ಅನಿವಾಸಿ ಕನ್ನಡಿಗರ ಸಂವಾದದಲ್ಲಿ ಮುತ್ತಿನಂತ ಮಾತು ಆಡಿದ ನಟ ರಮೇಶ್ ಅರವಿಂದ್

ರಮೇಶ್ ಅರವಿಂದ್ ಅವರು ದಕ್ಷಿಣ ಭಾರತದ ಸಿನೆಮಾದ ಅತ್ಯುತ್ತಮ ನಟರಲ್ಲಿ ಒಬ್ಬರು. ವ್ಯಾಪಕವಾಗಿ ಪರಿಗಣಿಸಲ್ಪಟ್ಟ ರಮೇಶ್ ಅರವಿಂದ್ ಅವರು ಅನನ್ಯ ಮೋಡಿ, ಅನುಗ್ರಹ ಮತ್ತು ಹಿಂದೆಂದೂ ಇಲ್ಲದಂತಹ ಪಾತ್ರಗಳನ್ನು ಚಿತ್ರಿಸುವ ಉತ್ಸಾಹದಿಂದ ಚಿತ್ರರಂಗಕ್ಕೆ ಕರೆದೊಯ್ದರು. ರಮೇಶ್ ಅರವಿಂದ್ ಅವರು ಪಂಚಭಾಷೆ ತಾರೆಯಾಗಿದ್ದು, ಚಿತ್ರರಂಗದವರು, ಗೆಳೆಯರು ಮತ್ತು ಪ್ರೇಕ್ಷಕರು, ಕ್ಲಾಸ್ ಎಂಟರ್‌ಟೈನರ್, ಮತ್ತು ಉತ್ತಮ ಸಂಭಾವಿತ ವ್ಯಕ್ತಿ ಎಂದು ಒಪ್ಪಿಕೊಂಡಿದ್ದಾರೆ. ಇಂದು ಅವರು ಲಕ್ಷಾಂತರ ಸಿನಿಮಾ ಅಭಿಮಾನಿಗಳ ಹೃದಯದಲ್ಲಿ ಸ್ಥಾನ ಗಳಿಸಿದ್ದಾರೆ. 

ನೋಡುಮಗ.ಕಂ ವಿಡಿಯೋ ನ್ಯೂಸ್ ಗಳನ್ನು ನೋಡಲು ನಮ್ಮ   YOUTUBE  ಚಾನೆಲ್  SUBSCRIBE  ಮಾಡಿ — >>

Ramesh Aravind

ರಮೇಶ್ ಅರವಿಂದ್ ಅವರು ತಮ್ಮ ಸಿನಿ ಜೀವನದಲ್ಲಿ ತುಂಬಾ ಏರು ಪೇರುಗಳನ್ನು ಕಂಡಿದ್ದಾರೆ. ಅವುಗಳನ್ನೆಲ್ಲ ಎದುರಿಸಿ ಜೀವನದಲ್ಲಿ ಯಶಸ್ಸನ್ನು ಕಂಡವರು. ಅವರ ಜೀವನದ ಪ್ರಯಾಣ ನಮಗೆಲ್ಲ ಸ್ಪೂರ್ತಿದಾಯಕ. ಬೆಳ್ಳಿ ಪರದೆಯ ಜೊತೆಗೆ, ಸಣ್ಣ ಪರದೆಯ ಮೇಲೂ ಅವರು ತಮ್ಮ ನಿಲುವನ್ನು ಹೊಂದಿದ್ದರು. ಅವರು ಕೆಲವು ಪ್ರಸಿದ್ಧ ಕನ್ನಡ ಶೋಗಳಲ್ಲಿ ನೀರೂಪಕರಾಗಿ ಕಾರ್ಯ ನಿರ್ವಹಿಸಿ, ನೀರೂಪಣೆಯಲ್ಲೂ ಯಶಸ್ವಿಯಾಗಿದ್ದಾರೆ. ಅಷ್ಟೇ ಅಲ್ಲದೆ ರಮೇಶ್ ಅರವಿಂದ್ ಪ್ರೇರಕ ಭಾಷಣಕಾರರಾಗಿದ್ದು, ಟೆಡ್ಎಕ್ಸ್‌ನಂತಹ ವಿವಿಧ ವೇದಿಕೆಗಳಲ್ಲಿ, ತಮ್ಮ ಸ್ಪೂರ್ತಿದಾಯಕ ಮಾತುಗಳಿಂದ ಪ್ರೇಕ್ಷಕರಿಗೆ ಸ್ಪೂರ್ತಿ ತುಂಬುತ್ತಾರೆ, ಪ್ರೇಕ್ಷಕರ ಜೀವನದ ಹುಮ್ಮಸ್ಸನ್ನು ಹೆಚ್ಚಿಸುತ್ತಾರೆ. 

ಇನ್ನೂ ಹೆಚ್ಚು ಕನ್ನಡ ನ್ಯೂಸ್ ಓದಲು ನೋಡುಮಗ.ಕಂ ಫೇಸ್ಬುಕ್ ಪೇಜ್ ಲೈಕ್ ಮಾಡಿ -->>

ಅದೇ ರೀತಿ, ಯುಕೆ ಕನ್ನಡಿಗರು ರಮೇಶ್ ಅರವಿಂದ್ ಅವರ ಜೊತೆ ಸಂವಾದವನ್ನು ಆಯೋಜಿಸಿದ್ದರು. ಈ ಆಯೋಜನೆಯಲ್ಲಿ ತುಂಬಾ ಅನಿವಾಸಿ ಕನ್ನಡಿಗರು ಭಾಗವಹಿಸಿದ್ದರು. ರಮೇಶ್ ಅರವಿಂದ್ ಅವರ ಸ್ಪೂರ್ತಿದಾಯಕ ಮಾತುಗಳೇನು ಎಂದು ತಿಳಿಯಲು  ಈ ವೀಡಿಯೊವನ್ನು ಸಂಪೂರ್ಣವಾಗಿ ನೋಡಿ ತಿಳಿಯಿರಿ.

ಇನ್ನೂ ಹೆಚ್ಚು ಕನ್ನಡ ನ್ಯೂಸ್ ಓದಲು ನೋಡುಮಗ.ಕಂ INSTAGRAM ಪೇಜ್ Follow ಮಾಡಿ -->>

(Visited 8 times, 1 visits today)

You Might Be Interested In