ಕೆಜಿಎಫ್ ಚಿತ್ರದ ಅಧೀರನಿಗೆ ಶ್ವಾಸಕೋಶದ ಕ್ಯಾನ್ಸರ್

 2020 ಎಲ್ಲರ ಪಾಲಿಗೆ ಅತ್ಯಂತ ಕೆಟ್ಟ ವರ್ಷವಾಗಿದೆ. ಅದರಲ್ಲೂ ಚಿತ್ರರಂಗದ ಪಾಲಿಗೆ ಕರಾಳ ವರ್ಷವಾಗಿದೆ. ಕನ್ನಡ ಚಿತ್ರರಂಗ ಮಾತ್ರವಲ್ಲ ಇಡೀ ಭಾರತ ಚಿತ್ರರಂಗದಲ್ಲಿ ಈ ವರ್ಷ ನಾವು ಕೆಲವು ಅತ್ಯುನ್ನತ ಯುವನಟ ಮತ್ತು ಹಿರಿಯ ನಟರನ್ನು ಕಳೆದುಕೊಂಡಿದ್ದೆವೆ. ಇಂತಹ ಸಂದರ್ಬದಲ್ಲಿ ಕೊರೊನಾ ಇಡೀ ಜಗತ್ತನ್ನೆ ಆವರಿಸಿಕೊಂಡಿದೆ. ಜನಸಾಮನ್ಯರ ಜೊತೆಗೆ ಎಷ್ಟೋ ನಟ ಮತ್ತು ನಟಿಯರಿಗೆ ಕೊರೊನಾ ಪಾಸಿಟಿವ್ ಆಗಿದೆ. ಎಷ್ಟೋ ಚಿತ್ರಗಳು ಕೊರೊನಾದಿಂದಾಗಿ ಬಿಡುಗಡೆಯಾಗದೆ ಅರ್ಧಕ್ಕೆ ನಿಂತಿವೆ. ಅಂತಹ ಚಿತ್ರಗಳಲ್ಲಿ ಕನ್ನಡದ ಬ್ಲಾಕಬ್ಲಸ್ಟರ್ ಚಿತ್ರ ಕೆಜಿಎಫ್ ಕೂಡ ಒಂದು. 

ಇನ್ನೂ ಹೆಚ್ಚು ಕನ್ನಡ ನ್ಯೂಸ್ ಓದಲು ನೋಡುಮಗ.ಕಂ ಫೇಸ್ಬುಕ್ ಪೇಜ್ ಲೈಕ್ ಮಾಡಿ -->>

k.g.f 2

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕನ್ನಡ ಚಿತ್ರರಂಗದ ಅತ್ಯುನ್ನತ ಚಿತ್ರ ಅಂದರೆ  ಕೆಜಿಎಫ್. ಈ ಚಿತ್ರ ಕರ್ನಾಟಕ ಮಾತ್ರವಲ್ಲದೆ ಇಡೀ ಭಾರತದಲ್ಲೆ ಸಂಚಲನ ಮೂಡಿಸಿದೆ. ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆಯನ್ನ ಸೃಷ್ಟಿ ಮಾಡುವುದರ ಮೂಲಕ ದೊಡ್ಡ ಯಶಸ್ಸನ್ನು ತಂದು ಕೊಟ್ಟಿದೆ. ಈ ಚಿತ್ರವು ಕೇವಲ ಭಾರತ ಮಾತ್ರವಲ್ಲದೆ, ಜಗತ್ತಿನ ಹಲವು ದೇಶಗಳಲ್ಲಿ ಒಳ್ಳೆಯ ಹೆಸರು ಮಾಡಿದೆ. ಕೆಜಿಎಫ್ ಮೊದಲನೆ ಭಾಗ ಬಿಡುಗಡೆಯಾಗಿದ್ದು, ಎಲ್ಲ ಅಭಿಮಾನಿಗಳು ಎರಡನೇ ಭಾಗಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. 

ನಮಗೆಲ್ಲರಿಗೂ ತಿಳಿದ ಹಾಗೆ, ಕೆಜಿಎಫ್ ಚಿತ್ರದ ಎರಡನೇ ಭಾಗದಲ್ಲಿ ದೊಡ್ಡ ದೊಡ್ಡ ನಟರು ನಟಿಸಿದ್ದಾರೆ. ಆದರೆ ಈಗ ಕೆಜಿಎಫ್ ಚಿತ್ರತಂಡಕ್ಕೆ ದೊಡ್ಡ ಶಾಕಿಂಗ್ ಸುದ್ದಿಯೊಂದು ಬಂದಿದೆ. ಅದೇನೆಂದರೆ, ಕೆಜಿಎಫ್ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ ನಟರೊಬ್ಬರಿಗೆ ಶ್ವಾಸಕೋಶದ ಕ್ಯಾನ್ಸರ್ ಆಗಿದೆ. ಆ ನಟ ಬೇರೆ ಯಾರೂ ಅಲ್ಲ, ಅವರೇ ಬಾಲಿವುಡನ ಖ್ಯಾತ ನಟ ಸಂಜಯ ದತ್.  ಹೌದು ಸ್ನೇಹಿತರೆ, ನೀವು ಕೇಳುತ್ತಿರುವುದು ನಿಜ. ಕೆಜಿಎಫ್ ಮುಂದಿನ ಭಾಗದಲ್ಲಿ ಅಧೀರನ ಪಾತ್ರ ಯಾರು ಮಾಡುತ್ತಾರೆ ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತಿತ್ತು. ತದನಂತರ ಬಾಲಿವುಡನ ಖ್ಯಾತ ನಟ ಸಂಜಯ  ದತ್ ಅವರು ಕೆಜಿಎಫ್ ಚಿತ್ರದಲ್ಲಿ ಅಧೀರನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆಂದು ತಿಳಿದು ಬಂದಿತು. ಈಗ ಅವರಿಗೆ ಶ್ವಾಸಕೋಶದ್ ಕ್ಯಾನ್ಸರ್ ಆಗಿದೆ ಎಂದು ಸುದ್ದಿ ಬಂದಿದೆ. 

nodu maga website logo
sanjay dutt suffer from cancer

ಸಂಜಯ್ ದತ್ ಅವರಿಗೆ ಕಳೆದ ಶನಿವಾರದಂದು ಉಸಿರಾಟದ ತೊಂದರೆಯುಂಟಾದ ಕಾರಣ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಕೊರೊನಾ ಆಗಿರಬಹುದೆಂದು ಸಂಜಯ್ ದತ್ ಅವರಿಗೆ ಕೊರೊನಾ ಪರೀಕ್ಷೆ ಮಾಡಲಾಗಿತ್ತು. ಆದರೆ ಅದು ಕೊರೊನಾ ನೆಗೆಟಿವ್ ಎಂದು ವರದಿ ಬಂದಿತ್ತು. “ನಾನು ಆರೋಗ್ಯವಾಗಿದ್ದೆನೆ. ನಾನು ಪ್ರಸ್ತುತ ವೈದ್ಯಕೀಯ ವೀಕ್ಷಣೆಯಲ್ಲಿದ್ದೇನೆ ಮತ್ತು ನನ್ನ COVID-19 ನೆಗೆಟಿವ್ ಎಂದು ವರದಿ ಬಂದಿದೆ. ಲೀಲಾವತಿ ಆಸ್ಪತ್ರೆಯ ವೈದ್ಯರು, ನರ್ಸಗಳ ಮತ್ತು ಸಿಬ್ಬಂದಿಗಳ ಸಹಾಯ ಮತ್ತು ಆರೈಕೆಯೊಂದಿಗೆ, ನಾನು ಒಂದು ಅಥವಾ ಎರಡು ದಿನಗಳಲ್ಲಿ ಮನೆಗೆ ಹಿಂದಿರುಗುತ್ತೆನೆ. ನಿಮ್ಮ ಶುಭಾಶಯ ಮತ್ತು ಆಶೀರ್ವಾದಗಳೊಂದಿಗೆ ನಾನು ಚೆನ್ನಾಗಿದ್ದೆನೆ, ಎಲ್ಲರಿಗೂ ಧನ್ಯವಾದಗಳು”ಎಂದು ಟ್ಟೀಟ ಮಾಡುವುದರ ಮೂಲಕ ಹಂಚಿಕೊಂಡಿದ್ದಾರೆ.

ಆದರೆ ಸಂಜಯ ದತ್ ಅವರಿಗೆ ನಿನ್ನೆ ಕ್ಯಾನ್ಸರ್ ಟೆಸ್ಟ್ ಮಾಡಿದಾಗ, ಅವರಿಗೆ ಶ್ವಾಸಕೋಶದ ಕ್ಯಾನ್ಸರ್ ಇರುವುದು ದೃಢಪಟ್ಟಿದೆ. ಆದ್ದರಿಂದ ಸಂಜಯ್ ದತ್ ಅವರು ಹೆಚ್ಚಿನ ಚಿಕಿತ್ಸೆಗಾಗಿ ಯುಎಸ್ ಗೆ ತೆರೆಳಿದ್ದಾರೆ. ಇನ್ನು ಕೆಜಿಎಫ್ ಚಿತ್ರದ ಕೆಲವು ಶೂಟಿಂಗ್ ಭಾಕಿ ಉಳಿದುಕೊಂಡಿದ್ದರಿಂದ, ಚಿತ್ರತಂಡ ಸಂಕಷ್ಟಕ್ಕೆ ಸಿಲುಕಿಕೊಂಡಿದೆ.  ಆದರೆ, ಸಂಜಯ್ ದತ್ ಅವರು, ಆದಷ್ಟು ಬೇಗ ಗುಣಮುಖರಾಗಲಿ ಎಂದು ಇಡೀ ಕನ್ನಡ ಮತ್ತು ಬಾಲಿವುಡ ಚಿತ್ರತಂಡ ಹಾಗೂ ಅವರ ಅಪಾರ ಅಭಿಮಾನಿಗಳು ಹಾರೈಸುತ್ತಿದ್ದಾರೆ.

ನೋಡುಮಗ.ಕಂ ವಿಡಿಯೋ ನ್ಯೂಸ್ ಗಳನ್ನು ನೋಡಲು ನಮ್ಮ   YOUTUBE  ಚಾನೆಲ್  SUBSCRIBE  ಮಾಡಿ — >>

(Visited 70 times, 1 visits today)

You Might Be Interested In

LEAVE YOUR COMMENT

Your email address will not be published. Required fields are marked *