ಬಿಗ್ ಬಜಾರ್ (ಫ್ಯೂಚರ್ ಗ್ರೂಪ್ಸ್) 27000 ಕೋಟಿಗೆ ರಿಲಯನ್ಸ್ ನಿಂದ ಖರೀದಿ- ರಿಟೇಲ್ ಕ್ಷೇತ್ರ ದಲ್ಲಿ ಸಂಚಲನ

ಚಿಲ್ಲರೆ ವ್ಯಾಪಾರವನ್ನು ಸ್ವಾಧೀನಪಡಿಸಿಕೊಳ್ಳಲು ಬಿಲಿಯನೇರ್ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ (ಆರ್ಐಎಲ್) ಕಿಶೋರ್ ಬಿಯಾನಿ ನೇತೃತ್ವದ ಫ್ಯೂಚರ್ ಗ್ರೂಪ್ ಜೊತೆ ಅಂತಿಮ ಹಂತದ ಮಾತುಕತೆ ನಡೆಸುತ್ತಿದೆ ಎಂದು ವರದಿಯಾಗಿದೆ. ಫ್ಯೂಚರ್ ಗ್ರೂಪ್‌ನ ಚಿಲ್ಲರೆ ಆಸ್ತಿಗಳನ್ನು 24,000-27,000 ಕೋಟಿ ರೂಗಳಿಗೆ ಖರೀದಿಸಲು ಆರ್ ಐ ಎಲ್ ಉತ್ಸುಖವಾಗಿದೆ ಎಂದು ವರದಿಯಾಗಿದೆ.

ಇತ್ತೀಚಿಗೆ ನಡೆದ ರಿಲಯನ್ಸ್ ನ ವಾರ್ಷಿಕ ಸಭೆಯಲ್ಲಿ ಇದು ಘೋಷಣೆಯಾಗಬೇಕಿತ್ತು. ಸ್ವಲ್ಪ ವಿಳಂಬವಾಗಿದೆ.ಇ ಕಾಮರ್ಸ್ ದಿಗ್ಗಜರಾದ ಅಮೆಜಾನ್ ಹಾಗು ಫ್ಲಿಪ್ಕಾರ್ಟ್ ಗೆ ಸೆಡ್ಡು ಹೊಡೆಯಲು ರಿಲಯನ್ಸ್ ಸಜ್ಜಾಗುತ್ತಿದೆ.

ಸಂಶೋಧನಾ ಸಂಸ್ಥೆಗಳ ವರದಿಗಳ ಪ್ರಕಾರ, ಫ್ಯೂಚರ್ ರಿಟೇಲ್ ಬಿಗ್ ಬಜಾರ್, ಫ್ಯಾಶನ್ ಅಟ್ ಬಿಗ್ ಬಜಾರ್ (ಎಫ್‌ಬಿಬಿ), ಎಝೋನ್ ಮತ್ತು ಫುಡ್‌ಹಾಲ್ ಸೇರಿದಂತೆ ವಿವಿಧ ಸ್ವರೂಪಗಳ ಅಡಿಯಲ್ಲಿ ಭಾರತದಲ್ಲಿ 1,500 ಕ್ಕೂ ಹೆಚ್ಚು ಮಳಿಗೆಗಳನ್ನು ನಿರ್ವಹಿಸುತ್ತದೆ ಎಂಬುದನ್ನು ಗಮನಿಸಿ. ಫ್ಯೂಚರ್ ಗ್ರೂಪ್‌ನ ಚಿಲ್ಲರೆ ವ್ಯಾಪಾರ, ಪೂರೈಕೆ-ಸರಪಳಿ ಮತ್ತು ಸಂಬಂಧಿತ ವ್ಯವಹಾರಗಳನ್ನು ಆರ್‌ಐಎಲ್ ವಹಿಸಿಕೊಳ್ಳಲಿದ್ದು, ಇದು ಬಿಯಾನಿಯ ಚಿಲ್ಲರೆ ವ್ಯಾಪಾರಕ್ಕೆ ಇತಿಶ್ರೀ ಆಡಿದಂತಾಗುತ್ತದೆ.

ಫ್ಯೂಚರ್ ಗ್ರೂಪ್‌ನ ಚಿಲ್ಲರೆ ವ್ಯಾಪಾರವನ್ನು ಸ್ವಾಧೀನಪಡಿಸಿಕೊಳ್ಳಲು ಆರ್‌ಐಎಲ್ ಅಂತಿಮ ಮಾತುಕತೆ ನಡೆಸುತ್ತಿದೆ ಎಂದು ಸೋಮವಾರ ಮೀಡಿಯಾದಲ್ಲಿ ವರದಿಗಳು ಬಂದ ನಂತರ, ಆಯಿಲ್-ಟು-ಟೆಲಿಕಾಂ ಮೇಜರ್‌ನ ಷೇರುಗಳು ಆರ್‌ಐಎಲ್‌ನ ಮಾರುಕಟ್ಟೆ ಬಂಡವಾಳವು  14.58 ಲಕ್ಷ ಕೋಟಿ ರೂ. ತಲುಪಿದೆ. ಸೋಮವಾರ ಇಂಟ್ರಾ-ಡೇ ದ ವಹಿವಾಟಿನಲ್ಲಿ ಎನ್‌ಎಸ್‌ಇಯಲ್ಲಿ 2,155.85 ರೂ.ಗೆ ತಲುಪಿದೆ. ಫ್ಯೂಚರ್ ರಿಟೇಲ್ ಲಿಮಿಟೆಡ್ನ ಷೇರುಗಳು ಸಹ ನಿನ್ನೆ ಸುಮಾರು 5% ನಷ್ಟು ಹೆಚ್ಚಾಗಿದೆ. ಫ್ಯೂಚರ್ ರಿಟೇಲ್ ಷೇರುಗಳು 5% ರಷ್ಟು ಏರಿಕೆಯಾಗಿ 100.20 ರೂ.ಗೆ ತಲುಪಿದೆ.

(Visited 323 times, 1 visits today)

You Might Be Interested In