ಅನ್ಯಾ ರಂಗಸ್ವಾಮಿ ಗೆ ಪ್ರೊಪೋಸ್ ಮಾಡಿದ ದಾನಿಶ್ ಸೇಠ್, ಪ್ರೀತಿಯಲ್ಲಿ ಮುಳುಗಿದ ಮೈಸೂರು ಹುಡುಗ

ದಾನಿಶ್ ಸೇಠ್ಗೆ ಲವ್ ಆಗಿದೆಯಂತೆ. ತಾವು ಬಹಳ ದಿನಗಳಿಂದ ಪ್ರೀತಿಸುತ್ತಿದ್ದ ಹುಡುಗಿಗೆ ಪ್ರಪೋಸ್ ಮಾಡಿದ್ದಾರೆ ಹಾಗು ಹುಡುಗಿ ಕೂಡ ಸಮ್ಮತಿ ನೀಡಿದ್ದಾರೆ . 

dhanish proposed for rangaswamy

ದಾನಿಶ್ ಸೇಠ್ ಪ್ರೀತಿಸುತ್ತಿರುವ ಹುಡುಗಿ ಹೆಸರು ಅನ್ಯಾ ರಂಗಸ್ವಾಮಿ ಗ್ರಾಫಿಕ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರಂತೆ, ಅಲ್ಲದೆ ಅವರು ಒಳ್ಳೆ ಯೋಗಪಟು ಕೂಡಾ ಅಂತೆ.ಅನ್ಯಾ ಸದ್ಯಕ್ಕೆ ಮುಂಬೈನಲ್ಲಿ ನೆಲೆಸಿದ್ದು ಅನ್ಯಾ ಜೊತೆಗಿರುವ ಫೋಟೋವೊಂದನ್ನು ದಾನಿಶ್​​​​ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ”ಎಲ್ಲರಿಗೂ ನಮಸ್ಕಾರ, ನನ್ನ ಪ್ರೀತಿಗೆ ಆಕೆ ಸಮ್ಮತಿ ನೀಡಿದ್ದಾಳೆ, ಕೊನೆಯವರೆಗೂ ನನ್ನ ಜೀವನದ ಭಾಗವಾಗಿರಲು ಒಪ್ಪಿಕೊಂಡಿದ್ದಕ್ಕೆ ಧನ್ಯವಾದ” ಎಂದು ಪ್ರೀತಿಯನ್ನು ಒಪ್ಪಿಕೊಂಡ ಪ್ರಿಯತಮೆಗೆ ದಾನಿಶ್ ಸೇಠ್ ಥ್ಯಾಂಕ್ಸ್ ಹೇಳಿದ್ದಾರೆ. ಅಭಿಮಾನಿಗಳು ಕೂಡಾ ಆದಷ್ಟು ಬೇಗ ಮಾಡುವೆ ಆಗಿ ಎಂದು ಹಾರೈಸಿದ್ದಾರೆ.

ದಾನಿಶ್ ಸೇಠ್ ಕುಟುಂಬದ ಬಗ್ಗೆ ಎಷ್ಟು ಗೊತ್ತು?

ಮೈಸೂರಿನ ನರಸಿಂಹರಾಜ ಕ್ಷೇತ್ರದಿಂದ 6 ಬಾರಿ ವಿಧಾನಸಭೆಗೆ ಆಯ್ಕೆಯಾದ ಕಾಂಗ್ರೆಸ್​ ಪಕ್ಷದ ಅಜೀಜ್ ಸೇಠ್ ಎಲ್ಲರಿಗೂ ಗೊತ್ತು. ಇವರ ಮೊಮ್ಮಗನೇ ದಾನಿಶ್ ಸೇಠ್​​​​. ಅಜೀಜ್ ಸೇಠ್ ಅವರಿಗೆ ಇಬ್ಬರು ಗಂಡು ಮಕ್ಕಳು. ಒಬ್ಬರು ಝಾಕೀರ್ ಸೇಠ್ ಹಾಗೂ ಮತ್ತೊಬ್ಬರು ತನ್ವೀರ್ ಸೇಠ್​. ಝಾಕೀರ್ ಸೇಠ್ ಅವರ ಪುತ್ರನೇ ದಾನಿಶ್ ಸೇಠ್. 

(Visited 124 times, 1 visits today)

You Might Be Interested In

LEAVE YOUR COMMENT

Your email address will not be published. Required fields are marked *