ಅನಿವಾಸಿ ಕನ್ನಡಿಗ ಯೋಗೀಂದ್ರ ಮರವಂತೆ ಅವರ ಲಂಡನ್ ಡೈರಿ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಶಸ್ತಿ

ಯು.ಕೆಯ ನೈಋತ್ಯ ಕರಾವಳಿಯ ಊರಾದ ಬ್ರಿಸ್ಟಲ್ ಅಲ್ಲಿ ವಿಮಾನ ತಂತ್ರಜ್ಞರಾಗಿರುವ ಯೋಗೀಂದ್ರ ಮರವಂತೆ ಅವರ “ಲಂಡನ್ ಡೈರಿ -ಅನಿವಾಸಿಯ ಪುಟಗಳು ” ಪುಸ್ತಕಕ್ಕೆ ೨೦೧೯ನೆಯ ಸಾಲಿನ ” ರತ್ನಾಕರವರ್ಣಿ ಮುದ್ದಣ ದತ್ತಿ ಪ್ರಶಸ್ತಿ “ಯನ್ನು ಕನ್ನಡ ಸಾಹಿತ್ಯ ಪರಿಷತ್ತು ಇತ್ತೀಚಿಗೆ ಡಿಸೆಂಬರ್ ೧೦ರಂದು ನೀಡಿ ಗೌರವಿಸಿದೆ. ಉದಯೋನ್ಮುಖ ಬರಹಗಾರರ ಚೊಚ್ಚಲ ಕೃತಿಗೆ ನೀಡಲಾಗುವ ಈ ಪ್ರಶಸ್ತಿ ಯೋಗೀಂದ್ರ ಮರವಂತೆಯವರ ಮೊದಲ ಪುಸ್ತಕಕ್ಕೆ ದೊರೆತಿದ್ದು ಯುನೈಟೆಡ್ ಕಿಂಗ್ಡಮ್ ಕನ್ನಡಿಗರಿಗೆ ಸಂತಸದ ವಿಚಾರ. ಮೂಲತಃ ಕರ್ನಾಟಕದ ಕರಾವಳಿಯ ಊರಾದ ಮರವಂತೆಯವರಾದ ಯೋಗೀಂದ್ರರು ಬ್ರಿಟನ್ನಿನಲ್ಲಿ ಕಳೆದ ಹದಿನೈದು ವರ್ಷಗಳಿಂದ ವಾಸವಾಗಿದ್ದಾರೆ. ಈ ಸಮಯದಲ್ಲಿ ಕನ್ನಡದ ಪತ್ರಿಕೆಗಳಾದ ಪ್ರಜಾವಾಣಿ,ಸುಧಾ,ಉದಯವಾಣಿ,ತುಷಾರ ಹಾಗು ಕೆಂಡಸಂಪಿಗೆಗಳಿಗೆ ನಿರಂತರವಾಗಿ ಬರೆದ ಆಯ್ದ ಬರಹಗಳ ಸಂಕಲನ “ಲಂಡನ್ ಡೈರಿ”. ಬಳ್ಳಾರಿಯ ಹೊಸಪೇಟೆಯ ಯಾಜಿ ಪ್ರಕಾಶನ ಈ ಪುಸ್ತಕವನ್ನು ೨೦೧೯ರಲ್ಲಿ ಪ್ರಕಟಿಸಿತ್ತು. ಇದೀಗ ವಿವಿಡ್ಲಿಪಿಯ ಮೂಲಕ ಈ- ಪುಸ್ತಕವಾಗಿಯೂ ಲಭ್ಯ ಇದೆ.

kannda sahitya parishat award

ಇನ್ನೂ ಹೆಚ್ಚು ಕನ್ನಡ ನ್ಯೂಸ್ ಓದಲು ನೋಡುಮಗ.ಕಂ ಫೇಸ್ಬುಕ್ ಪೇಜ್ ಲೈಕ್ ಮಾಡಿ -->>

ವಿದೇಶದ ಅನುಭವಗಳನ್ನು ಸ್ವದೇಶಿ ಕಣ್ಣುಗಳ ಮೂಲಕ ನೋಡುತ್ತ ಬರೆದ ಬರಹಗಳು “ಲಂಡನ್ ಡೈರಿ “ಯಲ್ಲಿ ಇವೆ. ಇವು ಅನಿವಾಸಿಯ ಜೀವನಾನುಭದ ಕಥನಗಳು ಮತ್ತೆ ಬ್ರಿಟನ್ನಿನ ಒಳಗೆ ಇದ್ದೋ ಅಥವಾ ದೂರದಲ್ಲಿ ಕುಳಿತೋ ತಿಳಿಯಲು ಬಯಸುವವರಿಗೆ ಆಪ್ತ ಅನುಭವ ವಿಶಿಷ್ಟ ಆಯಾಮಗಳನ್ನು ನೀಡುವ ಲೇಖನಗಳು. ಇಂಗ್ಲೆಂಡಿನ ಜನರ ಬದುಕು ಮತ್ತು ಸನ್ನಿವೇಶಗಳೆಡೆಗಿನ ಸೂಕ್ಷ್ಮ ಒಳನೋಟಗಳಿಂದ ಕೂಡಿದ ಮನಸಿಗೆ ಮುದ ನೀಡುವ ಬರಹಗಳ ಸಂಕಲನ ಎಂದು ವಿಮರ್ಶಕರು “ಲಂಡನ್ ಡೈರಿ”ಯ ಬಗೆಗೆ ಹೇಳಿದ್ದಿದೆ.
ಬರವಣಿಗೆಯ ಜೊತೆಗೆ ಯೋಗೀಂದ್ರರು ಯಕ್ಷಗಾನದಲ್ಲಿ ವಿಶೇಷ ಆಸಕ್ತಿ ಇರುವವರು. ಇವರು ಬ್ರಿಟನ್ನಿನ ಹಲವು ನಗರಗಳಲ್ಲಿ ನಿಯಮಿತವಾಗಿ ಪ್ರದರ್ಶನಗಳನ್ನು ನೀಡಿದ್ದಾರೆ. ಭಾರತದ ಭೇಟಿಯ ಸಮಯದಲ್ಲಿ ವೃತ್ತಿನಿರತ ಕಲಾವಿದರ ಜೊತೆಗೂ ಪ್ರದರ್ಶನಗಳಲ್ಲಿ ಭಾಗವಹಿಸುತ್ತಾರೆ. ಇವರ ವಿಮಾನ ಲೋಕದ ಅಚ್ಚರಿ ಅನುಭವಗಳ ಸರಣಿ “ಏರೋ ಪುರಾಣ” ಬುಕ್ ಬ್ರಹ್ಮ ಅಂತರ್ಜಾಲ ಪತ್ರಿಕೆಯಲ್ಲಿ ನಿಯಮಿತವಾಗಿ ಪ್ರಕಟವಾಗುತ್ತಿದೆ.ಕೆಂಡಸಂಪಿಗೆ ಪತ್ರಿಕೆಯಲ್ಲಿ ಇವರ “ಇಂಗ್ಲೆಂಡ್ ಲೆಟರ್ ” ಅಂಕಣ ಪ್ರಕಟವಾಗುತ್ತಿದೆ . ಕನ್ನಡದ ಭರವಸೆಯ ಬರಹಗಾರ ಎಂದು ಗುರುತಿಸಲ್ಪಡುವ ಯೋಗೀಂದ್ರ ಮರವಂತೆ ಅವರಿಗೆ “ನೋಡುಮಗ” ತಂಡ ಈ ಸಂದರ್ಭದಲ್ಲಿ ಶುಭ ಹಾರೈಸುತ್ತದೆ ಮತ್ತು ಇನ್ನೂ ಹೆಚ್ಚಿನ ಬರಹಗಳು ಪುಸ್ತಕಗಳು ಅವರಿಂದ ಬರಲಿ ಎಂದು ಆಶಿಸುತ್ತದೆ.

ನೋಡುಮಗ.ಕಂ ವಿಡಿಯೋ ನ್ಯೂಸ್ ಗಳನ್ನು ನೋಡಲು ನಮ್ಮ   YOUTUBE  ಚಾನೆಲ್  SUBSCRIBE  ಮಾಡಿ — >>

London dairy

“ಲಂಡನ್ ಡೈರಿ ” E-Book ಅನ್ನು ಆಸಕ್ತರು ಕೆಳಗಿನ ಕೊಂಡಿಯ ಮೂಲಕ ಪಡೆಯಬಹುದು. ಮುದ್ರಿತ ಪ್ರತಿ ಬೇಕಾದವರು “ವಿವಿಡ್ಲಿಪಿ” ಯನ್ನು ಸಂಪರ್ಕಿಸಬಹುದು.

https://www.vividlipi.com/shop/articles/london-dairy-2/

(Visited 178 times, 1 visits today)

You Might Be Interested In

LEAVE YOUR COMMENT

Your email address will not be published. Required fields are marked *