ನಟಿ ಸಂಜನಾ ಗಂಡ ಯಾರು ಗೊತ್ತಾ? – ಹೊರ ಬಂತು ನಟಿ ಸಂಜನಾರಿಗೆ ಮದುವೆಯಾಗಿರುವ ವಿಚಾರ.

ಕಳೆದ ಒಂದು ವಾರದಿಂದ ಸಂಜನಾ ಅವರು ಮಾದ್ಯಮದ ಮುಂದೆ ಮಾತನಾಡಿದ್ದನ್ನು ನೆನಪಿಸಿಕೊಂಡರೆ, ಸಂಜನಾ ಅವರು ಏನು ತಪ್ಪು ಮಾಡಿಲ್ಲ, ಅವರು ಸತ್ಯವನ್ನೇ ಹೇಳುತ್ತಿದ್ದಾರೆನೋ ಅನಿಸುತ್ತಿತ್ತು. ಕಳೆದ ವಾರದಿಂದಲೂ ಸಂಜನಾ ಅವರು ನಾನು ಏನು ತಪ್ಪು ಮಾಡಿಲ್ಲ, ನನಗೂ ಡ್ರಗ್ಸ್ ವಿಚಾರಕ್ಕೂ ಸಂಬಂಧವೇ ಇಲ್ಲ, ನನ್ನನ್ನು ಯಾವಾಗ ಬೇಕಾದರೂ ವಿಚಾರಣೆಗೆ ಕರೆದರೂ ನಾನು ಹೋಗಲು ಸಿದ್ದ. ಯಾರೂ ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲಎನ್ನುತ್ತಿದ್ದರು

nodu maga website logo

ಇನ್ನೂ ಹೆಚ್ಚು ಕನ್ನಡ ನ್ಯೂಸ್ ಓದಲು ನೋಡುಮಗ.ಕಂ ಫೇಸ್ಬುಕ್ ಪೇಜ್ ಲೈಕ್ ಮಾಡಿ -->>

ಆದರೆ ವಾರೆಂಟ್ ಪಡೆದುಕೊಂಡ ಪೋಲಿಸರು ನಿನ್ನೆ ಬೆಳ್ಳಂಬೆಳಿಗ್ಗೆ ಸಂಜನಾ ಅವರ ಮನೆಗೆ ದರ್ಶನ ನೀಡಿದ್ದಾರೆ. ಹೌದು ನೀವು ಕೇಳಿದ್ದು ನೀಜ, ನಿನ್ನೇ ಬೆಳಿಗ್ಗೆ ಪೋಲಿಸರು ಸಂಜನಾ ಅವರ ಮನೆಯ ಮೇಲೆ ರೇಡ್ ಮಾಡಿ ಸಂಜನಾ ಅವರನ್ನು ಬಂಧಿಸಿದ್ದಾರೆ. ಸ್ಯಾಂಡಲ್ ವುಡ್ ಪ್ರಖ್ಯಾತ ನಟಿ ರಾಗಿಣಿಯವರನ್ನು ಬಂಧಿಸಿದ ಮೇಲೆ, ಕೆಲವು ನಟ ನಟಿಯರು ಡ್ರಗ್ಸ ಜಾಲದ ನಂಟನ್ನು ಹೊಂದಿದ್ದಾರೆ ಎಂದು ತಿಳಿದಿದ್ದರು ಪೋಲಿಸರು ಕೆಲ ದಿನಗಳ ಕಾಲ ಯಾರದೇ ಹೆಸರನ್ನು ಬಹಿರಂಗ ಮಾಡಿರಲಿಲ್ಲ. ಬಹುಶಃ ಪೋಲಿಸರು ಹೆಸರನ್ನು ಬಹಿರಂಗ ಮಾಡದೇ ಇದ್ದಿದ್ದರಿಂದ ಸಂಜನಾ ಅವರು ನಿಟ್ಟಿಸುರು ಬಿಟ್ಟಿದ್ದರು ಎಂದು ಕಾಣಿಸುತ್ತದೆ. ಆದರೆ ಪೋಲಿಸರು ಬೆಳಿಗ್ಗೆ ಮನೆಯ ಮೇಲೆ ರೇಡ್ ಮಾಡಿ ಸಂಜನಾ ಅವರಿಗೆ ದೊಡ್ಧ ಶಾಕ್ ಕೊಟ್ಟಿದ್ದಾರೆ. ಪೋಲಿಸರು ಸಂಜನಾ ಅವರಿಗೆ ಸಿಸಿಬಿ ಕಛೇರಿಗೆ ಹೋಗಬೇಕು, ರೇಡಿ ಆಗಿಎಂದು ಹೇಳಿದರೆ, ನನಗೆ ಮೋದಲೆ ನೋಟೀಸ್ ನೀಡಬೇಕಿತ್ತು, ನಾನು ಬರುವುದಿಲ್ಲ ಎಂದು ಹೈಡ್ರಾಮಾ ಮಾಡಿದ್ದರಿಂದ, ಪೋಲಿಸರು ಸಂಜನಾ ಅವರನ್ನು ಬಂಧಿಸಿ ವಿಚಾರಣೆಗೆ ಒಳ ಪಡಿಸಿದ್ದಾರೆ.

Sanjana

ನೋಡುಮಗ.ಕಂ ವಿಡಿಯೋ ನ್ಯೂಸ್ ಗಳನ್ನು ನೋಡಲು ನಮ್ಮ   YOUTUBE  ಚಾನೆಲ್  SUBSCRIBE  ಮಾಡಿ — >>

ಸಂಜನಾ ಅವರ ಬಗ್ಗೆ ಈ ನಡುವೆ ಒಂದು ಶಾಕಿಂಗ ವಿಚಾರ ತಿಳಿದುಬಂತು. ಅದೇನೆಂದರೆ, ನಟಿ ಸಂಜನಾ ಅವರು ವೈದ್ಯರೊಬ್ಬರನ್ನು ಮದುವೆ ಮಾಡಿಕೊಂಡಿದ್ದು, ಅವರನ್ನು ನೋಡಲೇ ಬೇಕೆಂದು ಹಠ ಮಾಡುತ್ತಿದ್ದಾರೆ. ಸಂಜನಾ ಅವರು ವಾಸಿಸುತ್ತಿದ್ದ ಅಪಾರ್ಟ್ ಮೆಂಟ್ ಅಲ್ಲಿ ನ್ಯೂರೋ ಸರ್ಜನ್ ರೊಬ್ಬರು ವಾಸಿಸುತ್ತಿದ್ದು, ಅವರ ಜೊತೆ ಸಂಜನಾ ಸ್ನೇಹ ಇಟ್ಟುಕೊಂಡಿದ್ದಲ್ಲದೇ, ಅವರಿಬ್ಬರು ಅಮೆರಿಕಾಗೆ ಹೋಗಿ ಮದುವೆ ಮಾಡಿಕೊಂಡಿದ್ದಾರೆಂದು ಸುದ್ದಿ ಹರಿದಾಡುತ್ತಿದೆ.  

ಈ ಪ್ರಕರಣದಲ್ಲಿ ಸಿಲುಕಿರುವ ರಾಹುಲ್ ಆಪ್ತನ ತಂದೆಯವರೂ, ಸಂಜನಾ ಅವರ ಬಗ್ಗೆ ಮಾದ್ಯಮದ ಮುಂದೆ ನನ್ನ ಮಗನಿಗೆ ಸಂಜನಾ ಪರಿಚಯವಾಗಿದ್ದರಿಂದ, ಅವರ ಮನೆಗೆ ಆಗಾಗ ಹೋಗಿ ಬರುತ್ತಿದ್ದ. ಸಂಜನಾ ಮತ್ತು ನನ್ನ ಮಗ ಅಣ್ಣತಂಗಿ ಇದ್ದಂತೆ, ಅದರ ಹೊರತು ಬೇರೆ ಯಾವುದೇ ಸಂಬಂಧವಿಲ್ಲ. ಸಂಜನಾಗೆ ಮದುವೆಯಾಗಿದ್ದು, ಆಕೆಯ ಗಂಡ ಒಬ್ಬ ವೈದ್ಯ, ನನಗೂ ಒಮ್ಮೆ ಚಿಕಿತ್ಸೆ ಮಾಡಿದ್ದರು.” ಎಂದು ಹೇಳಿದ್ದಾರೆ.  

ಹಾಗೆಯೇ ಪ್ರಶಾಂತ್ ಸಂಬರ್ಗಿ ಅವರು, ಜಮೀರ್ ಅಹಮದ್ ಹಾಗೂ ಸಂಜನಾ ಶ್ರೀಲಂಕಾ ಪ್ರವಾಸಕ್ಕೆ ಹೋಗಿದ್ದರು ಎಂದು ಸಂಜನಾ ಅವರ ಬಗ್ಗೆ ಆರೋಪ ಮಾಡಿದ್ದರು. ಆಗ ರೊಚ್ಚಿಗೆದ್ದ ಸಂಜನಾ ಅವರು ನನಗಿನ್ನು ಮದುವೆ ಆಗಿಲ್ಲ, ಜಮೀರ್ ಅಹಮದ್ ಒಬ್ಬ ಒಳ್ಳೆಯ ಮನುಷ್ಯ, ಒಬ್ಬ ದೊಡ್ಡ ನಾಯಕಎಂದಿದ್ದರು. ಅಷ್ಟೇ ಅಲ್ಲದೆೇ ಜಮೀರ್ ಅಹಮದ್ ಸರ್, ಪ್ರಶಾಂತ್ ಸಂಬರ್ಗಿ ಅವರನ್ನು ಬೀಡಬೇಡಿ. ಅವರಿಗೆ ಸರಿಯಾದ ಪಾಠ ಕಲಿಸಿಎಂದು ಮಾಧ್ಯಮದ ಮೂಲಕವೇ ಜಮೀರ್ ಅಹಮದ್ ಅವರಿಗೆ ಸಂಜನಾ ಕಣ್ಣಿರಿಡುತ್ತಾ ಹೈಡ್ರಾಮಾ ಮಾಡಿದ್ದರು. ಮಾದ್ಯಮದವರು ಈ ವಿಚಾರದ ಬಗ್ಗೆ ಜಮೀರ್ ಅಹಮದ್ ಅವರನ್ನು ಮಾತನಾಡಿಸಲು ಮುಂದಾದಾಗ, ಜಮೀರ್ ಅಹಮದ್ ಅವರ ಥ್ಯಾಂಕ್ ಯು ಥ್ಯಾಂಕ್ ಯು ಎಂದು ಹೇಳುತ್ತ ಬೇರೇನು ಪ್ರತಿಕ್ರಿಯೆ ನೀಡದೇ ಅಲ್ಲಿಂದ ಹೊರ ನಡೆದು ಬಿಟ್ಟರು

ಇನ್ನೂ ಹೆಚ್ಚು ಕನ್ನಡ ನ್ಯೂಸ್ ಓದಲು ನೋಡುಮಗ.ಕಂ INSTAGRAM ಪೇಜ್ Follow ಮಾಡಿ -->>

ಏನೇ ಆಗಲಿ, ಇಷ್ಟು ದಿನಾ ತಪ್ಪೇ ಮಾಡಿಲ್ಲವೇಂದು ಎನ್ನುತ್ತಿದ್ದ ನಟಿ ಸಂಜನಾ ಅವರು, ಈಗ ಪೋಲಿಸರ ಅತಿಥಿಯಾಗಿದ್ದಾರೆ. ಈ ಡ್ರಗ್ಸ ಜಾಲದ ಪ್ರಕರಣದಲ್ಲಿ ಇನ್ನೂ ಹಲವಾರು ಸ್ಯಾಂಡಲ್ ವುಡ್ ಸ್ಟಾರ ನಟರ ಹೆಸರುಗಳು ಹೊರ ಬರುವುದಂತೂ ಕಟ್ಟಿಟ್ಟ ಬುತ್ತಿ. ಯಾರೇ ಯಾಗಲಿ ತಪ್ಪು ಮಾಡಿದ್ದರೆ, ಕಾನೂನು ಅದಕ್ಕೆ ತಕ್ಕ ಹಾಗೆ ಶಿಕ್ಷೆ ನೀಡುವುದು ಖಚಿತ.

(Visited 456 times, 1 visits today)

You Might Be Interested In

LEAVE YOUR COMMENT

Your email address will not be published. Required fields are marked *