗ್ಗೆ ಮಾದ್ಯಮದವರ ಜೊತೆಗೆ ಮಾತನಾಡಿದ್ದಾರೆ.

nodu maga website logo

ಉಪೇಂದ್ರ ಅವರು “ನನಗೂ ಇದರ ಬಗ್ಗೆ ಗೊತ್ತಿರಲಿಲ್ಲ. ನಮ್ಮ ಇಂಡಸ್ಟ್ರಿಯಲ್ಲಿ ಡ್ರಗ್ಸ್ ಮಾಫಿಯಾ ಇರುವದನ್ನ ಕೇಳಿ ನನಗೆ ದಿಗ್ಬ್ರಮೆ ಆಗಿದೆ. ಇವಾಗ ಈ ವಿಷಯದಲ್ಲಿ ಸಂಪೂರ್ಣ ಸ್ಯಾಂಡಲ್ ವುಡ್ ಇಂಡಸ್ಟ್ರಿ ಬಗ್ಗೆ ಮಾತನಾಡಬಾರದು. ಯಾರೋ ಸ್ವಲ್ಪ ಜನ ಯುವ ನಟ ನಟಿಯರು ಡ್ರಗ್ಸ್ ಮಾಫಿಯಾದಲ್ಲಿ ಪಾಲ್ಗೊಂಡಿರಬಹುದು. ಯಾರೇ ಆಗಲಿ ಸರಿಯಾದ ಸಮಯದಲ್ಲಿ ಸಾಕ್ಷಿ ಸಮೇತ ಸಿಕ್ಕೆ ಸಿಗುತ್ತಾರೆ. ಅದು ನನಗೆ ಸರಿಯಾಗಿ ಗೊತ್ತಿಲ್ಲ, ಗೊತ್ತಿಲ್ಲದೆ ಇರುವದನ್ನ ಮಾತನಾಡುವುದು ಸರಿಯಲ್ಲ. ಪಾರ್ಟಿಗಳಲ್ಲಿ ಡ್ರಗ್ಸ್ ದಂದೆ ನಡೆಯತ್ತೆ ಅನ್ನೋದೆ ನನಗೆ ಗೊತ್ತಿಲ್ಲ. ನಾವು ಕೂಡ ಹಲವಾರು ಪಾರ್ಟಿಗಳಿಗೆ ಹೊಗ್ತೀವಿ, ಪಾರ್ಟಿಗಳಲ್ಲಿ ಯಾವತ್ತು ಈ ತರಹ ಮಾಡುವುದನ್ನ ನಾನು ನೋಡೆ ಇಲ್ಲ. ಏನೇ ಆಗಲಿ, ಸದ್ಯದಲ್ಲೆ ಎಲ್ಲ ವಿಷಯ ಗೊತ್ತಾಗತ್ತೆ.” 

“ಆದಷ್ಟು ಯುವಪೀಳಿಗೆ ಎಚ್ಚರಿಕೆಯಿಂದ ಇರಬೇಕು. ಈ ತರಹದ ವಿಷಯಗಳು ಒಂದು ತರಹದ ಎಚ್ಚರಿಕೆ ಗಂಟೆ ಇದ್ದ ಹಾಗೆ. ಇಂತಹ ಪರಿಸ್ಥಿತಿಯಲ್ಲಿ ಎಲ್ಲೇ ಹೋದಾಗಲೂ ಅಲ್ಲಿ ಏನೇನು ನಡೆಯುತ್ತೆ ಎಂಬುವುದರ ಬಗ್ಗೆ ಜಾಗ್ರತೆ ವಹಿಸಬೇಕು. ನಾನು ಯುವ ಜನತೆಗೆ ಕೈ ಮುಗಿದು ಬೇಡಿಕೊಳ್ಳುತ್ತೆನೆ, ಈ ತರಹದ ದುಶ್ಚಟಗಳಿಗೆ ದಾಸರಾಗಬೇಡಿ, ಇವುಗಳಿಂದ ಆದಷ್ಟು ದೂರವಿರಿ.” ಎಂದು ಯುವಜನತೆಗೆ ಮಾದ್ಯಮಗಳ ಮೂಲಕ ಸಂದೇಶ ನೀಡಿದ್ದಾರೆ.

ಇನ್ನೂ ಹೆಚ್ಚು ಕನ್ನಡ ನ್ಯೂಸ್ ಓದಲು ನೋಡುಮಗ.ಕಂ ಫೇಸ್ಬುಕ್ ಪೇಜ್ ಲೈಕ್ ಮಾಡಿ -->>

ಹಾಗೇಯೆ ಹ್ಯಾಟ್ರಿಕ್ ಹೀರೊ ಶಿವರಾಜಕುಮಾರ ಅವರು ಕೂಡ ಡ್ರಗ್ಸ್ ಪ್ರಕರಣದ ಬಗ್ಗೆ ಮಾದ್ಯಮದವರು ಕೇಳಿದ ಪ್ರಶ್ನೇಗಳಿಗೆ ಈ ರೀತಿಯಾಗಿ ಉತ್ತರಿಸಿದ್ದಾರೆ. “ಇಂಡಸ್ಟ್ರಿಯಲ್ಲಿ ಎಲ್ಲ ಇರತ್ತೆ, ಒಳ್ಳೆಯದ್ದು ಇರತ್ತೆ, ಕೆಟ್ಟದ್ದು ಇರತ್ತೆ ಆದರೆ ನಾವು ಯಾವುದನ್ನ ಆಯ್ಕೆ ಮಾಡಿಕೊಳ್ತಿವಿ ಅದರ ಮೇಲೆ ಆಧಾರವಾಗಿರುತ್ತದೆ. ನಾವು ಯಾರಿಗೂ ಏನು ಹೇಳೊಕಾಗಲ್ಲ. ಯಾವುದು ತಪ್ಪು, ಯಾವುದು ಒಳ್ಳೆಯದು ಅಂತ ಅವರಿಗೆ ಹೇಳೊಕೆ ನಾವ್ಯಾರು. ಅದೆಲ್ಲ ಅವರವರ ಮನಸ್ಸಿಗೆ ಸಂಬಂಧಿಸಿದ್ದು. ಫನ್ ಅಂತ ಹೇಳ್ತಾರೆ. ಆದರೆ ಆ ಫನ್ ವೀಪರೀತವಾಗಿರಬಾರದು. ಸೊಸೈಟಿ ಬೆಳಿತಾ ಇದೆ, ಅಪ್ ಡೇಟ್ಸ್ ಆಗ್ತಾ ಇದೆ, ಆದರೆ ನಾವು ಹುಷಾರಾಗಿರಬೇಕು. ನಾವು ಒಳ್ಳೆಯ ಕೆಲಸಗಳಿಗೆ ಮಾದರಿಯಾಗಿರಬೇಕು. ಏನು ಮಾಡೊಕಾಗಲ್ಲ. ಇವಾಗ ಸಿಬಿಐಗೆ ಎಲ್ಲ ಮಾಹಿತಿಗಳು ದೊರಿತಿದೆ. ಅವರು ಸರಿಯಾದ ಕ್ರಮಗಳನ್ನ ತೆಗೆದುಕೊಳ್ಳುತ್ತಿದ್ದಾರೆ. ಎಲ್ಲ ಮಾಹಿತಿಗಳು ಜನತೆಗೆ ತಿಳಿಯಲು ಸಮಯ ತೆಗೆದುಕೊಳ್ಳತ್ತೆ, ನಾವು ಕಾಯಬೇಕು ಅಷ್ಟೇ. 

ಇನ್ನೂ ಹೆಚ್ಚು ಕನ್ನಡ ನ್ಯೂಸ್ ಓದಲು ನೋಡುಮಗ.ಕಂ INSTAGRAM ಪೇಜ್ Follow ಮಾಡಿ -->>

ಏನೇ ಆಗಲಿ ಸಿಬಿಐ ತನಿಖೆ ಮಾಡುತ್ತಿದ್ದಾರೆ. ಯಾರು ಸರಿ ಮತ್ತು ಯಾರು ತಪ್ಪು ಅಂತ ಎಲ್ಲರಿಗೂ ಗೊತ್ತಾಗತ್ತೆ. ಸತ್ಯ ಆದಷ್ಟು ಬೇಗ ಹೊರಬರುತ್ತೆ.

(Visited 43 times, 1 visits today)

You Might Be Interested In

LEAVE YOUR COMMENT

Your email address will not be published. Required fields are marked *