ಜನ್ಮ ದಿನದಂದೇ ಪವನ್ ವಡೆಯರ್ ಗೆ ಮರೆಯಲಾಗದ ಉಡುಗೊರೆ ನೀಡಿದ ಪತ್ನಿ

ಇಂದು ಪವನ್ ವಡೆಯರ್ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ, ವಿಶೇಷ ಅಂದ್ರೆ ತಮ್ಮ ಹುಟ್ಟು ಹಬ್ಬದ ದಿನದಂದೇ ಪತ್ನಿ ಅಪೇಕ್ಷಾ ಪುರೋಹಿತ್ ಗಂಡು ಮಗುವಿಗೆ ಜನ್ಮ ನೀಡಿ ಎಂದು ಮರೆಯಲಾಗದ ಉಡುಗೊರೆಯನ್ನ ತನ್ನ ಪತಿಗೆ ನೀಡಿದ್ದಾರೆ.

pavan wadeyar

ಹೌದು, ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ನಿರ್ದೇಶಕ ಪವನ್ ಒಡೆಯರ್ ಹಾಗೂ ನಟಿ ಅಪೇಕ್ಷಾ ಪುರೋಹಿತ್ ದಂಪತಿಗೆ ಗಂಡು ಮಗುವಿನ ಜನನವಾಗಿದೆ.

ಈ ಖುಷಿಯ ವಿಚಾರವನ್ನು ಪವನ್ ಒಡೆಯರ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ಪತ್ನಿ ಹಾಗೂ ಮಗು ಆಸ್ಪತ್ರೆಯಲ್ಲಿರುವ ಫೋಟೋವನ್ನು ಪವನ್ ತಮ್ಮ ಇನ್‍ಸ್ಟಾ, ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಅಲ್ಲದೆ ನನ್ನ ಜನ್ಮದಿನದಂದೇ ವಿಶ್ವದ ಅತ್ಯಂತ ಅದ್ಭುತ ಉಡುಗೊರೆ ದೊರೆತಿದ್ದು, ಗಂಡು ಮಗುವಿನ ಜನನವಾಗಿದೆ. ಜೈ ಚಾಮುಂಡೇಶ್ವರಿ ಎಂದು ಬರೆದುಕೊಂಡಿದ್ದಾರೆ.

(Visited 199 times, 1 visits today)

You Might Be Interested In

LEAVE YOUR COMMENT

Your email address will not be published. Required fields are marked *