ಸಂಚಾರಿ ವಿಜಯ್ ಕೊನೆ ಸಿನಿಮಾ ದಲ್ಲಿ ಅವರ ನಟನೆ ನೋಡಿದ್ರೆ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತೆ.

ರಸ್ತೆ ಅಪಘಾತದಲ್ಲಿ ನಮ್ಮನ್ನೆಲ್ಲ ಬಿಟ್ಟು ಹೋದ ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಸಾವಿನಲ್ಲೂ ತಮ್ಮ ಅಂಗಾಂಗಗಳನ್ನೂ ದಾನ ಮಾಡುವ ಮೂಲಕ ನಮ್ಮೆಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು

ಇದೀಗ ಅವರ ಅಭಿನಯದ ಕೊನೆಯ ಸಿನಿಮಾ ತಲೆದಂಡ ಸಿನೆಮಾದ ಟ್ರೈಲರ್ ಬಿಡುಗಡೆ ಗೊಂಡಿದ್ದು ಅವರ ಅಭಿನಯಕ್ಕೆ ಅಭಿಮಾನಿಗಳು ತಲೆಬಾಗಿದ್ದಾರೆ. ಇಂತ ಅಥಂಯುತ್ತಮ ನಟ ಇಷ್ಟು ಬೇಗ ನಮ್ಮನ್ನೆಲ್ಲ ಬಿಟ್ಟು ಹೋದರು ಎಂಬ ಕೊರಗಿನಲ್ಲಿದ್ದಾರೆ.

ಇತ್ತೀಚಿಗೆ ತಲೆದಂಡ ಸಿನಿಮಾ ಡಬ್ಬಿಂಗ್ ಮಾಡುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಅವರ ಅಭಿನಯ ಹಾಗು ಡಬ್ಬಿಂಗ್ ಮಾಡುವ ರೀತಿ ನೋಡಿ ಎಷ್ಟೋ ಜನರು ಕಣ್ಣೀರು ಹಾಕಿದ್ದು ಉಂಟು.

ತಲೆದಂಡ ಡಬ್ಬಿಂಗ್ ವೇಳೆ ಸಂಚಾರಿ ವಿಜಯ್ ಅಭಿನಯದ ವಿಡಿಯೋ ಕೆಳಗೆ ನೋಡಿ

ಚೆನ್ನೈ ನಲ್ಲಿರುವ ಅಮೇರಿಕಾ ರಾಯಭಾರ ಕಚೇರಿ ವಿಜಯ್ ರವರ ಸಾವಿಗೆ ಸಂತಾಪವನ್ನು ಕನ್ನಡದಲ್ಲೇ ಟ್ವೀಟ್ ಮಾಡುವುದರ ಮೂಲಕ ತಿಳಿಸಿದ್ದಾರೆ

us tweet nodumaga

ಏನೇ ಆದರೂ ಅತ್ಯುತ್ತಮ ನಟನನ್ನು ಸ್ಯಾಂಡಲ್ವುಡ್ ಕಳೆದು ಕೊಂಡಿದೆ, ಸಂಚಾರಿ ವಿಜಯ್ ಆತ್ಮಕ್ಕೆ ಶಾಂತಿ ಸಿಗಲಿ ಹಾಗು ಅವರ ಕುಟುಂಬದವರಿಗೆ ವಿಜಯ್ ರನ್ನ ಕಳೆದುಕೊಂಡ ನೋವನ್ನು ಭರಿಸುವ ಶಕ್ತಿ ನೀಡಲಿ.

ಸಂಚಾರಿ ವಿಜಯ್ರನ್ನ ಬಹಳ ಹತ್ತಿರದಿಂದ ಕಂಡಿದ್ದ ಮಂಡ್ಯ ರಮೇಶ್ ವಿಜಯ್ ಜೊತೆಗಿನ ಒಡನಾಟವನ್ನ ನೆನಪಿಸಿಕೊಂಡಿದ್ದಾರೆ.

ಸಂಚಾರಿ ವಿಜಯ್‌ ನಿರ್ಗಮನ ವಿಧಿಯ ಕ್ರೂರ ವ್ಯಂಗ್ಯದ ತಲೆದಂಡ. ಕಳೆದ ಎರಡು ದಿನಗಳಿಂದ ಎಲ್ಲರೂ ವಿಜಯ್‌ ಪವಾಡ ನಡೆದು ಗುಣಮುಖವಾಗಿ ಬರಲಿದ್ದಾನೆ ಎನ್ನುವ ಭರವಸೆ ಹೊಂದಿದ್ದೆವು. ಹೀಗಾಗದೇ ಇದ್ದಿದ್ದು ಆತನ ಒಡನಾಡಿಗಳಿಗೆ, ಸಮೀಪದವರಿಗೆ, ಅವನ ಜೊತೆ ಕಾರ್ಯನಿರ್ವಹಿಸಿದವರಿಗೆ ಹಾಗೂ ಅವನನ್ನು ಅರ್ಥ ಮಾಡಿಕೊಂಡವರಿಗೆ ಇವತ್ತು ಇಷ್ಟೊಂದು ಆಘಾತವಾಗಲು ಕಾರಣ. ಆದರೆ ವೈದ್ಯಕೀಯ ವಿಜ್ಞಾನಕ್ಕೂ ಮಿತಿ ಇದೆ ಅಲ್ಲವೇ. ನನ್ನನ್ನು ಸೇರಿಸಿ ಹಲವರು ಈಗ ಪರಿತಪಿಸುತ್ತಿರಲು ಒಂದು ಕಾರಣವಿದೆ. ನಮಗೆಲ್ಲರಿಗೂ ಮೊದಲಿನಿಂದಲೂ ಆತನ ಗುಣಗಳು ಪ್ರಭಾವ ಬೀರಿತ್ತು. ರಾಷ್ಟ್ರಪ್ರಶಸ್ತಿ ಬಂದರೂ ವಿಜಯ್‌ ಎಲ್ಲರೊಂದಿಗೂ ಸರಳವಾಗಿದ್ದರು. ಗ್ರಾಮೀಣ ಭಾಗದಿಂದ ಬಂದಿರುವುದು ಹಾಗೂ ರಂಗಭೂಮಿ ನೆಲೆಯಿಂದ ಬಂದ ಕಾರಣದಿಂದ ತುಂಬಾ ಸಹಜವಾಗಿ, ಆಪ್ತನಾಗಿ ಸಜ್ಜನಿಕೆಯಿಂದ ನಡೆದುಕೊಂಡಿದ್ದ ಸರಳ ವ್ಯಕ್ತಿ ಸಂಚಾರಿ ವಿಜಯ್‌. ಯಾರನ್ನೂ ನೋಯಿಸದೇ ಇರುವ ಅವನ(ಒಡನಾಡಿ ಆದ ಕಾರಣ ಏಕವಚನ ಬಳಸುತ್ತಿದ್ದೇನೆ) ಮಾತಿನಲ್ಲಿ ಮುಗ್ಧ ಮಗುವಿನ ನಗು ನನಗೆ ಕಾಣಿಸುತ್ತಿತ್ತು. ಮಿತ ಭಾಷಿ, ಮೃದು ಭಾಷಿ ಆತ .

ತಲೆದಂಡ ಸಿನಿಮಾ ನಟನೆಗೂ ಕೂಡ ಸಂಚಾರಿ ವಿಜಯ್ ಗೆ ರಾಷ್ಟ್ರಪ್ರಶಸ್ತಿ ಸಿಗುತ್ತಿತ್ತು ಎಂದು ಮಂಡ್ಯ ರಮೇಶ್ ಹೇಳಿದ್ದಾರೆ.

ರಂಗಭೂಮಿಯಲ್ಲಿ ಇದ್ದ ಕಾರಣದಿಂದಾಗಿ ಒಂದು ಪಾತ್ರವನ್ನು ಆಯ್ಕೆ ಮಾಡಿಕೊಳ್ಳುವಾಗ, ನಾವು ಯಾರೂ ಮಾಡದೇ ಇದ್ದ ಪಾತ್ರವನ್ನು ಆತ ಮಾಡಿದ. ಒಳ್ಳೆಯ ಪಾತ್ರವನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಆತ ಸೃಷ್ಟಿಸಿಕೊಂಡ. ‘ಸಣ್ಣ ವಯಸ್ಸಿನಲ್ಲೇ ನಿನಗೆ ರಾಷ್ಟ್ರಪ್ರಶಸ್ತಿ ಸಿಕ್ಕಿದೆ, ಮುಂದೆ ನಿನಗೆ ಆಸ್ಕರ್‌’ ಎಂದು ನಾನು ಹೇಳಿದಾಗ ‘ಸಾರ್‌, ರಾಷ್ಟ್ರಪ್ರಶಸ್ತಿ ತೆಗೆದುಕೊಂಡರೂ, ನಿಮ್ಮ ಹಾಗೆ ರಂಗಮಂದಿರ ಕಟ್ಟಿಸೋಕೆ, ಶಾಲೆ ಕಟ್ಟಿಸಲು ಅದನ್ನು ವರ್ಷದಿಂದ ನಡೆಸುಕೊಂಡು ಹೋಗಲು ಸಾಧ್ಯವೇ. ನೀವು ಗ್ರೇಟ್‌’ ಎನ್ನುವವನು. ‘ನಿನಗೂ ಈ ಸಾಮರ್ಥ್ಯವಿದೆ, ನನಗೆ ಸಂಘಟನೆಯಲ್ಲಿ ಶಕ್ತಿ ಇದ್ದರೆ ನಿನಗೆ ಆ ಶಕ್ತಿ ನಟನೆಯಲ್ಲಿದೆ’ ಎಂದು ನಾನು ಹೇಳುತ್ತಿದೆ. ಆತ ಬದುಕಿದ್ದರೆ ಇನ್ನೂ ಹೆಚ್ಚಿನ ಸಾಧನೆ ಮಾಡುತ್ತಿದ್ದ .

(Visited 363 times, 1 visits today)

You Might Be Interested In

LEAVE YOUR COMMENT

Your email address will not be published. Required fields are marked *