ಫ್ರೆಂಚ್ ಬಿರಿಯಾನಿ ಹಳಸಿಹೋಯಿತೆ?

ತಮ್ಮ ವಿಶಿಷ್ಟ ಶೈಲಿಯ ನಟನೆಗೆ ಪ್ರಸಿದ್ದಿ ಹೊಂದಿರುವ ಕಲಾವಿದ ದಾನಿಶ್‌ ಸೇಠ್ ಮುಖ್ಯ ಭೂಮಿಕೆ ಇರುವ ಹಾಗು ಪುನೀತ್ ರಾಜಕುಮಾರ್ ರವರ ಪಿ ರ್ ಕೆ ಪ್ರೊಡಕ್ಷನ್ ನಿರ್ಮಿಸಿರುವ ಫ್ರೆಂಚ್ ಬಿರಿಯಾನಿ ಹಲಸಿತೇ ಅಥವಾ ಬಲು ರುಚಿಯಾಗಿದೆಯೇ ನೋಡೋಣ ಬನ್ನಿ.

ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ವಿಶ್ವ ಪ್ರಥಮ ಪ್ರದರ್ಶನವನ್ನು ಹೊಂದಿರುವ ಲಾ (2020) ನಂತರದ ಎರಡನೇ ಕನ್ನಡ ಚಲನಚಿತ್ರ ಫ್ರೆಂಚ್ ಬಿರಿಯಾನಿ, ನೇರವಾದ ಆಕ್ಷನ್ ಹಾಸ್ಯವಾಗಿದ್ದು, ಎಂದಿಗೂ ಗಂಭೀರವಾಗಿ ಪರಿಗಣಿಸುವುದಿಲ್ಲ.

ಭೂಮಿಕೆ :ದಾನಿಶ್‌ ಸೇಠ್,ಸಾಲ್ ಯೂಸೂಫ್‌,ರಂಗಾಯಣ ರಘು,ಚಿಕ್ಕಣ್ಣ,ದಿಶಾ ಮದನ್

ನಿರ್ದೇಶಕ : ಪನ್ನಗಭರಣ

ಬಿಡುಗಡೆ ದಿನಾಂಕ:Fri Jul 24 2020

ಅವಧಿ:1 Hrs 56 Min

ಫ್ರೆಂಚ್ ಬಿರಿಯಾನಿ ಚಿತ್ರ ವಿಭಿನ್ನ ಮಾದರಿಯ ಹಾಸ್ಯ ಸಿನಿಮಾ ಆಗಲಿದೆ ಎಂದು ಜನರು ಸಾಕಷ್ಟು ಮಾತನಾಡಿಕೊಂಡಿದ್ದರು. ಆಟೋರಿಕ್ಷಾ ಚಾಲಕ ಮತ್ತು ಬೆಂಗಳೂರಿನಲ್ಲಿ ಫ್ರೆಂಚ್ ವಲಸಿಗನ ಜೀವನದಲ್ಲಿ ಮೂರು ದಿನದ ಪರದಾಟವನ್ನು ತೋರಿಸುತ್ತದೆ .

ಈ ಚಿತ್ರವು ವಿವಿಧ ಸಂಸ್ಕೃತಿಗಳು ಮತ್ತು ಧರ್ಮಗಳ ಪಾತ್ರಗಳ ಗುಂಪನ್ನು ಹೇಗೆ ಒಟ್ಟುಗೂಡಿಸುತ್ತದೆ ಮತ್ತು ತಪ್ಪಾದ ಗುರುತು ಹಾಗು  ಕಳೆದುಹೋದ ಚೀಲದ ಕಥೆಯಲ್ಲಿ ಪರಸ್ಪರರು ಹೇಗೆ ವಿರೋಧಿಗಳಾಗುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ.

ಇನ್ನೂ ಹೆಚ್ಚು ಕನ್ನಡ ನ್ಯೂಸ್ ಓದಲು ನೋಡುಮಗ.ಕಂ INSTAGRAM ಪೇಜ್ Follow ಮಾಡಿ -->>

ಫ್ರೆಂಚ್ ಬಿರಿಯಾನಿ ಖಂಡಿತವಾಗಿಯೂ ವೀಕ್ಷಕರನ್ನು ನಿರಾಶೆಗೊಳಿಸುವುದಿಲ್ಲ. ಒಬ್ಬ ವ್ಯಕ್ತಿ ಹೇಳುವ ಮಾತನ್ನು ಸರಿಯಾಗಿ ಕೇಳಿಸಿಕೊಳ್ಳಲಿಲ್ಲ ಎಂದರೆ ಏನೇನು ಅನಾಹುತಗಳು ಆಗಬಹುದು ಎಂಬುದನ್ನು ಹಾಸ್ಯಭರಿತವಾಗಿ ಹೇಳುವ ಪ್ರಯತ್ನ ವನ್ನು ಫ್ರೆಂಚ್ ಬಿರಿಯಾನಿ ನಿರ್ದೇಶಕ ಪನ್ನಗ ಭರಣ ರವರು ಮಾಡಿದ್ದಾರೆ.

ಈ ಚಿತ್ರದಲ್ಲಿ ನಾಯಕ, ನಾಯಕಿ ಅಂತಾ ಯಾರು ಇಲ್ಲ. ಎಲ್ಲ ಪಾತ್ರಧಾರಿಗಳು ಮುಖ್ಯವಾಗುತ್ತಾರೆ. ಕಲಾವಿದರ ಆಯ್ಕೆಯ ವಿಚಾರದಲ್ಲಿ ನಿರ್ದೇಶಕರು ಗೆದ್ದಿದ್ದಾರೆ. ಬರಹಗಾರ ಅವಿನಾಶ್‌ ಬಳೆಕ್ಕೆಳ ಶ್ರಮವನ್ನು ಸರಿಯಾದ ರೂಪದಲ್ಲಿ ತೆರೆ ಮೇಲೆ ತೋರಿಸಿರುವ ನಿರ್ದೇಶಕರ ಕಾಯಕ ಮೆಚ್ಚುವಂಥದ್ದು

ಮಸಲ್‌ ಮಣಿ ಪಾತ್ರದಲ್ಲಿ ಮಹಾಂತೇಶ್‌ ಬಹಳ ಗಮನ ಸೆಳೆಯುತ್ತಾರೆ. ‘ಕವಲುದಾರಿ’ ಚಿತ್ರದಲ್ಲಿ ವಿಲನ್‌ ಪಾತ್ರ ನಿರ್ವಹಿಸಿದ್ದ ಸಂಪತ್‌ ಇಲ್ಲಿ ಗ್ಯಾರೇಜ್‌ ಮೋಹನ ಆಗಿ ನಟಿಸಿದ್ದಾರೆ. ಪುರುಷೋತ್ತಮನಾಗಿರುವ ನಾಗಭೂಷಣ್‌ ತೆರೆ ಮೇಲೆ ಕಡಿಮೆ ಅವಧಿ ಇದ್ದರೂ ತಮ್ಮ ಕಾಮಿಡಿ ಟೈಮಿಂಗ್‌ ಮೂಲಕ ನೋಡುಗರಿಗೆ ಇಷ್ಟವಾಗುತ್ತಾರೆ. ರಂಗಾಯಣ ರಘು ಅವರದ್ದು ಎಂದಿನಂತೆ ತಮ್ಮ ಪಾತ್ರಕ್ಕೆ ತಕ್ಕ ಅಭಿನಯ. ಫ್ರೆಂಚ್‌ ಪ್ರಜೆಯಾಗಿ ಸಾಲ್‌ ಯೂಸುಫ್‌, ಪಿತಬೋಶ್‌, ರಜನಿಕಾಂತ, ಆರ್‌ಜೆ ವಿಕ್ಕಿ, ದಿಶಾ ಮದನ್‌, ಸಿಂಧು ಹೀಗೆ ಸಿನಿಮಾದಲ್ಲಿರುವ ಪ್ರತಿಯೊಬ್ಬ ಪಾತ್ರಧಾರಿಯೂ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ.

ಸಂಗೀತ ನಿರ್ದೇಶಕ ವಾಸುಕಿ ವೈಭವ್‌ ಹೊಸ ಶೈಲಿಯ ಮ್ಯೂಸಿಕ್‌ ನೀಡಿದ್ದಾರೆ. ಅದರಲ್ಲೂ ಪುನೀತ್ ರಾಜಕುಮಾರ್ ರವರು‌ ಹಾಡಿರುವ ಹಾಡು ಸಿನಿಮಾ ಮುಗಿದ ಮೇಲೂ ಗುನುಗಬೇಕು ಎನಿಸುತ್ತದೆ. ಒಟ್ಟಾರೆ ಫ್ರೆಂಚ್ ಬಿರಿಯಾನಿ ಕನ್ನಡ ಚಿತ್ರರಂಗದ ಹೊಸ ಪ್ರಯತ್ನ ತೀರಾ ಅದ್ಬುತ ಚಿತ್ರಕಥೆ ಅಲ್ಲದಿದ್ದರೂ ಹಾಸ್ಯ ಸವಿಯಲು ಒಂದು ಬಾರಿ ಫ್ರೆಂಚ್ ಬಿರಿಯಾನಿ ತಿಂದು ಬನ್ನಿ.

ನೋಡುಮಗ.ಕಂ ವಿಡಿಯೋ ನ್ಯೂಸ್ ಗಳನ್ನು ನೋಡಲು ನಮ್ಮ   YOUTUBE  ಚಾನೆಲ್  SUBSCRIBE  ಮಾಡಿ — >>

(Visited 2863 times, 1 visits today)

Share and Enjoy !

You Might Be Interested In