ರಕ್ತ ಪರೀಕ್ಷೆ ಮಾಡಲು ನಿರಾಕರಿಸಿದ ರಾಗಿಣಿ ಮತ್ತು ಸಂಜನಾ.

ಡ್ರಗ್ಸ್ ಜಾಲದ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಂದ ಬಂಧನವಾಗಿರುವ ಸ್ಯಾಂಡಲ್ ವುಡ್ ನಟಿಯರಾದ ಸಂಜನಾ ಮತ್ತು ರಾಗಿಣಿ, ದಿನದಿಂದ ದಿನಕ್ಕೆ ಕಿರಿಕ ಜಾಸ್ತಿನೇ ಮಾಡ್ತಿದ್ದಾರೆ. ಸಿಸಿಬಿಯ ತನಿಖೆಯ ಭಾಗವಾಗಿ ಡೋಪ್ ಪರೀಕ್ಷೆಗೆ ತನ್ನ ರಕ್ತದ ಮಾದರಿಗಳನ್ನು ನೀಡಲು ಸಂಜನಾ ಮತ್ತು ರಾಗಿಣಿ ಹೈಡ್ರಾಮಾ ಮಾಡುತ್ತಾ ನಿರಾಕರಿಸಿದ್ದಾರೆ. 

ಸಂಜನಾ ಗಲ್ರಾನಿ ತನ್ನ ರಕ್ತದ ಮಾದರಿಗಳನ್ನು ಡೋಪ್ ಪರೀಕ್ಷೆಗೆ ನೀಡಲು ನಿರಾಕರಿಸುತ್ತಿರುವ ವೀಡಿಯೋ ಗುರುವಾರ ಸಕತ್ ವೈರಲ್ ಆಗಿದೆ. ಮೆಡಿಕಲ್ ಟೆಸ್ಟ ಮಾಡುವಾಹ ಕೇವಲ ನಟಿ ಸಂಜನಾ ಮಾತ್ರವಲ್ಲ, ನಟಿ ರಾಗಿಣಿ ಕೂಡ ಹೈಡ್ರಾಮಾ ನಡಿಸಿದ್ದು, ಡ್ರಗ್ಸ್ ಟೆಸ್ಟ ಮಾಡಿಸಲು ನಿರಾಕರಿಸಿದ್ದಾರೆ.

ನೋಡುಮಗ.ಕಂ ವಿಡಿಯೋ ನ್ಯೂಸ್ ಗಳನ್ನು ನೋಡಲು ನಮ್ಮ   YOUTUBE  ಚಾನೆಲ್  SUBSCRIBE  ಮಾಡಿ — >>

ragini and sanjana medical test

ನಟಿ ರಾಗಿಣಿ ದ್ವಿವೇದಿಯವರು “ಈಗಾಗಲೇ ನಮ್ಮ ಜೀವನ ಹಾಳಾಗಿದೇ, ಡ್ರಗ್ಸ್ ಟೆಸ್ಟಿನ ರಿಪೋರ್ಟ ಬಳಸಿಕೊಂಡು ಪೋಲಿಸರು ನಮ್ಮನ್ನು ಮತ್ತಷ್ಟು ಡ್ಯಾಮೆಜ್ ಮಾಡಲು ಯತ್ನಿಸುತ್ತಿದ್ದಾರೆ. ಡೋಪಿಂಗ್ ಟೆಸ್ಟ ಏನಾದರೂ ಪಾಸಿಟಿವ್ ಎಂದು ವರದಿ ಬಂದರೆ ನಮಗೆ ಜೈಲೇ ಗತಿ” ಎಂದು ಪೋಲಿಸರ ಮುಂದೆ ಡ್ರಾಮಾ ಮಾಡಿದ್ದಾರೆ.

ನಟಿ ರಾಗಿಣಿಯವರದ್ದು ಒಂದು ಕತೆಯಾದರೆ, ಸಂಜನಾ ಅವರದ್ದು ಇನ್ನೋಂದು ಕತೆ. ಕೆ ಸಿ ಜನರಲ್ ಆಸ್ಪತ್ರೆಯಲ್ಲಿ ವೈದ್ಯರು ರಕ್ತ ಸಾಂಪಲ್ ಟೆಸ್ಟ ಮಾಡಿಸಬೇಕು ಎಂದು ಬ್ಲೇಡ್ ಸಾಂಪಲ್ ತೆಗೆದುಕೊಳ್ಲುವುದಕ್ಕೆ ಹೋದಾಗ ಸಂಜನಾ ಅವರು ತುಂಬಾ ಕಿರಿಕ್ ಮಾಡಿದ್ದಾರೆ. ಮಹಿಳಾ ವೈದ್ಯಾಧಿಕಾರಿಗಳ ಮೇಲೆ ಕೂಗಾಡಿದ್ದಾರೆ. ಟ್ರೀಟಮೆಂಟ್  ಗೆ ಅಂತಾ ಕರೆತಂದು ಡೋಪಿಂಗ್ ಟೆಸ್ಟ ಮಾಡ್ತಿದ್ದಿರಾ ಎಂದು ಎಗರಾಡಿತ್ತಿದ್ದಾರೆ. ಕೂದಲು ಕೊಡಲ್ಲ, ಯುರಿನ್ ಕೂಡಾ ಕೊಡಲ್ಲ ಎಂದು ರಂಪಾಟ ಮಾಡ್ತಿದ್ದಾರೆ. 

ಇನ್ನೂ ಹೆಚ್ಚು ಕನ್ನಡ ನ್ಯೂಸ್ ಓದಲು ನೋಡುಮಗ.ಕಂ ಫೇಸ್ಬುಕ್ ಪೇಜ್ ಲೈಕ್ ಮಾಡಿ -->>

Sanjana refusing for medical test

ವೈದ್ಯಕೀಯ ಟೆಸ್ಟ ಮಾಡಬೇಕೆಂದು ವೈದ್ಯಾಧಿಕಾರಿಗಳು ಮತ್ತು ಪೋಲಿಸರು ಕೇಳಿದಾಗ, ಸಂಜನಾ ಅವರು “ನನಗೆ ಪೋಲಿಸರ ಮೇಲೆ ಬರವಸೆ ಹೊಗ್ತಿದೆ, ಕೈ ಮುಗಿದ ಕೇಳ್ತಾ ಇದೀನಿ, ನಿವ್ಯಾಕೆ ನನ್ನ ಅರೆಸ್ಟ ಮಾಡಿದ್ದಿರಾ ಅಂತಾ ನನಗೆ ಗೊತ್ತಿಲ್ಲ.  ನನಗೆ, ನೀವು ಕಾರಣ ಕೊಡ್ತಿಲ್ಲ. ಮೀಡಿಯಾ ಮುಂದೆ ನನ್ನ ಬಕ್ರಾ ಮಾಡಿ ಇಲ್ಲಿಯವರೆಗೂ ಕರೆದುಕೊಂಡು ಬಂದಿದ್ದಿರಾ. ನನಗೆ ಟೆಸ್ಟ ಮಾಡಿಸುವುದಕ್ಕೆ ಇಷ್ಟ ಇಲ್ಲ, ನನಗೆ ಬೇಡ ಎಂದು ಹೇಳುವುದಕ್ಕೆ ಹಕ್ಕಿದೆ. ಯಾರೂ ನನ್ನನ್ನ ಒತ್ತಾಯ ಮಾಡುವಂತಿಲ್ಲ. 

ಇನ್ನೂ ಹೆಚ್ಚು ಕನ್ನಡ ನ್ಯೂಸ್ ಓದಲು ನೋಡುಮಗ.ಕಂ INSTAGRAM ಪೇಜ್ Follow ಮಾಡಿ -->>

ಇಲ್ಲಿಯ ತನಕ ನನ್ನನ್ನ ಬಕ್ರಾ ಮಾಡಿ ಕರೆದುಕೊಂಡು ಬಂದಿದ್ದಿರಾ, ನನ್ನ ವಿರುದ್ಡ ನಿಮ್ಮ ಹತ್ರ ಯಾವ ಎವಿಡೆನ್ಸ ಇಲ್ಲ. ನಾನ್ ಯಾರಿಗೋ ಪೋನ್ ಮಾಡಿದ್ರೆ, ಅವರ ಯಾರಿಗೋ ಪೋನ್ ಮಾಡಿದ್ರೆ ಅದು ನನ್ನ ತಪ್ಪಲ್ಲ.” ಎಂದು ಪೋಲಿಸರ ಹಾಗೂ ವೈದ್ಯಾಧಿಕಾರಿಗಳ ಜೊತೆ ವಾಗ್ವಾದ ಮಾಡಿದ್ದಾರೆ. ಈ ವೀಡಿಯೋ ಈಗ ತುಂಬಾ ವೈರಲ್ ಆಗಿದೆ.

(Visited 19 times, 1 visits today)

You Might Be Interested In