ಬೆಂಗಳೂರಿನಲ್ಲಿ ನಡೆಯುತ್ತಿರುವ ಘಟನೆಗಳಿಗೆ ಡಾ. ರಾಜಕುಮಾರ ಅವರ ಪ್ರತಿಕ್ರಿಯಿಸುತ್ತಿದ್ದರು

ಡಾ ರಾಜ್‌ಕುಮಾರ್ ಅವರು ಕನ್ನಡ ಚಲನಚಿತ್ರೋದ್ಯಮದ ಇತಿಹಾಸದಲ್ಲಿ ಶ್ರೇಷ್ಠ ನಟರಲ್ಲಿ ಒಬ್ಬರು. ಅವರು ಸ್ಯಾಂಡಲ್ ವುಡ್ ನಲ್ಲಿ ಪೌರಾಣಿಕ ನಟ ಎಂದು ಪ್ರಸಿದ್ಧರಾಗಿದ್ದಾರೆ. ಡಾ ರಾಜ್‌ಕುಮಾರ್ ಅವರ ಹೆಸರಿಗೆ ಹಲವಾರು ಪ್ರಶಸ್ತಿಗಳನ್ನು ಗಳಿಸಿದ ಏಕೈಕ ನಟ. ದಾಖಲೆಗಳ ಪ್ರಕಾರ, ಅವರು 15 ಕ್ಕೂ ಹೆಚ್ಚು ಗೌರವಗಳನ್ನು ಹೊಂದಿದ್ದಾರೆ. ಚಿತ್ರರಂಗದಲ್ಲಿ ಎಂತಹುದೇ ಕಠಿಣ ಪರಿಸ್ಥಿತಿ ಬಂದರೂ, ರಾಜಕುಮಾರ ಅವರು, ಸಮಸ್ಯೆಗೆ ಸರಿಯಾದ ಪರಿಹಾರ ಹುಡುಕಿ, ಅದನ್ನು ಬಗೆಹರಿಸುವುದರಲ್ಲಿ ಯಶಸ್ವಿಯಾಗುತ್ತಿದ್ದರು. 

ಡಾ ರಾಜಕುಮಾರ ಅವರಿಗೆ ಅಭಿಮಾನಿಗಳೆಂದರೆ ಎಲ್ಲಿಲ್ಲದ ಪ್ರೀತಿ. ಅಭಿಮಾನಿಗಳಲ್ಲಿ ರಾಜಕುಮಾರ ಅವರು ದೇವರನ್ನು ಕಾಣುತ್ತಿದ್ದರು. ಆದ್ದರಿಂದ ಅವರು ಯಾವುದೇ ಸಬೆ, ಸಮಾರಂಭಗಳಲ್ಲಿ ಭಾಗಿವಹಿಸಿದಾಗ, ಅವರ ಭಾಷಣದ ಪ್ರಾರಂಭದಲ್ಲಿ ಯಾವಾಗಲೂ “ನನ್ನಅಭಿಮಾನಿ ದೇವರುಗಳೆ” ಎಂದೇ ಪ್ರಾರಂಭಿಸುತ್ತಿದ್ದರು. ಅವರು ಯಾವತ್ತು ಹಿಂದೂ ಮತ್ತು ಮುಸ್ಲಿಂ ಎಂದು ಬೇದ ಬಾವ ಮಾಡುತ್ತಿರಲಿಲ್ಲ, ಎಲ್ಲರನ್ನು ಸಮನಾಗಿ ನೋಡುತ್ತಿದ್ದರು.

ನೋಡುಮಗ.ಕಂ ವಿಡಿಯೋ ನ್ಯೂಸ್ ಗಳನ್ನು ನೋಡಲು ನಮ್ಮ   YOUTUBE  ಚಾನೆಲ್  SUBSCRIBE  ಮಾಡಿ — >>

ಈಗ ಅವರು ನಮ್ಮ ನಡುವೆ ಇಲ್ಲ. ಅವರು ಸ್ವರ್ಗವಾಸಿಯಾದರೂ ನಮ್ಮ ಮತ್ತು ನಿಮ್ಮಲ್ಲರ ಮನದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಎಷ್ಟೋ ಜನ ಅವರ ಹಾವಬಾವಗಳನ್ನು ಮಿಮಿಕ್ರಿ ಮಾಡುತ್ತಾರೆ. ಈ ಮಿಮಿಕ್ರಿಯನ್ನು ನೋಡಿದಾಗ ಸ್ವತಃ ರಾಜಕುಮಾರ ಅವರೇ ಎದುರಿಗೆ ಬಂದ ಹಾಗೆ ಇರುತ್ತದೆ. ಅಂತಹ ಮಿಮಿಕ್ರಿ ಆರ್ಟಿಸ್ಟಗಳಲ್ಲಿ ರವಿಸಂತು ಕೂಡ ಒಬ್ಬರು. ರವಿಸಂತು ಅವರು ಹಲವಾರು ಕನ್ನಡ ಖ್ಯಾತ ನಟರ ಮಿಮಿಕ್ರಿಯನ್ನು ಮಾಡುತ್ತಾರೆ.

ಇತ್ತಿಚಿಗೆ ಬೆಂಗಳೂರಿನಲ್ಲಿ ಹಲವಾರು ಗಲಬೆ, ಹಿಂಸಾಚಾರ ಕೃತ್ಯಗಳು ನಡೆಯುತ್ತಿವೆ. ಇದರಿಂದ ಬೆಂಗಳೂರಿನ ಜನರು ಸಂಕಷ್ಟಕ್ಕೊಳಗಾಗಿದ್ದಾರೆ. ಇಂತಹ ಸಂದರ್ಬದಲ್ಲಿ ಡಾ.ರಾಜಕುಮಾರ ಅವರು ನಮ್ಮಲ್ಲರ ನಡುವೆ ಇದ್ದಿದ್ದರೆ ಅವರ ಪ್ರತಿಕ್ರಿಯೆ ಹೇಗೆ ಇರುತ್ತಿತ್ತು, ಅವರು ಜನರಿಗೆ ಏನು ಹೇಳಬಯಸುತ್ತಿದ್ದರು ಎನ್ನುವುದನ್ನ ಈ ವೀಡಿಯೊ ನೋಡಿ ತಿಳಿಯಿರಿ

ಇನ್ನೂ ಹೆಚ್ಚು ಕನ್ನಡ ನ್ಯೂಸ್ ಓದಲು ನೋಡುಮಗ.ಕಂ ಫೇಸ್ಬುಕ್ ಪೇಜ್ ಲೈಕ್ ಮಾಡಿ -->>

ಇನ್ನೂ ಹೆಚ್ಚು ಕನ್ನಡ ನ್ಯೂಸ್ ಓದಲು ನೋಡುಮಗ.ಕಂ INSTAGRAM ಪೇಜ್ Follow ಮಾಡಿ -->>

(Visited 106 times, 1 visits today)

You Might Be Interested In

LEAVE YOUR COMMENT

Your email address will not be published. Required fields are marked *