ಸ್ಯಾಂಡಲ್ ವುಡ್ ಸ್ಟಾರಗಳ ಮನೆಯಲ್ಲಿ ರಕ್ಷಾಬಂಧನದ ಸಂಭ್ರಮ

ರಕ್ಷಾಬಂಧನ ಎಂಬುದು ಎಲ್ಲ ಸಹೋದರ ಮತ್ತು ಸಹೋದರಿಯರ ವಿಶೇಷ ಬಂಧವನ್ನು ಸೂಚಿಸುತ್ತದೆ. ರಕ್ಷಾ ಬಂಧನದ ಅರ್ಥರಕ್ಷಣೆಯ ಗಂಟು“, ಇದು ಮಾನವರಲ್ಲಿ ಅತ್ಯಂತ ಸುಂದರವಾದ ಭಾವನೆಯ ಸಾಂಕೇತಿಕ ನವೀಕರಣವಾಗಿದೆ. ರಕ್ಷಾ ಬಂಧನ ಒಂದು ಶುಭ ಹಿಂದೂ ಹಬ್ಬವಾಗಿದ್ದು, ಆಗಸ್ಟ್ 03 ಸೋಮವಾರ ದೇಶಾದ್ಯಂತ ಆಚರಿಸಲಾಗಿದೆ. ಸ್ಯಾಂಡಲ್ವುಡ್ತಾರೆಯರು ತಮ್ಮ ಬ್ಯುಸಿ ಲೈಫನಿಂದ  ಬಿಡುವು ಮಾಡಿಕೊಂಡು ರಕ್ಷಾಬಂಧನ ಹಬ್ಬ ಆಚರಿಸಿದ್ದಾರೆ. ನಟಿಯರು ತಮ್ಮ ಪ್ರೀತಿಯ ಅಣ್ಣ, ತಮ್ಮಂದಿರಿಗೆ ರಾಖಿ ಕಟ್ಟಿದರೆ, ನಟರು ತಮ್ಮ ತಂಗಿ, ಅಕ್ಕಂದಿರಿಂದ ರಾಖಿ ಕಟ್ಟಿಸಿಕೊಂಡು, ಅವರಿಗೆ ಉಡುಗೊರೆ ಕೊಟ್ಟು ಸಂಭ್ರಮಿಸಿದ್ದಾರೆ

ರಾಕಿಂಗ ಸ್ಟಾರ ಯಶ್ ಕುಟುಂಬದಲ್ಲಿ ರಕ್ಷಾಬಂಧನದ ಸಂಭ್ರಮ

Yash and sister nandini
for promotions contact nodumaga

ರಾಕಿಂಗ ಸ್ಟಾರ ಯಶ್ ರವರ ಮುದ್ದಿನ ತಂಗಿ ನಂದಿನಿಯವರು, ಯಶ್ ರವರಿಗೆ ರಾಖಿ ಕಟ್ಟಿದ್ದಾರೆ. ರಕ್ಷಾಬಂಧನದ ದಿನದಂದು ಅವರ ಜೊತೆ ಕಳೆದ ಖುಷಿಯಾದ ಕ್ಷಣಗಳನ್ನ ನಂದಿನಿಯವರು ಕ್ಲಿಕ್ಕಿಸಿ ತಮ್ಮ ಇನಸ್ಟಾಗ್ರಾಮ್ ನಲ್ಲಿ ಹಂಚಿಕೊಡ್ಡಿದ್ದಾರೆ. ಮತ್ತುನನ್ನ ಕೈಯಲ್ಲಿ ರಾಖಿ ಇರುವವರೆಗೆ ನನಗೆ ವರಿ ಇಲ್ಲ. ರಾಖಿ ಇರುವವರೆಗೆ ನೀನು ವರಿ ಮಾಡಬೇಕಿಲ್ಲ. ಹ್ಯಾಪಿ ರಕ್ಷಾಬಂಧನ್ಎಂದು ತಮ್ಮ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.  

Yash family

ಅಷ್ಟೆೇ ಅಲ್ಲ, ಯಶ್ ಮತ್ತು ರಾಧಿಕಾ ದಂಪತಿಯ ಮುದ್ದಿನ ಮಕ್ಕಳಾದ ಐರಾ ಮತ್ತು ಆರ್ಯ, ಇವರು ಕೂಡ ತಮ್ಮ ಮೊದಲನೆ ವರ್ಷದ ರಕ್ಷಬಂಧನವನ್ನು ಆಚರಿಸಿ ಸಂಭ್ರಮಿಸಿದ್ದಾರೆ. ಐರಾ ತನ್ನ ಪ್ರೀತಿಯ ತಮ್ಮ ಆರ್ಯನಿಗೆ ರಾಖಿ ಕಟ್ಟಿ, ಸಿಹಿ ಮುತ್ತು ಕೊಟ್ಟಿದ್ದಾಳೆ. ಕ್ಷಣಗಳನ್ನು ಯಶ್ ಮತ್ತು ರಾದಿಕಾ ದಂಪತಿ ಕ್ಲಿಕ್ಕಿಸಿ ಸೊಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇನ್ನೂ ಹೆಚ್ಚು ಕನ್ನಡ ನ್ಯೂಸ್ ಓದಲು ನೋಡುಮಗ.ಕಂ ಫೇಸ್ಬುಕ್ ಪೇಜ್ ಲೈಕ್ ಮಾಡಿ -->>

ದರ್ಶನ್‌ಗೆ ರಕ್ಷಾಬಂಧನದ ತಿಲಕ

Darshan

ಚಾಲೆಂಜಿಂಗ್‌ ಸ್ಟಾರ್ ದರ್ಶನ್ ಪ್ರತಿ ವರ್ಷವೂ ರಕ್ಷಾ ಬಂಧನವನ್ನು ತಪ್ಪದೇ ಆಚರಿಸುತ್ತಾರೆ. ಡಿ ಬಾಸ್ ದರ್ಶನ ಅವರಿಗೆ ಸಹೋದರಿ ಕವಿತಾ ರಾಖಿ ಕಟ್ಟಿ, ತಿಲಕವನ್ನಿಟ್ಟು, ಆರತಿ ಮಾಡಿ ರಕ್ಷಾಬಂಧನದ ಶುಭ ಹಾರೈಸಿದ್ದಾರೆ. ರಾಖಿ ಕಟ್ಟಿಸಿಕೊಂಡಿರುವ ದರ್ಶನ್, ಸಹೋದರಿ ಕವಿತಾರಿಗೆ ಮನದುಂಬಿ ಹಾರೈಸಿದ್ದಾರೆ.

ಮಾಲಾಶ್ರೀ ಮನೆಯಲ್ಲಿ ರಾಖಿಯ ಸಂಭ್ರಮ

ಸ್ಯಾಂಡಲ್ ವುಡನ ಕನಸಿನ ರಾಣಿ ಮಾಲಾಶ್ರೀಯವರ ಮನೆಯಲ್ಲೂ ರಕ್ಷಾಬಂಧನದ ಸಂಭ್ರಮ ಜೋರಾಗಿದೆ. ಮಾಲಾಶ್ರೀಯವರು ಸಹೋದರನಿಗೆ ಮಾತ್ರವಲ್ಲದೆ, ಸಹೋದರಿಗೂ ಕೂಡ ರಾಖಿಯನ್ನು ಕಟ್ಟಿ, ಆರತಿ ಮಾಡಿ ಹಾರೈಸಿದ್ದಾರೆ. ಅವರ ಮಕ್ಕಳೂ, ಸಹೋದರರಿಗೆ ರಾಖಿಯನ್ನು ಕಟ್ಟಿ ಸಂಭ್ರಮಿಸಿದ್ದಾರೆ. ಈ ಖುಷಿಯಾದ ಕ್ಷಣಗಳನ್ನು ಮಾಲಾಶ್ರೀಯವರು ತಮ್ಮ ಇನಸ್ಟಾಗ್ರಾಮನಲ್ಲಿ ಹಂಚಿಕೊಂಡಿದ್ದಾರೆ.