ಮತ್ತೆ ಸೂಟ್ಕೇಸ್ ಪ್ಯಾಕ್ ಮಾಡಿದ ಬಿಗ್ ಬಾಸ್ 8 ಸ್ಪರ್ದಿಗಳು,ಆದರೆ ಈ ಬಾರಿ ಒಳ ಹೋಗುತ್ತಿರೋದು 11 ಮಂದಿ ಅಲ್ಲ

ಕೊರೊನಾ ನಿಯಂತ್ರಣಕ್ಕಾಗಿ ಲಾಕ್​ಡೌನ್​ ಹೇರಿದ್ದ ಕಾರಣ ಅರ್ಧಕ್ಕೇ ಸ್ಥಗಿತಗೊಂಡಿದ್ದ ಕನ್ನಡದ ಬಿಗ್​ಬಾಸ್ ಸೀಸನ್​ 8 (BBK 8) ರಿಯಾಲಿಟಿ ಶೋ ಮತ್ತೆ ಆರಂಭವಾಗುತ್ತಿದೆ. ಸ್ಪರ್ಧಿಗಳೆಲ್ಲರೂ ಮತ್ತೆ ತಮ್ಮ ಸೂಟ್ ಕೇಸ್ ಪ್ಯಾಕ್ ಮಾಡಿಕೊಂಡಿದ್ದಾರೆ, ವೀಕ್ಷಕರು ಕೂಡ ಸಂತಸ ವ್ಯಕ್ತಪಡಿಸಿದ್ದಾರೆ.

ಜೂನ್​ 20ರಿಂದ ಮತ್ತೆ ಬಿಗ್​ ಬಾಸ್ ಸೀಸನ್​ 8 ಮತ್ತೆ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ. 12 ಸ್ಪರ್ಧಿಗಳಿಗೆ ಕ್ವಾರಂಟೈನ್ ಮಾಡಲಾಗುವುದು, ನಂತರ ಅವರು ಬಿಗ್ ಬಾಸ್ ಮನೆಗೆ ತೆರಳಲಿದ್ದಾರೆ. ಆದ್ದರಿಂದ ಈ ಬಾರಿ ಹೊರ ಬಂದ ಕೇವಲ ೧೧ ಜನ ಅಲ್ಲ ೧೨ ಜನ ಬಿಗ್ ಬಾಸ್ ಮನೆಗೆ ಮತ್ತೆ ಎಂಟ್ರಿ ಕೊಡಲಿದ್ದಾರೆ.

ಫೆಬ್ರವರಿ 28 ರಿಂದ ಆರಂಭವಾದ ಬಿಗ್ ಬಾಸ್ 78 ದಿನಗಳಿಗೆ ಕೊನೆಗೊಂಡಿತ್ತು, ಜೂನ್ ತಿಂಗಳ ಆಂತ್ಯದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 8 ಮತ್ತೆ ಆರಂಭವಾಗಲಿದ್ದು, ಸುದೀಪ್ ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ.

big boss kannada contestants

ಮೂಲಗಳ ಪ್ರಕಾರ ಜೂನ್​ ಕೊನೆಯಲ್ಲಿ ಬಿಗ್​ ಬಾಸ್ ಆರಂಭವಾಗಲಿದ್ದು, ಹೊಸ ರೀತಿಯಲ್ಲಿ ಶೋ ಮುಂದುವರಿಯಲಿದೆಯಂತೆ. ಈ ವಿಚಾರ ಸದ್ಯ ಅಭಿಮಾನಿಗಳಿಗೆ ಖುಷಿಯಂತೂ ನೀಡಿದೆ. ಇನ್ನು, ಬಿಗ್​ ಬಾಸ್ ಮತ್ತೆ ಆರಂಭವಾದರೆ, ಬಾಕಿ ಉಳಿದ 30 ದಿನಕ್ಕಷ್ಟೇ ಅದನ್ನು ಸೀಮಿತಗೊಳಿಸದೆ ಇನ್ನೂ ವಿಸ್ತರಣೆ ಮಾಡುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.

ಬಿಗ್​ ಬಾಸ್​ ಪುನರಾರಂಭದ ಕುರಿತು ವಾಹಿನಿ ಮುಖ್ಯಸ್ಥ ಪರಮೇಶ್ವರ ಗುಂಡ್ಕಲ್​ ತಮ್ಮ ಸಾಮಜಿಕ ಜಾಲತಾಣ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ.

‘ಬಿಗ್ ಬಾಸ್ ಕನ್ನಡ 8’ ಕಾರ್ಯಕ್ರಮ ಅರ್ಧಕ್ಕೆ ಸ್ಥಗಿತಗೊಂಡಿದ್ದಾಗ, ಹನ್ನೊಂದು ಸ್ಪರ್ಧಿಗಳು ‘ಬಿಗ್ ಬಾಸ್’ ಮನೆಯಲ್ಲಿದ್ದರು. ಈಗ 12 ಸೂಟ್‌ಕೇಸ್‌ಗಳು ಇವೆಯಲ್ಲಾ ಎಂಬ ಡೌಟ್ ನಿಮಗೆ ಕಾಡಬಹುದು.

‘ಬಿಗ್ ಬಾಸ್ ಕನ್ನಡ 8’ ಕಾರ್ಯಕ್ರಮ ಸ್ಥಗಿತಗೊಳ್ಳುವ ಮುನ್ನ ಅನಾರೋಗ್ಯ ಕಾರಣದಿಂದ ದಿವ್ಯಾ ಉರುಡುಗ ‘ಬಿಗ್ ಬಾಸ್’ ಮನೆಯಿಂದ ಆಚೆ ಕಾಲಿಟ್ಟಿದ್ದರು. ಬಹುಶಃ ಈಗ ದಿವ್ಯಾ ಉರುಡುಗ ಕೂಡ ಸೂಟ್‌ಕೇಸ್‌ ಪ್ಯಾಕ್ ಮಾಡಿಕೊಂಡು ‘ಬಿಗ್ ಬಾಸ್’ ಮನೆಗೆ ವಾಪಸ್ ಬರುತ್ತಿರಬಹುದು.

(Visited 257 times, 1 visits today)

You Might Be Interested In

LEAVE YOUR COMMENT

Your email address will not be published. Required fields are marked *