ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿಕೊಂಡರಾ ಸ್ಯಾಂಡಲ್ ವುಡ್ ಸ್ಟಾರ್ ದಂಪತಿ?

ಸ್ಯಾಂಡಲ್ ವುಡ್ ಈಗಾಗಲೇ ದಿನದಿಂದ ದಿನಕ್ಕೆ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಈಗಾಗಲೇ ಪೋಲಿಸರು ಡ್ರಗ್ಸ್ ಮಾಫಿಯಾದಲ್ಲಿ ಪಾಲ್ಗೊಂಡಿರುವ ಹಲವಾರು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ವ್ಯಕ್ತಿಗಳಲ್ಲಿ ಸ್ಯಾಂಡಲ್ ವುಡ್ ಖ್ಯಾತ ನಟಿಯರಾದ ರಾಗಿಣಿ ಮತ್ತು ಸಂಜನಾ ಅವರನ್ನು ಕೂಡ ಈಗಾಗಲೇ ಬಂಧಿಸಿ, ಅವರನ್ನು ತನಿಖೆಗೆ ಒಳಪಡಿಸಿದ್ದಾರೆ. ಹೀಗಿರುವಾಗ ಈಗ ಡ್ರಗ್ಸ್ ಜಾಲದ ಪ್ರಕರಣದಲ್ಲಿ ಸ್ಯಾಂಡಲ್ ವುಡ್ ಸ್ಟಾರ್ ದಂಪತಿಯ ಹೆಸರು ಕೇಳಿ ಬರುತ್ತಿದೆ

ಇನ್ನೂ ಹೆಚ್ಚು ಕನ್ನಡ ನ್ಯೂಸ್ ಓದಲು ನೋಡುಮಗ.ಕಂ ಫೇಸ್ಬುಕ್ ಪೇಜ್ ಲೈಕ್ ಮಾಡಿ -->>

ಹೌದು, ನೀವು ಕೇಳುತ್ತಿರುವುದು ನಿಜ, ಈಗ ಡ್ರಗ್ಸ್ ಜಾಲದ ಪ್ರಕರಣದಲ್ಲಿ ಸ್ಯಾಂಡಲ್ ವುಡ್ ಸ್ಟಾರ್ ದಂಪತಿಯ ಲಿಂಕ್ ಇದೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಸ್ಟಾರ್ ದಂಪತಿ ಬೇರಾರು ಅಲ್ಲ, ಅವರೇ ನಮ್ಮ ದಿಗಂತ ಮತ್ತು ಐಂದ್ರೀತಾ. ಜೋಡಿ ಲವ್ ಮಾಡಿ ಮದುವೆಯಾಗಿ ಸುಖ ಸಂಸಾರ ನಡೆಸುತ್ತಿದ್ದರು. ಆದರೆ ಸ್ಟಾರ್ ದಂಪತಿ ದಿಗಂತ್ ಐಂದ್ರಿತಾಗೆ, ಸ್ಯಾಂಡಲ್ ವುಡ್ ಡ್ರಗ್ ಪ್ರಕರಣದಲ್ಲಿ ವಿಚಾರಣೆಗೆ ಬರುವಂತೆ ಸಿಸಿಬಿ ನೋಟೀಸ್ ನೀಡುವುದರ ಮೂಲಕ ದೊಡ್ಡ ಶಾಕ್ ಕೊಟ್ಟಿದೆ.

diganth and aindritharay

ಇನ್ನೂ ಹೆಚ್ಚು ಕನ್ನಡ ನ್ಯೂಸ್ ಓದಲು ನೋಡುಮಗ.ಕಂ INSTAGRAM ಪೇಜ್ Follow ಮಾಡಿ -->>

ಸ್ಟಾರ್ ದಂಪತಿ ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ವಿಚಾರಣೆಗೆ ಬರಲು ಹೇಳಲು ಕಾರಣವೇನೆಂದರೆ, ಶೇಖ್ ಫಾಸಿಲ್ ಆಯೋಜಿಸುತ್ತಿದ್ದ ಪಾರ್ಟಿಯಲ್ಲಿ ಐಂದ್ರಿತಾ ಪಾಲ್ಗೊಂಡಿದ್ದರು. ಡ್ರಗ್ಸ್ ಪ್ರಕರಣದಲ್ಲಿ ಸಂಬಂಧಿಸಿದ ಆರೋಪಿ ಶೇಖ್ ಪಾಜಿಲ್ ಈಗಾಗಲೇ ತಲೆಮರೆಸಿಕೊಂಡಿದ್ದಾರೆ. ಶೇಖ್ ಫಾಜಿಲ್ ಗಾಗಿ ಸಿಸಿಬಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಅಷ್ಟೆ ಅಲ್ಲದೆ ಐಂದ್ರಿತಾದಿಗಂತ್ ದಂಪತಿ ಶ್ರೀಲಂಕಾ, ಗೋವಾ, ಬೆಂಗಳೂರು, ಕೇರಳದಲ್ಲಿ ಆಯೋಜನೆ ಆಗುತ್ತಿದ್ದ ಪಾರ್ಟಿಗಳಿಗೂ ಪಾಲ್ಗೊಳ್ಳುತ್ತಿದ್ದರು ಎಂಬ ಸುದ್ದಿ ಕೇಳಿ ಬರುತ್ತಿದ್ದರಿಂದ, ದಂಪತಿಗೂ ಡ್ರಗ್ ಮಾಫಿಯಾದ ಲಿಂಕ್ ಇರಬಹುದೇನೋ ಎಂಬ ಅನುಮಾನದಿಂದ ಅವರನ್ನು ವಿಚಾರಣೆಗೆ 

ಹಾಜರಾಗುವಂತೆ ಸಿಸಿಬಿ ನೋಟಿಸ್ ನೀಡಿದೆ. 

ನೋಡುಮಗ.ಕಂ ವಿಡಿಯೋ ನ್ಯೂಸ್ ಗಳನ್ನು ನೋಡಲು ನಮ್ಮ   YOUTUBE  ಚಾನೆಲ್  SUBSCRIBE  ಮಾಡಿ — >>

ಪಾರ್ಟಿಗಳಲ್ಲಿ ಐಂದ್ರೀತಾ ಅವರು, ಅವರ ಬೇಸ್ಟ್ ಫ್ರೇಂಡ್ಸ್ ಗಳಾದ ರಾಗಿಣಿ ಮತ್ತು ಸಂಜನಾ ಅವರ ಜೊತೆ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಸಂಜನಾ ಮತ್ತು ರಾಹುಲ್ ಕ್ಯಾಸಿನೋ ಪಾರ್ಟಿಯಲ್ಲಿ ಐಂದ್ರೀತಾ ಭಾಗವಹಿಸಿದ್ದಾರೆಂಬ ಮಾಹಿತಿ ನೀಡಿದ್ದಾರೆ. ಇವರಿಬ್ಬರ ಹೇಳಿಕೆ ಆಧಾರದ ಮೇಲೆ ಸ್ಟಾರ ದಂಪತಿ ದಿಗಂತ ಮತ್ತು ಐಂದ್ರೀತಾ ಅವರಿಗೆ ಸಿಸಿಬಿ ನೋಟಿಸ್ ನೀಡಿದೆ ಎಂಬ ವರದಿ ಬಂದಿದೆ.

(Visited 54 times, 1 visits today)

You Might Be Interested In