ರಾಕಿಂಗ್ ಸ್ಟಾರ್ ಯಶ್ ಎಸ್ ಪಿ ಬಿ ಅವರ ಬಗ್ಗೆ ಮನದಾಳದ ಮಾತು

ನಮಗೆಲ್ಲ ತಿಳಿದ ಹಾಗೆ ಎಸ್ ಪಿ ಬಾಲಸುಬ್ರಮಣ್ಯಂ ಅವರಿಗೆ ಕೊರೊನಾ ಪಾಸಿಟಿವ್ ಆಗಿದ್ದರಿಂದ ಅವರ ಆರೋಗ್ಯ ಅಷ್ಟೋಂದು ಚೆನ್ನಾಗಿರಲಿಲ್ಲ. ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಎಸ್ ಪಿ ಬಿ ಅವರು ಚೀಕಿತ್ಸೆ ಪಡೆಯುತ್ತಿದ್ದಾರೆ. ಎಸ್ ಪಿ ಬಿ ಅವರಿಗೆ ಕೊರೊನಾ ಆಗಿರುವುದು ಖಚಿತವಾದಾಗಿನಿಂದ, ಅವರ ಕುಟುಂಬ, ಸ್ನೇಹಿತರ ಬಳಗ, ಇಡೀ ಚಿತ್ರತಂಡ ಹಾಗೂ ಅವರ ಅಪಾರ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿತ್ತು.  

ಆದರೆ ಇತ್ತಿಚೆಗೆ ಎಸ್ ಪಿ ಬಿ ಅವರ ಆರೋಗ್ಯದಲ್ಲಿ ಇನ್ನಷ್ಟು ಏರುಪೆೇರು ಆಯಿತು, ಇದರಿಂದ ಎಸ್ ಪಿ ಬಿ ಅವರನ್ನು ಐಸಿಯುಗೆ ವರ್ಗಾಯಿಸಲಾಯಿತು, ಎಸ್ ಪಿ ಬಿ ಅವರ ಆರೋಗ್ಯ ಮತ್ತಷ್ಟು ಗಂಭೀರವಾಗಿದ್ದರಿಂದ ಎಲ್ಲ ಅಭಿಮಾನಿಗಳಿಗೆ, ಕುಟುಂಬದವರಿಗೆ ಮತ್ತು ಚಿತ್ರ ರಂಗಕ್ಕೆ ತುಂಬಾ ಆಘಾತವಾಗಿದೆ. ಹೀಗಿರುವಾಗ ಒಂದು ಸಭೆಯಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರು ಎಸ್ ಪಿ ಬಿ ಅವರ ಬಗ್ಗೆ ತಮ್ಮ ಮನದಾಳದ ಮಾತನ್ನು ಹಂಚಿಕೊಳ್ಯವುದರ ಮೂಲಕ ಎಸ್ ಪಿ ಬಿ ಅವರು ಬೇಗ ಗುಣಮುಖರಾಗಿ ಬರಲಿ ಎಂದು ಹಾರೈಸಿದ್ದಾರೆ.  

ನೋಡುಮಗ.ಕಂ ವಿಡಿಯೋ ನ್ಯೂಸ್ ಗಳನ್ನು ನೋಡಲು ನಮ್ಮ   YOUTUBE  ಚಾನೆಲ್  SUBSCRIBE  ಮಾಡಿ — >>

ಸಬೆಯಲ್ಲಿ ಎಲ್ಲರನ್ನೂ ಉದ್ದೆಶಿಸಿ ರಾಕಿಂಗ್ ಸ್ಟಾರ್ ಯಶ್ ಅವರು ಎಸ್ ಪಿ ಬಿ ಅವರು ಬಗ್ಗೆ ಮಾತಾನಾಡಲು ನಾನು ತುಂಬಾ ಚಿಕ್ಕವನು, ನನ್ನ ಅದೃಷ್ಟವೇನೆಂದರೆ, ಎಸ್ ಪಿ ಬಿ ಅವರು ನನ್ನ ಅಭಿನಯದ ರಾಕಿ ಚಿತ್ರಕ್ಕೆ ಹಾಡಿದ್ದಾರೆ. ಆಗ ನನಗೆ ಎಷ್ಟು ಖುಷಿಯಾಗಿದ್ದೆ, ಎಷ್ಟು ತ್ರಿಲ್ ಆಗುತ್ತೆಂದರೆ, ಆ ಅನುಭವ ಇನ್ನು ಫ್ರೆಶ್ ಇದೆ. ಹಂಸಲೇಖ ಅವರ ಸಾಹಿತ್ಯ ಮತ್ತು ಎಸ್ ಪಿ ಬಿ ಅವರ ಗಾಯನದ ಕಾಂಬಿನೆಷನ ಇಷ್ಟ, ಚಿಕ್ಕವನಿಂದ ನಾನು ಅವರ ಹಾಡುಗಳನ್ನು ಕೇಳುತ್ತ ಬೆಳೆದವನು.

ಈ ಕಾರ್ಯಕ್ರಮವನ್ನು ಆಯೋಜಿಸಿರುವುದು ಒಂದು ಒಳ್ಳೆಯ ಸಂಸ್ಕೃತಿ. ಚಿತ್ರ ರಂಗ ಒಂದು ಉದ್ಯಮವಾದರು, ಇನ್ನೊಬ್ಬ ಕಷ್ಟದಲ್ಲಿದ್ದಾಗ, ಅವರ ಜೊತೆ ನೋವನ್ನು ಹಂಚಿಕೊಳ್ಳುತ್ತೆವೆ, ಸಾಧನೆ ಮಾಡಿದಾಗ ಖುಷಿಯನ್ನು ಹಂಚಿಕೊಳ್ಳುತ್ತೆವೆ. ಹಾಗೆ ಕಲೆಗೆ ಜಾತಿ, ಧರ್ಮ, ಬೇರೆ ಭಾಷೆಯೆಂಬ ಬೇದ ಬಾವಗಳಿಲ್ಲ. ಎಸ್ ಪಿ ಬಿ ಅವರು ನಮ್ಮ ಕರುನಾಡಿನಲ್ಲಿ ಬೆರೆತು ಹೋಗಿದ್ದಾರೆ, ನಮ್ಮ ಕನ್ನಡ ಜನತೆ ಅವರನ್ನು ನಮ್ಮವರು ಎಂದು ತಮ್ಮ ಹೃದಯದಲ್ಲಿ ಎಸ್ ಪಿ ಬಿ ಅವರಿಗೆ ಸ್ಥಾನ ನೀಡಿದ್ದಾರೆ. ಇಂದು ಅವರು ಕೊರೊನಾದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿಯುತ್ತಿದ್ದಾರೆ. ಎಸ್ ಪಿ ಬಿ ಅವರು ಬೇದ ಗುಣಮುಖರಾಗಿ ಬರಲಿಎಂದು ಹಾರೈಸಿದ್ದಾರೆ.

ಇನ್ನೂ ಹೆಚ್ಚು ಕನ್ನಡ ನ್ಯೂಸ್ ಓದಲು ನೋಡುಮಗ.ಕಂ ಫೇಸ್ಬುಕ್ ಪೇಜ್ ಲೈಕ್ ಮಾಡಿ -->>

ಕೇವಲ ರಾಕಿಂಗ್ ಸ್ಟಾರ್ ಯಶ್ ಮಾತ್ರವಲ್ಲ, ಅವರ ಅಭೀಮಾನಿಗಳು ಹಾಗೂ ಚಿತ್ರರಂಗದಲ್ಲಿರುವ ಪ್ರತಿಯೊಬ್ಬರು, ಎಸ್ ಪಿ ಬಿ ಅವರು ಆದಷ್ಟು ಬೇಗ ಹುಷಾರಾಗಿ ಹೋರಬರಲಿ ಎಂದು ಪ್ರಾರ್ಥಿಸುತ್ತಿದ್ದಾರೆ

ಇನ್ನೂ ಹೆಚ್ಚು ಕನ್ನಡ ನ್ಯೂಸ್ ಓದಲು ನೋಡುಮಗ.ಕಂ INSTAGRAM ಪೇಜ್ Follow ಮಾಡಿ -->>

(Visited 16 times, 1 visits today)

You Might Be Interested In