ಬಘೀರನ ಅವತಾರದಲ್ಲಿ ಶ್ರೀಮುರಳಿ

ಹೊಂಬಾಳೆ ಫಿಲಂಸ್​ನಿಂದ ಶ್ರೀಮುರಳಿ ನಾಯಕತ್ವದಲ್ಲಿ ಬಘೀರ ಎಂಬ ಮತ್ತೊಂದು ಸಿನಿಮಾವನ್ನು ಘೋಷಣೆ ಆಗಿದೆ. ಈ ಚಿತ್ರಕ್ಕೆ ಪ್ರಶಾಂತ್ ನೀಲ್ ಚಿತ್ರಕಥೆ ಇರಲಿದೆ.

bhageera movie banner image

ಸ್ಯಾಂಡಲ್​ವುಡ್​ ಕಡೆ ಇಡೀ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡುವ ಸಿನಿಮಾಗಳನ್ನು ಮಾಡಿದ್ದು ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಹೊಂಬಾಳೆ ಫಿಲಂಸ್​ ಸಂಸ್ಥೆ. ಇಂತಹ ಪ್ರತಿಷ್ಠಿತ ಸಂಸ್ಥೆ ಹಾಗೂ ನಿರ್ದೇಶಕ ಕೆಜಿಎಫ್​ ನಂತರ ಇತ್ತೀಚೆಗಷ್ಟೆ ಪ್ರಭಾಸ್ ಜೊತೆಗೆ ಸಲಾರ್ ಎಂಬ ಮತ್ತೊಂದು ಪ್ಯಾನ್​ ಇಂಡಿಯಾ ಸಿನಿಮಾವನ್ನು ಪ್ರಕಟಿಸಿತ್ತು. ಸದ್ಯ ಇಂದು ಈ ಜೋಡಿ ಶ್ರೀಮುರಳಿ ನಾಯಕತ್ವದಲ್ಲಿ ಬಘೀರ ಎಂಬ ಮತ್ತೊಂದು ಸಿನಿಮಾವನ್ನು ಘೋಷಣೆ ಮಾಡಿದೆ.

prashanth neel twit abiut bagheera movie

ಈ ಚಿತ್ರಕ್ಕೆ ಪ್ರಶಾಂತ್ ನೀಲ್ ಚಿತ್ರಕಥೆ ವರೆದರೆ, ಡಿಆರ್ ಸೂರಿ ನಿರ್ದೇಶನ ಮತ್ತು ಸ್ಕ್ರೀನ್ ಪ್ಲೇ ಇರಲಿದೆ. ವಿಜಯ್ ಕಿರಂಗದೂರು ನಿರ್ಮಾಣ ಮಾಡುತ್ತಿದ್ದಾರೆ. ಇಂದು ಶ್ರೀಮುರಳಿ ಹುಟ್ಟುಹಬ್ಬದ ಪ್ರಯುಕ್ತ ಈ ಘೋಷಣೆಯಾಗಿದೆ. ಟೈಟಲ್ ಪೋಸ್ಟರ್ ರಿಲೀಸ್ ಆಗಿದ್ದು ಮುರಳಿ ಪೊಲೀಸ್ ಗೆಟಪ್​ನಲ್ಲಿ ಸಖತ್ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ.

ಇದು ಹೊಂಬಾಳೆ ಫಿಲಂಸ್ ನ 8ನೇ ಚಿತ್ರ. ಇತ್ತೀಚೆಗಷ್ಟೇ, ಹೊಂಬಾಳೆ ಫಿಲಂಸ್, ಪ್ರಶಾಂತ್ ನೀಲ್ ನಿರ್ದೇಶನದಲ್ಲಿ, ಪ್ರಭಾಸ್ ಅಭಿನಯದಲ್ಲಿ ಪ್ಯಾನ್ ಇಂಡಿಯನ್ ಸಿನಿಮಾ ಸಾಲಾರ್ ಅನ್ನು ಅನೌನ್ಸ್ ಮಾಡಿದ್ದರು. ಹೊಂಬಾಳೆ ಫಿಲಂಸ್ ನ ಈ ನಡೆಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸಹ ಬಂದಿತ್ತು.

(Visited 98 times, 1 visits today)

You Might Be Interested In

LEAVE YOUR COMMENT

Your email address will not be published. Required fields are marked *