ರಾಬರ್ಟ್ ಸಿನಿಮಾ ನಿರ್ಮಾಪಕನ ಹತ್ಯೆಗೆ ಸ್ಕೆಚ್! ಕಾರಣವೇನು?

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಿರುವ ರಾಬರ್ಟ್ ಸಿನಿಮಾದ ನಿರ್ಮಾಪಕ ಉಮಾಪತಿ ಅವರ ಕೊಲೆಗೆ ಸ್ಕೆಚ್ ಹಾಕಿದ್ದ 7ಜನ ಆರೋಪಿಗಳನ್ನು ಜಯನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಿರ್ಮಾಪಕ ಉಮಾಪತಿ ಅಲ್ಲದೆ ಅವರ ಸಹೋದರ ದೀಪಕ್ ಹಾಗು ಇನ್ನು 4 ಜನರನ್ನು ಕೊಲೆ ಮಾಡುವ ಸಂಚನ್ನು ಆರೋಪಿಗಳು ರೂಪಿಸಿದ್ದರು.

srinivas gowda

ಮಂಜುನಾಥ್ ಹಾಗೂ ಅವನ ಸಹಚರರು ನಿರ್ಮಾಪಕ ಉಮಾಪತಿ ಹಾಗೂ ಸಹೋದರ ದೀಪಕ್ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡುವ ಬಗ್ಗೆ ಸ್ಕೆಚ್ ಹಾಕುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಸುಳಿವು ಸಿಕ್ಕ ಕೂಡಲೇ ದಾಳಿ‌ ಮಾಡಿದ್ದ ಜಯನಗರ ಪೊಲೀಸರು ಸದ್ಯ ಏಳು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಗಳು ಟೆಂಪೋ ಟ್ರಾವೆಲ್ ನಲ್ಲಿ ಮಾರಕಾಸ್ತ್ರ ಹಿಡಿದು ಕುಳಿತ್ತಿದ್ದರು ಎಂದು ತಿಳಿದುಬಂದಿದೆ. ಕುಖ್ಯಾತ ರೌಡಿ ಶೀಟರ್ ಸೈಕಲ್ ರವಿ, ಸಹಚರ ಬೇಕರಿ ರಘು, ನಿರ್ಮಾಪಕ ಉಮಾಪತಿ ಹಾಗೂ ದೀಪಕ್ ಕೊಲೆಗೆ ಸ್ಕೆಚ್ ಹಾಕಿದ್ದರು ಎಂದು ತಿಳಿದುಬಂದಿದೆ.

robert movie

ಸಿನಿಮೀಯ ರೀತಿಯಲ್ಲಿ ನಡೆದ ದಾಳಿಯಲ್ಲಿ ಕುಖ್ಯಾತ ರೌಡಿ ಭಾರತ್ ಹಾಗು 7 ಜನರನ್ನು ಬಂಧಿಸಲಾಗಿದೆ.
ಹಣಕಾಸಿನ ವ್ಯವಹಾರ ಹಿನ್ನೆಲೆ ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂದು ತಿಳಿದು ಬಂದಿದೆ. ಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಉಳಿದ ಆರೋಪಿಗಳಿಗೆ ಬಲೇ ಬೀಸಿದ್ದಾರೆ.

English Version :

Jayanagar Police have arrested seven accused in the sketch of the murder of Robert Cinema’s producer Umapati, starring Challenging Star Darshan. Prosecutors allege the murder of producer Umapati along with his brother Deepak and 4 others. 

 

The police were informed that Manjunath and his associates were sketching about the deadly assault on producer Umapati and brother Deepak. Jayanagar police have immediately arrested seven people and are conducting inquiries. The accused are said to have been caught deadly at Tempo Travel. It is learned that the notorious rowdy cheater Cycle Ravi, companion bakery Raghu, producer Umapati and Deepak had sketched the murder.

(Visited 407 times, 1 visits today)

You Might Be Interested In

LEAVE YOUR COMMENT

Your email address will not be published. Required fields are marked *