ಖ್ಯಾತ ಹಿರಿಯ ಗಾಯಕ ಎಸ್ ಪಿ ಬಾಲಸುಬ್ರಮಣ್ಯಂ ಅವರ ಆರೋಗ್ಯದ ಸ್ಥಿತಿ ಗಂಭೀರ

ಕೊರೊನಾ ಇಡೀ ವಿಶ್ವವನ್ನೇ ಆವರಿಸಿಕೊಂಡಿದೆ. ಜನರು ಕೊರೊನಾದಿಂದಾಗಿ ತತ್ತರಿಸಿ ಹೋಗಿದ್ದಾರೆ. ರಾಜ್ಯದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇನ್ನು ಚಿತ್ರರಂಗದವರ ಪರಿಸ್ಥಿತಿ ಬಗ್ಗೆ ಕೇಳುವ ಹಾಗೆ ಇಲ್ಲ. ಚಿತ್ರರಂಗದಲ್ಲಿ ಒಂದರ ಮೇಲೊಂದು ಆಘಾತಕಾರಿ ಸುದ್ದಿ ಬರಿತ್ತಲೇ ಇದೆ. ಚಿತ್ರರಂಗದ ಹಾಗೂ ಕಿರುತೆರೆಯ ಹಲವು ನಟ ಮತ್ತು ನಟಿಯರಿಗೆ ಕೊರೊನಾ ಪಾಸಿಟಿವ್ ಆಗಿರುವ ಸುದ್ದಿಗಳು ಹೆಚ್ಚುತ್ತಲೇ ಇವೆ. ಎಲ್ಲ ನಟ ನಟಿಯರು ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅದರಲ್ಲಿ ಕೆಲವರು ಗುಣಮುಖರಾದರೆ, ಇನ್ನು ಕೆಲವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಏನೇ ಆಗಲಿ 2020 ವರ್ಷವು ಎಲ್ಲರ ಪಾಲಿಗೆ ಕೆಟ್ಟ ವರ್ಷ ಆಗಿದೆ ಎಂದೇ ಹೇಳಬಹುದು. ಆದರೆ ಇದೀಗ ಬಂದ ಸುದ್ದಿ ಏನೆಂದರೆ, ಖ್ಯಾತ ಹಿರಿಯ ಗಾಯಕ ಎಸ್ ಪಿ ಬಾಲಸುಬ್ರಮಣ್ಯಂ ಅವರ ಆರೋಗ್ಯದ ಸ್ಥಿತಿ ಗಂಬೀರವಾಗಿದೆ. ಜುಲೈ ೫ ರಂದು ಸ್ವಲ್ಪ ಕೆಮ್ಮು, ನೆಗಡಿ ಮತ್ತು ಜ್ವರ ಕಾಣಿಸಿಕೊಂಡಿತ್ತು. ಇದನ್ನು ನಿರ್ಲಕ್ಷ್ಯ ಮಾಡದೆ ಆಸ್ಪತ್ರೆಗೆ ತೊರಿಸಿಕೊಂಡಿದ್ದಾರೆ. ನೆಗಡಿ, ಜ್ವರ ಮತ್ತು ಕೆಮ್ಮು ಇರುವುದರಿಂದ ಎಸ್ ಪಿ ಬಿ ಅವರನ್ನ ಕೊರೊನಾ ಪರೀಕ್ಷೆಗೆ ಒಳಪಡಿಸಿದಾಗ, ಅವರಿಗೆ ಕೊರೊನಾ ಪಾಸಿಟಿವ್ ಆಗಿರುವುದು ದೃಡಪಟ್ಟಿತ್ತು.  ತದ ನಂತರ ವೈದ್ಯರ ಸಲಹೆಯಂತೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. 

ಇನ್ನೂ ಹೆಚ್ಚು ಕನ್ನಡ ನ್ಯೂಸ್ ಓದಲು ನೋಡುಮಗ.ಕಂ ಫೇಸ್ಬುಕ್ ಪೇಜ್ ಲೈಕ್ ಮಾಡಿ -->>

SPB

ಇದರ ಕುರಿತಾಗಿ ಸ್ವತಃ ಎಸ್ ಪಿ ಬಾಲಸುಬ್ರಮಣ್ಯಂ ಅವರೇ ವೀಡಿಯೋ ಮಾಡುವುದರ ಮೂಲಕ ಎಲ್ಲರೊಂದಿಗೆ ಮಾತನಾಡಿದ್ದಾರೆ. “ಸ್ವಲ್ಪ ಕೆಮ್ಮು, ನೆಗಡಿ ಮತ್ತು ಜ್ವರ ಕಾಣಿಸಿಕೊಂಡಿದ್ದರಿಂದ, ಆಸ್ಪತ್ರೆಗೆ ಬಂದು ಕೊರೊನಾ ಟೆಸ್ಟ ಮಾಡಿಸಿದೆ. ಆವಾಗ ಕೊರೊನಾ ಪಾಸಿಟಿವ್ ಆಗಿದೆ ಎಂದು ತಿಳಿಯಿತು. ಯಾರೂ ಆತಂಕ ಪಡಬೇಕಿಲ್ಲ, ನಾನು ಆರೋಗ್ಯವಾಗಿದ್ದೆನೆ. ನಾನು ಬೇಗನೆ ಹುಷಾರಿಗಿ ಹೋರಬರುತ್ತೆನೆ.” ಎಂದು ಹೇಳಿದ್ದರು.

ಕೊರೊನಾ ಸೊಂಕಿನಿಂದ ಬಳಲುತ್ತಿದ್ದ ಅವರು ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದರೆ ಕಳೆದ ರಾತ್ರಿ ಆರೋಗ್ಯದಲ್ಲಿ ಒಂದಿಷ್ಟು ಏರುಪೇರು ಉಂಟಾಗಿದೆ. ಇದರಿಂದಾಗಿ ಅವರ ಕುಟುಂಬದವರು, ಸ್ನೇಹಿತರು, ಚಿತ್ರರಂಗದವರು ಮತ್ತು ಅವರ ಅಭಿಮಾನಿಗಳು ಆತಂಕಕ್ಕೊಳಗಾಗಿದ್ದಾರೆ. ಎಸ್ ಪಿ ಬಾಲಸುಬ್ರಮಣ್ಯಂ ಅವರ ಆರೋಗ್ಯದಲ್ಲಿ ಮತ್ತಷ್ಟು ಸಮಸ್ಯೆ ಆಗಿದ್ದರಿಂದ ಅವರನ್ನು ವೈದ್ಯರ ಸಲಹೆಯ ಮೇರೆಗೆ ಚೆನೈನ ಎಮ್ ಜಿ ಎಮ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ನೋಡುಮಗ.ಕಂ ವಿಡಿಯೋ ನ್ಯೂಸ್ ಗಳನ್ನು ನೋಡಲು ನಮ್ಮ   YOUTUBE  ಚಾನೆಲ್  SUBSCRIBE  ಮಾಡಿ — >>

ಕೊರೊನಾ ಸೊಕಿನಿಂದ ಬಳಲುತ್ತಿರುವ ಅವರನ್ನು, ಎಮ್ ಜಿ ಎಮ್ ಆಸ್ಪತ್ರೆಯ ಐಸಿಯುನಲ್ಲಿ ಎಸ್ ಪಿ ಬಾಲಸುಬ್ರಮಣ್ಯಂ ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಎಸ್ ಪಿ ಬಾಲಸುಬ್ರಮಣ್ಯಂ ಅವರು ಆದಷ್ಟು ಬೇಗ ಗುಣಮುಖರಾಗಿ ಬರಲಿ ಎಂದು ಅವರ ಎಲ್ಲ  ಸ್ನೇಹಿತರು, ಕುಟುಂಬದವರು, ಚಿತ್ರರಂಗದವರು ಮತ್ತು ಅವರ ಅಭಿಮಾನಿಗಳು ಪ್ರಾರ್ಥನೆಯನ್ನು ಸಲ್ಲಿಸುತ್ತಿದ್ದಾರೆ. ಹಾಗೇಯೇ ನಾವು ಕೂಡ ಎಸ್ ಪಿ ಬಾಲಸುಬ್ರಮಣ್ಯಂ ಅವರು ಬೇಗ ಗುಣಮುಖರಾಗಲೆಂದು ಹಾರೈಸುತ್ತಿದ್ದೆವೆ.

ಇನ್ನೂ ಹೆಚ್ಚು ಕನ್ನಡ ನ್ಯೂಸ್ ಓದಲು ನೋಡುಮಗ.ಕಂ INSTAGRAM ಪೇಜ್ Follow ಮಾಡಿ -->>

(Visited 59 times, 1 visits today)

You Might Be Interested In