ನಿರಂಜನ ಸುಧೀಂದ್ರ ಅಭಿನಯದ ಸೂಪರ್ ಸ್ಟಾರ್ ಚಿತ್ರದ ಟೀಸರ್ ಗೆ ರಾಕಿಂಗ್ ಸ್ಟಾರ್ ಯಶ್ ಹಿನ್ನೆಲೆ ಧ್ವನಿ

ನಟ ನಿರಂಜನ ಸುಧೀಂದ್ರ ರವರು ಸ್ಯಾಂಡಲ್ ವುಡ್ ಚಿತ್ರರಂಗದ ಯುವ ಪ್ರತಿಭೆ. ರಮೇಶ್ ವೆಂಕಟೇಶ್ ಬಾಬು ಸೂಪರ್ ಸ್ಟಾರ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಈ ಚಿತ್ರದಲ್ಲಿ ನಿರಂಜನ ಸುಧೀಂದ್ರ ರವರು ನಾಯಕ ನಟರಾಗಿ ಕಾಣಿಸಿಕೊಳ್ಳಲಿದ್ದಾರೆ. ಆಗಸ್ಟ್ 14 ರಂದು ರಿಯಲ್ ಸ್ಟಾರ್ ಉಪೇಂದ್ರ ಮತ್ತು ಅವರ ಪತ್ನಿ ಪ್ರಿಯಾಂಕಾ ಅವರು ಲಾಂಚ್ ಮಾಡಿದ್ದಾರೆ.  

ಹೊಸಬರ ಚಿತ್ರಕ್ಕೆ ಉಪೇಂದ್ರ ಅವರು ನಾಯಕನಟರಾಗಿ ನಟಿಸಿದ ಚಿತ್ರ “ಸೂಪರ್ ಸ್ಟಾರ” ಎಂದು ಹೆಸರಿಡಲಾಗಿದ್ದು, ಮೈಲಾರಿ ಪ್ರೊಡಕ್ಷನ್ ದೊಂದಿಗೆ, ಆರ್‌ವಿಬಿ ಸಿನೆಮಾಸ್ ಬ್ಯಾನರ್ ಅಡಿಯಲ್ಲಿ ಸೂಪರ್ ಸ್ಟಾರ ಚಿತ್ರವನ್ನು ನಿರ್ಮಾಣ ಮಾಡಲಾಗುತ್ತಿದೆ.

nodu maga website logo

ಇನ್ನೂ ಹೆಚ್ಚು ಕನ್ನಡ ನ್ಯೂಸ್ ಓದಲು ನೋಡುಮಗ.ಕಂ ಫೇಸ್ಬುಕ್ ಪೇಜ್ ಲೈಕ್ ಮಾಡಿ -->>

ರಿಯಲ್ ಸ್ಟಾರ್ ಉಪೇಂದ್ರ , ಅವರ ಪತ್ನಿ ಪ್ರಿಯಾಂಕ ಮತ್ತು ಕೆಜಿಎಫ್ ಹೀರೋ ರಾಕಿಂಗ ಸ್ಟಾರ ಯಶ್ ಅವರು ಸ್ಯಾಂಡಲ್ ವುಡನ ಹೊಸ ಪ್ರತಿಭೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ. ಮತ್ತು ರಾಕಿಂಗ ಸ್ಟಾರ ಯಶ್ ಅವರು ಸೂಪರ್ ಸ್ಚಾರ್ ಸಿನಿಮಾದ ಟೀಸರ್ ಗೆ ಧ್ವನಿ ನೀಡಿದ್ದಾರೆ.  ಸೂಪರ್ ಸ್ಚಾರ್ ಸಿನಿಮಾದ ಟೀಸರ್, ನಟ ನಿರಂಜನ ಸುಧೀಂದ್ರರವರು ಹುಟ್ಟು ಹಬ್ಬದ ದಿನದಂದು ಅಂದರೆ ಅಗಷ್ಟ ೨೦ ರಂದು ಬಿಡುಗಡೆಯಾಗಲಿದೆ. 

Upendra, priyanka, yash

ಸೂಪರ್ ಸ್ಟಾರ್ ಚಿತ್ರದಲ್ಲಿ ನಿರಂಜನ್ ರವರು ಸೂಪರ್ ಡಾನ್ಸರ್ ಪಾತ್ರದಲ್ಲಿ ನಟಿಸಲಿದ್ದು, ನಾಯಕಿ ಹಾಗೂ ಉಳಿದ ಪಾತ್ರಗಳ ಕಲಾವಿದರ ಆಯ್ಕೆಯಲ್ಲಿ ಚಿತ್ರತಂಡ ನಿರತವಾಗಿದೆ. ನಿರಂಜನ್ ರವರು ಪಾತ್ರಕ್ಕಾಗಿ ತಮ್ಮ ಸಂಪೂರ್ಣ ನೋಟವನ್ನೆೇ ಬದಲಾಯಿಸಿಕೊಂಡಿದ್ದಾರೆ ಮತ್ತು ಅಕ್ಟೋಬರ್‌ನಲ್ಲಿ ಚಿತ್ರೀಕರಣವನ್ನು ಪುನರಾರಂಭಿಸಲು ಸೂಪರ್ ಸ್ಟಾರ ಚಿತ್ರತಂಡವು ಯೋಜಿಸಿದೆ. ಸಂಗೀತ ನಿರ್ದೇಶಕರಾಗಿ ರಾಘವೇಂದ್ರ ವಿ, ಛಾಯಾಗ್ರಾಹಕರಾಗಿ ಯೋಗಿ ಮತ್ತು ತಾಂತ್ರಿಕ ಸಿಬ್ಬಂದಿಯಾಗಿ ಸಂಪಾದಕ ವಿಜಯ್ ಎಂ ಕುಮಾರ್  ಭಾಗವಾಗಲಿದ್ದಾರೆ ಎಂದು ಖಚಿತಪಡಿಸಲಾಗಿದೆ. 

ಇನ್ನೂ ಹೆಚ್ಚು ಕನ್ನಡ ನ್ಯೂಸ್ ಓದಲು ನೋಡುಮಗ.ಕಂ INSTAGRAM ಪೇಜ್ Follow ಮಾಡಿ -->>

ನೋಡುಮಗ.ಕಂ ವಿಡಿಯೋ ನ್ಯೂಸ್ ಗಳನ್ನು ನೋಡಲು ನಮ್ಮ   YOUTUBE  ಚಾನೆಲ್  SUBSCRIBE  ಮಾಡಿ — >>

(Visited 247 times, 1 visits today)

You Might Be Interested In

LEAVE YOUR COMMENT

Your email address will not be published. Required fields are marked *