ಮಧ್ಯರಾತ್ರಿ ಕವಿತ ಗೌಡ ಗೆ ಚಂದನ್ ಬರ್ತ್ ಡೇ ಸರ್ಪ್ರೈಸ್

ಕನ್ನಡದ ಬಹುದೊಡ್ಡ ರಿಯಾಲಿಟಿ ಶೋ ‘ಬಿಗ್‍ಬಾಸ್’ ಖ್ಯಾತಿಯ ಕಿರುತೆರೆ ನಟಿ ಕವಿತಾ ಗೌಡ ಮನೆಗೆ ಮಧ್ಯರಾತ್ರಿ ನಟ ಚಂದನ್ ಹೋಗಿಬರ್ತ್ ಡೇ ಸರ್ಪ್ರೈಸ್ ಕೊಟ್ಟಿದ್ದಾರೆ.

ಭಾನುವಾರ ಕವಿತಾ ಗೌಡ ಹುಟ್ಟುಹಬ್ಬ ಇತ್ತು. ಕೊರೊನಾ ಇರುವುದರಿಂದ ಮನೆಯಲ್ಲಿಯೇ ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇದೇ ವೇಳೆ ನಟ ಚಂದನ್ 12 ಗಂಟೆಗೆ ಸರಿಯಾಗಿ ಕವಿತಾ ಗೌಡ ಮನೆಗೆ ಹೋಗಿ ಅವರಿಗೆ ಸರ್ಪ್ರೈಸ್ ನೀಡಿದ್ದಾರೆ.

ಚಂದನ್ ಕವಿತ ಗೌಡ ಹುಟ್ಟುಹಬ್ಬಕ್ಕೆ ಉಡುಗೊರೆಯನ್ನು ಕೊಟ್ಟಿದ್ದಾರೆ. “ಸ್ನೇಹಿತೆಯ ಹುಟ್ಟುಹಬ್ಬದ ಪ್ರಯುಕ್ತ ಸರ್ಪ್ರೈಸ್ ಆಗಿ ಭೇಟಿ ನೀಡಿದ್ದೆ. ಎಷ್ಟೋ ವರ್ಷಗಳ ಬಳಿ ಭೇಟಿ ಆದಂತೆ ಎನಿಸಿತು” ಎಂದು ಬರೆದು, ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ಕವಿತ ಗೌಡ ಹಾಗು ಚಂದನ್ ಇಬ್ಬರು ಜೋಡಿಯಾಗಿ ಕಾಣಿಕೊಂಡಿದ್ದರು.ಲಕ್ಷ್ಮಿ ಬಾರಮ್ಮ ಧಾರವಾಹಿ ಕಿರುತೆರೆಯಲ್ಲಿ ಬಹಳ ಯಶಸ್ಸನ್ನು ಕಂಡಿತ್ತು

(Visited 100 times, 2 visits today)

Share and Enjoy !

You Might Be Interested In