ಒಟಿಟಿಯಲ್ಲಿ ಆಗಷ್ಟ್ 7ಕ್ಕೆ ರಮೇಶ್ ಅರವಿಂದ್ ಅಭಿನಯದ “ಶಿವಾಜಿ ಸೂರತ್ಕಲ್” ಚಿತ್ರ ಪ್ರಸಾರ

ಶಿವಾಜಿ ಸೂರತ್ಕಲ್: ದಿ ಕೇಸ್ ಆಫ್ ರಣಗಿರಿ ರಹಸ್ಯ 2020 ರೊಮ್ಯಾಂಟಿಕ್ ಮತ್ತು ಮಿಸ್ಟರಿ ಥ್ರಿಲ್ಲರ್ ಕನ್ನಡ ಭಾಷೆಯ ಚಿತ್ರವಾಗಿದ್ದು, ಆಕಾಶ್ ಶ್ರೀವತ್ಸ ಬರೆದು ನಿರ್ದೇಶಿಸಿದ್ದಾರೆ. ಶಿವಾಜಿ ಸೂರತ್ಕಲ್ ಚಿತ್ರವನ್ನು ಅನುಪ್ ಗೌಡ, ರೇಖಾ ಕೆಎನ್ ನಿರ್ಮಿಸಿದ್ದು, ರಮೇಶ್ ಅರವಿಂದ್, ರಾಧಿಕಾ ನಾರಾಯಣ್ ನಟಿಸಿದ್ದಾರೆ. ಚಿತ್ರವು ರಮೇಶ್ ಅರವಿಂದ್ ರವರ 101 ನೇ ಚಲನಚಿತ್ರವಾಗಿದೆ. ಇಲ್ಲಿಯವರೆಗೆ ರಮೇಶ್ ಅರವಿಂದ್ ಅವರು ತುಂಬಾ ಪ್ರೀತಿ, ಪ್ರೇಮ ಮತ್ತು ಕೌಟುಂಬಿಕ ಚಿತ್ರಗಳಲ್ಲಿ ನಟಿಸಿದ್ದು, ಇದೇ ಮೊದಲ ಬಾರಿಗೆ ಪತ್ತೆದಾರಿಯಾಗಿಶಿವಾಜಿ ಸೂರತ್ಕಲ್ಚಿತ್ರದಲ್ಲಿ ನಟಿಸಿದ್ದಾರೆ.

ಚಿತ್ರವು ಮೊದಲ ಬಾರಿಗೆ ಚಿತ್ರಮಂದಿರಗಳಲ್ಲೇ ಬಿಡುಗಡೆಯಾಗಿತ್ತು. ಆದರೆ ನಮಗೆಲ್ಲಾ ತಿಳಿದಿರುವ ಹಾಗೆ ಕೊರೊನಾ ಹೇಗೆ ಜನಸಾಮಾನ್ಯರ ಮೇಲೆ ಹೇಗೆ ಪರಿಣಾಮ ಬೀರಿತೋ, ಹಾಗೆ ಚಿತ್ರರಂಗದಲ್ಲೂ ಪರಿಣಾಮ ಬೀರಿತು. ಕೊರೊನಾ ಮಹಾಮಾರಿಯಿಂದಾಗಿ ಲಾಕ್ ಡೌನ್ ಮಾಡಲಾಗಿತ್ತು. ಲಾಕ್ ಡೌನನಿಂದಾಗಿ ದೇಶದ ಎಲ್ಲ ಚಿತ್ರಮಂದಿರಗಳು ಮುಚ್ಚಲ್ಪಟ್ಟಿದ್ದವು. ಇದರಿಂದಾಗಿ ಅನೇಕ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುತ್ತಿದ್ದ ಹಲವಾರು ಚಿತ್ರಗಳು ಅರ್ಧದಲ್ಲೆ ನಿಂತು ಹೋದವು. ಹಲವಾರು ಚಿತ್ರಗಳಲ್ಲಿ ಶಿವಾಜಿ ಸೂರತ್ಕಲ್ ಚಿತ್ರವು ಒಂದು

ಇನ್ನೂ ಹೆಚ್ಚು ಕನ್ನಡ ನ್ಯೂಸ್ ಓದಲು ನೋಡುಮಗ.ಕಂ ಫೇಸ್ಬುಕ್ ಪೇಜ್ ಲೈಕ್ ಮಾಡಿ -->>

Shivaji Suratkal

ಶಿವಾಜಿ ಸೂರತ್ಕಲ್ ಚಿತ್ರವು  ಚಿತ್ರಮಂದಿರಗಳಲ್ಲಿ ಉತ್ತಮವಾಗಿ ಪ್ರದರ್ಶನ ಕಾಣುತ್ತಿದ್ದು, ಉತ್ತಮ ಕಲೆಕ್ಷನ್ ಕೂಡಾ ಮಾಡುತ್ತಿತ್ತು. ಲಾಕಡೌನನಿಂದಾಗಿ ಚಿತ್ರದ ಪ್ರದರ್ಶನ ರದ್ದಾದ ಕಾರಣ ಚಿತ್ರತಂಡ ಮತ್ತು ಪ್ರೇಕ್ಷಕರು ನೀರಾಶೆ ಹೊಂದುವಂತಾಯಿತು. ಇತ್ತೀಚಿಗೆ ಕನ್ನಡ ಚಿತ್ರಗಳಾದಲವ್ ಮೊಕ್ಟೇಲ್ಮತ್ತುದಿಯಾಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ಗಳಲ್ಲಿ ಬಿಡುಗಡೆಯಾಗಿದ್ದವು, ಅನೇಕ ವೀಕ್ಷಕರು ಶಿವಾಜಿ ಸೂರತ್ಕಲ್ ಅದೇ ಮಾರ್ಗವನ್ನು ಅನುಸರಿಸುತ್ತಾರೆಂದು ನಿರೀಕ್ಷಿಸುತ್ತಿದ್ದರು

ಆಗ ನಿರ್ದೇಶಕ ಆಕಾಶ್ ಶ್ರೀವಾತ್ಸ ಅವರು ಅದನ್ನು ಶೀಘ್ರದಲ್ಲೇ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ಗಳಲ್ಲಿ ಬಿಡುಗಡೆ ಮಾಡಲು ನಿರಾಕರಿಸಿದ್ದರು. ಲಾಕ್ ಡೌನ್ ನಂತರ ಚಿತ್ರಮಂದಿರಗಳು ಪುನರಾರಂಭಗೊಂಡಾದ ಮೇಲೆ ಬಿಡುಗಡೆ ಮಾಡಬೇಕೆಂದು ನಿರ್ಧರಿಸಿದ್ದರು. ಆದರೆ ದಿನದಿಂದ ದಿನಕ್ಕೆ ಕೊರೊನಾ ಪಾಸಿಟಿವ್ ಕೇಸಗಳು ಹೆಚ್ಚಾಗುತ್ತಲೇ ಇರುವುದರಿಂದ, ಯಾವಾಗ ಚಿತ್ರಮಂದಿರಗಳು ಪುನಃ ತೆರೆಯುತ್ತವೆ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಲೇ ಇದೆ. ಕಾರಣದಿಂದಾಗಿ, ಒಟಿಟಿ ಮೂಲಕ ಚಿತ್ರವನ್ನು ಪ್ರಸಾರ ಮಾಡಬೇಕೆಂದು ಚಿತ್ರತಂಡ ನಿರ್ಧರಿಸಿದ್ದು, ಇನ್ನು ಹೆಚ್ಚು ವೀಕ್ಷಕರು ಚಿತ್ರವನ್ನು ವೀಕ್ಷಿಸಲಿ ಎಂಬುದು ಚಿತ್ರತಂಡದ ಉದ್ದೇಶವಾಗಿದೆ.

ನೋಡುಮಗ.ಕಂ ವಿಡಿಯೋ ನ್ಯೂಸ್ ಗಳನ್ನು ನೋಡಲು ನಮ್ಮ   YOUTUBE  ಚಾನೆಲ್  SUBSCRIBE  ಮಾಡಿ — >>

ಶಿವಾಜಿ ಸೂರತ್ಕಲ್ ಚಿತ್ರವು ಆಗಷ್ಟ್ 7 ರಂದು ಜೀ 5 ನಲ್ಲಿ ಪ್ರಸಾರವಾಗಲಿದೆ. ಹಾಗೆಯೇ ಜೀ 5 ನಲ್ಲಿ ಪ್ರಸಾರವಾದ ಒಂದು ವಾರದ ನಂತರ ಜೀ ಕನ್ನಡವಾಹಿನಿಯಲ್ಲಿ ಪ್ರಸಾರವಾಗುವ ನಿರಿಕ್ಷತೆಯಿದ್ದು, ಇನ್ನು ಸರಿಯಾದ ದಿನಾಂಕವನ್ನು ನಿರ್ಧರಿಸಿಲ್ಲ. ಚಿತ್ರವು ಜೀ 5 ನಲ್ಲಿ ಪ್ರಸಾರವಾಗಲಿದ್ದು, ಈಗ ನಿರಾಶೆಗೊಂಡ ಪ್ರೆಕ್ಷಕರಿಗೆ ಸಿಹಿ ಸುದ್ದಿಯಾಗಿದೆ.

ಇನ್ನೂ ಹೆಚ್ಚು ಕನ್ನಡ ನ್ಯೂಸ್ ಓದಲು ನೋಡುಮಗ.ಕಂ INSTAGRAM ಪೇಜ್ Follow ಮಾಡಿ -->>

(Visited 698 times, 1 visits today)

Share and Enjoy !

You Might Be Interested In