ಹಿಂದಿ ಆಲ್ಬಂ ನಲ್ಲಿ ಕನ್ನಡತಿ ಹೆಜ್ಜೆ

ಕನ್ನಡತಿ ರಶ್ಮಿಕಾ ಮಂದಣ್ಣ ಹೆಸರು ಕೇಳಿದರೆ ಸಾಕು ಕಿರಕ್ ಪಾರ್ಟಿಯಲ್ಲಿ ಅವರು ಅಭಿನಯಿಸಿದ ನೈಜ ಅಭಿನಯ ಕಣ್ಣ ಮುಂದೆ ಬರುತ್ತದೆ. ಸದ್ಯ ತೆಲಗು ತಮಿಳು ಚಿತ್ರಗಳಲ್ಲಿ ನಟಿಸುತ್ತಿರುವ ಇವರು, ಹಿಂದಿ ಆಲ್ಬಂ ಸಾಂಗ್ ನಲ್ಲಿ ಮಿಂಚಲಿದ್ದು, ತನ್ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ.

rashmika acting in hindi movie

ಹಿಂದಿಯ ಖ್ಯಾತ ರ್ಯಾಪರ್ ಬಾದ್ ಷಾ ಹಾಡಿನಲ್ಲಿ ರಶ್ಮಿಕಾ ಹೆಜ್ಜೆ ವೈಯಾರ ಕಾಣಬಹುದು. ರಶ್ಮಿಕಾ ಇದೀಗ ಮೊದಲ ಬಾರಿಗೆ ಆಲ್ಬಂ ಹಾಡಿನ ಮೂಲಕ ಮೋಡಿ ಮಾಡಲು ಸಿದ್ಧರಾಗಿದ್ದಾರೆ. ರಶ್ಮಿಕಾ ಮೊದಲ ಹಿಂದಿ ಆಲ್ಬಂ ಹಾಡು ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ. ಮುಂದಿನ ವರ್ಷ ಈ ಹಾಡು ರಿಲೀಸ್ ಆಗಲಿದೆ.

ಈಗಾಗಲೇ ಚಂಡೀಗಡದಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ರಶ್ಮಿಕಾ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರಂತೆ. ಬಿಗ್ ಬಜೆಟ್ ನ ಈ ಆಲ್ಬಂ ಚಿತ್ರರಂಗದ ಖ್ಯಾತ ನಿರ್ಮಾಣ ಸಂಸ್ಥೆ ಯಶ್ ರಾಜ್ ಫಿಲ್ಮ್ಸ್ ನಲ್ಲಿ ನಿರ್ಮಾಣವಾಗುತ್ತಿದೆ.
ಪ್ರಸ್ತುತ ಪುಷ್ಪಾ ಸಿನಿಮಾದಲ್ಲಿಯೂ ತೊಡಗಿಸಿಕೊಂಡಿರುವ ರಶ್ಮಿಕಾ, ಅಲ್ಲು ಅರ್ಜುನ್ ನಾಯಕ ನಟನಾಗಿರುವ ಈ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಜೊತೆಗೆ ತೆಲುಗಿನ ಮತ್ತೊಂದು ಸಿನಿಮಾ ಕೂಡ ಅವರ ಕೈಯಲ್ಲಿದ್ದು, ತಮಿಳು ಮತ್ತು ಕನ್ನಡದ ಒಂದೊಂದು ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ.

ರ್ಯಾಪರ್ ಯೋ ಯೋ ಹನಿ ಸಿಂಗ್ ಅವರೊಂದಿಗೆ ಕೆಲಸ ಮಾಡುತ್ತಿದ್ದ ಬಾದ್‌ಶಾ ಅವರು 2012 ರಿಂದ ಸ್ವತಂತ್ರ ಆಲ್ಬಮ್‌ಗಳ ಜೊತೆಗೆ ಹಲವಾರು ಬಾಲಿವುಡ್ ಚಿತ್ರಗಳಿಗೂ ಸಂಗೀತ ನೀಡಿದ್ದಾರೆ. ಗುಡ್ ನ್ಯೂಸ್ ಮತ್ತು ದಬಾಂಗ್ 3 ಚಿತ್ರಗಳಿಗೆ ಸಂಗೀತ ನೀಡಿದ್ದಾರೆ.

(Visited 126 times, 1 visits today)

You Might Be Interested In

LEAVE YOUR COMMENT

Your email address will not be published. Required fields are marked *