ಅಮೆಜಾನ್ ಫ್ರೈಮ್ ವಿಡಿಯೋದಲ್ಲಿ ಮೊದಲ ಬಾರಿಗೆ ಕನ್ನಡದ ‘ಲಾ’ ಸಿನಿಮಾ ಜುಲೈ 17,2020ರಂದು ಬಿಡುಗಡೆಯಾಗಲಿದೆ
ಕನ್ನಡದ ಬಹುನಿರೀಕ್ಷಿತ ‘ಲಾ’ ಸಿನಿಮಾವು ಜುಲೈ 17ರಂದು ಪ್ರದರ್ಶನಗೊಳ್ಳಲಿದೆ ಎಂದು ಅಮೆಜಾನ್ ಫ್ರೈಮ್ ವಿಡಿಯೋ ತಿಳಿಸಿದೆ. ಇದೊಂದು ಕ್ರೈ ಥಿಲ್ಲರ್ ಆಧರಿಸಿದ ಸಿನಿಮಾವಾಗಿದ್ದು ನಂದಿನಿ ಪಾತ್ರಧಾರಿಯಾಗಿ ರಾಗಿಣಿ ಚಂದ್ರನ್ ಅಭಿನಯಿಸಿದ್ದಾರೆ.

ನ್ಯಾಯಕ್ಕಾಗಿ ಅಪರಾಧದ ವಿರುದ್ಧ ಹೋರಾಡುವ ಕತೆ ಇದಾಗಿದ್ದು, ಈ ಚಿತ್ರವು ಮಹಿಳೆಯರ ಮೇಲಿನ ಅನ್ಯಾಯ ಮತ್ತು ಅಪರಾಧದ ವಿರುದ್ಧ ಧ್ವನಿ ಎತ್ತುತ್ತದೆ. ಅಶ್ವಿನಿ ಪುನೀತ್ ರಾಜ್ ಕುಮಾರ್, ಎಂ ಗೋವಿಂದ ನಿರ್ಮಾಣದ ‘ಲಾ’ ಸಿನಿಮಾವನ್ನು ರಘು ಸಮರ್ಥ ಅವರು ನಿರ್ದೇಶಿಸಿದ್ದಾರೆ. ರಾಗಿಣಿ ಪ್ರಜ್ವಲ್ ಅವರು ಈ ಸಿನಿಮಾದ ಮೂಲಕ ಪ್ರಮುಖ ನಟಿಯಾಗಿ ಸ್ಯಾಂಡಲ್ ವುಡ್ ಪ್ರವೇಶಿಸಿದ್ದಾರೆ. ಮುಖ್ಯಮಂತ್ರಿ ಚಂದ್ರು, ಅಚ್ಯುತ್ ಕುಮಾರ್, ಸುಧಾರಾಣಿ , ಸಿರಿ ಪ್ರಹ್ಲಾದ್ ಮತ್ತಿತರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ‘ಲಾ’ ಸಿನಿಮಾವು ಸ್ಯಾಂಡಲ್ ವುಡ್ ಇಂಡಸ್ಟ್ರಿಯಿಂದ ಬಿಡುಗಡೆಯಾಗಲಿರುವ ಮೊದಲ ಡಿಜಿಟಲ್ ಚಿತ್ರವಾಗಿದೆ. ಪುನೀತ್ ರಾಜ್ ಕುಮಾರ್ ಅವರ ಪಿಆರ್ ಕೆ ಪ್ರೊಡೆಕ್ಷನ್ ರಚಿಸಿದ ಈ ಚಿತ್ರವು ಜುಲೈ 17,2020ರಂದು ಅಮೆಜಾನ್ ಫ್ರೈಂ ವಿಡಿಯೋದಲ್ಲಿ ವಿಶ್ವದಾದ್ಯಂತ 200ಕ್ಕೂ ಹೆಚ್ಚು ದೇಶ ಹಾಗೂ ಪ್ರಾಂತ್ರ್ಯದಲ್ಲಿ ಬಿಡುಗಡೆಯಾಗಲಿದೆ.
The facts will be witnessed on a new date, #LawOnPrime will premiere on July 17, 2020, on @PrimeVideoIN@raginichandran #MukhyamantriChandru #AshwiniPuneethRajkumar#MGovinda #RaghuSamarth @vasukivaibhav #SiriPrahlad @PRK_Productions #PRKAudio pic.twitter.com/q7g1MAiklX
— Puneeth Rajkumar (@PuneethRajkumar) June 25, 2020