ಡ್ರಗ್ಸ್ ಮಾಫಿಯಾ ಬಗ್ಗೆ ಡಿ ಬಾಸ್ ಹೇಳಿದ್ದೇನು?

ಡ್ರಗ್ ಮಾಫಿಯಾ ಸ್ಯಾಂಡಲ್ವುಡ್ ನಲ್ಲಿ ಮಹಾ ಸ್ಫೋಟವನ್ನೇ ಎಬ್ಬಿಸುತ್ತಿದೆ. ಚಾಲೆಂಜಿಗ್ ಸ್ಟಾರ್ ದರ್ಶನ್ ಅವರು ಕುದುರೆ ಖರೀದಿ ಮಾಡಲು ದಾವಣಗೆರೆಗೆ ಬಂದಿದ್ದರು. ಶಾಸಕ ಶಾಮನೂರು ಶಿವಶಂಕರಪ್ಪ ಮನೆಗೆ ಭೇಟಿ ನೀಡಿ, ಬಳಿಕ ದಾವಣಗೆರೆಯ ಗೆಸ್ಟ್ ಹೌಸ್ ನಲ್ಲಿ ತಂಗಿದ್ದರು. ಸ್ಯಾಂಡಲ್ ವುಡ್ ನಲ್ಲಿ ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನ ಪಡೆಯುತ್ತಿರು ಡ್ರಗ್ಸ್ ಮಾಫಿಯಾದ ಕುರಿತು ಚಾಲೆಂಜಿಗ್ ಸ್ಟಾರ್ ದರ್ಶನ್ ಅವರು ಮಾದ್ಯಮದ ಜೊತೆಗೆ ಮಾತನಾಡಿದ್ದಾರೆ. 

ನೋಡುಮಗ.ಕಂ ವಿಡಿಯೋ ನ್ಯೂಸ್ ಗಳನ್ನು ನೋಡಲು ನಮ್ಮ   YOUTUBE  ಚಾನೆಲ್  SUBSCRIBE  ಮಾಡಿ — >>

ದರ್ಶನ್ ಅವರು “ಪೋಲಿಸರಿಗೆ ಈಗಾಗಲೇ ಮಾಹಿತಿ ದೊರೆತಿದೆ, ಅವರು ತನಿಖೆ ನಡೆತಸುತ್ತಿದ್ದಾರೆ. ಎಲ್ಲ ವಿಷಯಗಳು ಗೊತ್ತಾಗತ್ತೆ. ತನಿಖೆಯಿಂದ ಸಿಲುಕಿಕೊಂಡಿರುವ ವ್ಯಕ್ತಿಗಳ ಹೆಸರು ಗೊತ್ತಾಗತ್ತೆ, ಕಾದು ನೋಡೋಣ. ನೀವೇ ಆ ನಟ, ಈ ನಟ ಅಂತ ಸೃಷ್ಟಿ ಮಾಡಬೇಡಿ.”

“ಒಂದು ಮಾತು ಹೇಳ್ತಿನಿ, ಬೇಜಾರ ಮಾಡ್ಕೊಳ್ಬೇಡಿ. ಒಂದು ಕ್ಲಾಸ್ ಅಂದ ಮೇಲೆ, ಅಲ್ಲಿ ಬೇಸ್ಟ ವಿಧ್ಯಾರ್ಥಿಗಳು ಇರುತ್ತಾರೆ ಮತ್ತು ಜೀರೋ ತೊಗೊಳೊ ವಿಧ್ಯಾರ್ಥಿಗಳು ಇರುತ್ತಾರೆ. ಹಾಗಂತ ಸಂಪೂರ್ಣ ಕ್ಲಾಸ್ ಜೀರೋ ತೆಗೆದುಕೊಳ್ಳತ್ತೆ ಅಂತಾ ಹೇಳೊಕಾಗಲ್ಲ.” ಎಂದು ಒಂದು ಉದಾಹರಣೆ ಕೊಡುವ ಮೂಲಕ ಚಿತ್ರರಂಗವನ್ನು ದೂಷಿಸಬೇಡಿ ಎಂದಿದ್ದಾರೆ.

nodu maga website logo
Darshan talks about drug mafia

ಇನ್ನೂ ಹೆಚ್ಚು ಕನ್ನಡ ನ್ಯೂಸ್ ಓದಲು ನೋಡುಮಗ.ಕಂ ಫೇಸ್ಬುಕ್ ಪೇಜ್ ಲೈಕ್ ಮಾಡಿ -->>

ಇಂದ್ರಜಿತ್ ಲಂಕೇಶ್ ಆರೋಪದ ಬಗ್ಗೆ ಏನು ಹೇಳುತ್ತೀರಿ ಎಂದು ಮಾದ್ಯಮದವರು ಕೇಳಿದಾಗ, ದರ್ಶನ್ ಅವರು “ಎಲ್ಲ ಪೋಲಿಸರ ಕೈಲಿದೆ. ಬೇಗ ಎಲ್ಲ ಮಾಹಿತಿ ತಿಳಿಯತ್ತೆ, ಆವಾಗ ಇದರ ಬಗ್ಗೆ ಮಾತಾಡೋಣ. ಈ ರೀತಿ ಯಾವುದು ಆಗಿಲ್ಲ, ನನ್ನದು ಕೂಡ ಹೆಚ್ಚು ಕಮ್ಮಿ 26-27 ವರ್ಷ ಆಯಿತು ಇಂಡಸ್ಟ್ರಿಗೆ ಬಂದು, ಒಬ್ಬ ಲೈಟ್ ಮ್ಯಾನ್ ನಿಂದ ಇಲ್ಲಿಯವರೆಗೂ ಬಂದಿದ್ದಿನಿ, ನಾವು ಇದುವವರೆಗೂ ಕೇಳಿಯೂ ಇಲ್ಲ, ನೋಡಿಯೂ ಇಲ್ಲ. ಎಂದು ಹೇಳಿದ್ದಾರೆ.

ಇನ್ನೂ ಹೆಚ್ಚು ಕನ್ನಡ ನ್ಯೂಸ್ ಓದಲು ನೋಡುಮಗ.ಕಂ INSTAGRAM ಪೇಜ್ Follow ಮಾಡಿ -->>

ಸ್ಯಾಂಡಲ್ ವುಡ್ ಗೆ ಇದು ಕಳಂಕ ಅಲ್ವಾ ಎಂದು ಪತ್ರಕರ್ತರೊಬ್ಬರು ಕೇಳಿದಾಗ, ದರ್ಶನ್ ಅವರು “ಕೇವಲ ಸ್ಯಾಂಡಲ್ ವುಡ್ ಗೆ ಮಾತ್ರ ಅಲ್ಲ, ಇಡೀ ಕರ್ನಾಟಕಕ್ಕೆ ಇದು ಕಳಂಕ.” ಎಂದು ಹೇಳಿದ್ದಾರೆ.

ಚಿರು ಬಗ್ಗೆ ದರ್ಶನ್ ಅವರನ್ನು ಕೇಳಿದಾಗ, “ಒಂದು ಮಾತ ಹೇಳ್ತಿನಿ, ಬೇಜಾರ ಮಾಡ್ಕೊಳ್ಬೇಡಿ. ಚಿರು ಹೆಸರು ಇತ್ತಿಚೆಗೆ ತುಂಬಾ ತೆಗೆದುಕೊಳ್ಳುತ್ತಿದ್ದಿರಾ. ದಯವಿಟ್ಟು ಅವರ ಹೆಸರು ಈ ವಿಷಯದಲ್ಲಿ ತೆಗಿಬೇಡಿ. ಅವರು ಸತ್ತು ಈಗಾಗಲೇ ೩ ತಿಂಗಳಾಗಿದೆ. ಈಗ ಅವರೆಲ್ಲಿದ್ದಾರೊ ಹೇಗಿದ್ದಾರೋ ಗೊತ್ತಿಲ್ಲ. ಆಕಸ್ಮಾತ್ ಅವರು ತಪ್ಪಿತಸ್ಥ ಎಂದು ತಿಳಿದರೆ, ಅವರನ್ನ ಕರೆದುಕೊಂಡು ಶಿಕ್ಷೆ ಕೊಡೊಕಾಗತ್ತ?” ಎಂದು ಮಾದ್ಯಮದವರನ್ನೇ ಪ್ರಶ್ನಿಸಿದ್ದಾರೆ.


(Visited 41 times, 1 visits today)

You Might Be Interested In

LEAVE YOUR COMMENT

Your email address will not be published. Required fields are marked *