”ವರ್ಣ ಪಟಲ” (Spectrum) ಕನ್ನಡ ಚಲನಚಿತ್ರದ ಟ್ರೈಲರ್ ಆಗಸ್ಟ್ 8 ಕ್ಕೆ ಬಿಡುಗಡೆ

ಸಾಯಿ ಗಣೇಶ್ ಪ್ರೊಡಕ್ಷನ್ಸ್ “ಲಾಂಛನದಲ್ಲಿ ” ಕವಿತಾ ಸಂತೋಷ್” , ಹಾಗೂ “ಡಾ.ಸರಸ್ವತಿ ಹೊಸದುರ್ಗ” ರವರು “ವರ್ಣ ಪಟಲ” ಎಂಬ ಕನ್ನಡ ಚಲನಚಿತ್ರವನ್ನು ಮೊದಲಸಾರಿ ನಿರ್ಮಿಸಿದ್ದಾರೆ. ಈ ಚಲನಚಿತ್ರದ ಕತೆಯು ಆಟಿಸಂಗೆ ಈಡಾಗಿರುವ ಮಕ್ಕಳ ಬದುಕನ್ನು ಆಧರಿಸಿದೆ. ಚಿತ್ರದ ಕತೆಯನ್ನು ” ಡಾ.ಸರಸ್ವತಿ ಹೊಸದುರ್ಗ ಹಾಗೂ ಕಾರ್ತಿಕ್ ಸರ್ಗೂರ್ ಜೊತೆಗೆ ಕವಿತಾ ಸಂತೋಷ್ Research, ಮಾಡಿ ಬರೆದಿರುವರು.

ಸಾಮಾಜಿಕ ಕಾರ್ಯಕರ್ತೆ, ಉದ್ಯಮಿಗಳು ಆಗಿರುವ ಕವಿತಾ ಸಂತೋಷ್ ಹಾಗೂ ಹಲವಾರು ವರ್ಷಗಳಿಂದ ENGLAND ನ Bristol ನಲ್ಲಿ ವೈದ್ಯಕೀಯ ವೃತ್ತಿ ನಿರ್ವಹಿಸುತ್ತಿರುವ ಡಾ.ಸರಸ್ವತಿಯವರು, ತಮ್ಮ ಸ್ವಂತ ಅನುಭವಗಳನ್ನೇ ಕತೆಯ ಆಳಕ್ಕೆ ಇಳಿದು ಮೊದಲಸಾರಿ ಈ ಚಲನಚಿತ್ರ ನಿರ್ಮಾಣ ಮಾಡಿರುವುದು ವಿಶೇಷ . ಈ ಕತೆಯನ್ನು ಚಲನಚಿತ್ರವಾಗಿ ರೂಪಿಸಿ ಜನಸಾಮಾನ್ಯರನ್ನು ತಲುಪುವ ಉದ್ದೇಶದ ಜೊತೆಗೆ ಆಟಿಸಂ ಗೆ ಒಳಗಾಗಿರುವ ಮಕ್ಕಳ ತಂದೆ ತಾಯಿಗಳಿಗೆ ಮಾನಸಿಕ ಧೈರ್ಯ ತುಂಬುವ ಉದ್ದೇಶ ಹೊಂದಿದ್ದಾರೆ. ಈ ಮೂಲಕ ಆಟಿಸಂಗೆ ತುತ್ತಾಗಿರುವ ಮಕ್ಕಳ ಪೋಷಕರಿಗೆ ಪ್ರೇರಕರಾಗಬೇಕು ಎಂಬ ಗುರಿಯೂ ಮೂಲವಾಗಿ ಉದ್ದೇಶವೇ ಇವರನ್ನು ಚಿತ್ರ ನಿರ್ಮಾಣದ ಹಂತಕ್ಕೆ ತಂದಿದೆ. 

ಈ ಚಿತ್ರದ ಟ್ರೈಲರ್ ಇದೇ ಆಗಸ್ಟ್ 8 ಕ್ಕೆ ಲೋಕರ್ಪಣೆಯಾಗಲಿದೆ ಈ ಕಾರ್ಯಕ್ರಮದ ನೇರ ಪ್ರಸಾರವನ್ನು ನಮ್ಮ ನೋಡುಮಗಾ.ಕಾಮ್ ಫೇಸ್ ಬುಕ್ ಪೇಜ್ ನಲ್ಲಿ ವೀಕ್ಷಿಸಬಹುದು.

ಇನ್ನೂ ಹೆಚ್ಚು ಕನ್ನಡ ನ್ಯೂಸ್ ಓದಲು ನೋಡುಮಗ.ಕಂ ಫೇಸ್ಬುಕ್ ಪೇಜ್ ಲೈಕ್ ಮಾಡಿ -->>

varnapatla kannada movie

ನಿರ್ಮಾಪಕ ಹಾಗೂ ಕತೆಗಾರರಾದ, ಡಾ. ಸರಸ್ವತಿ ಮತ್ತು ಕವಿತಾ ಸಂತೋಷ್ ಅವರ ಈ “ವರ್ಣ ಪಟಲ” ಚಿತ್ರವನ್ನು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಚೇತನ್ ಮುಂಡಾಡಿ ನಿರ್ದೇಶಿಸುತ್ತಿದ್ದಾರೆ. ಇದಲ್ಲದೇ ಈ ಚಿತ್ರದಲ್ಲಿ ಕಥೆಯ ನಾಯಕಿಯಾಗಿ ನಟಿಸಿರುವ ಕಿರುತೆರೆ ಮತ್ತು ಹಿರಿತೆರೆ ನಟಿ ಜ್ಯೋತಿ ರೈ ಯವರು ನಟಿಸಿರುವುದು ವಿಶೇಷ. ಇದಕ್ಕೂ ಕಾರಣವೂ ಇದೆ ಎನ್ನುತ್ತಾರೆ ಕವಿತ ಮತ್ತು ಡಾ.ಸರಸ್ವತಿಯವರು. ಒಂದಿಷ್ಟು ಕಾಲ ಆಟಿಸಂ ಮಕ್ಕಳಬಗ್ಗೆ ತಿಳಿದು ಕೊಳ್ಳಲು ನಿರ್ಧೇಶಕರು ಆಟಿಸಂ ಮಕ್ಕಳ ತಾಯಂದಿರನ್ನು ಭೇಟಿಯಾದಾಗ , ಅವರು ಪಡುವ ಕಷ್ಟಗಳನ್ನು ನೋಡಿ ಈ ಪಾತ್ರಕ್ಕೆ ನ್ಯಜತೆಯ ನಟನೆಯ ಕಲಾವಿದರನ್ನು ಆಯ್ಕೆ ಮಾಡಲು ನಿರ್ಧರಿಸಿದಾಗ ಚಲನಚಿತ್ರ ಮತ್ತು ಕಿರುತೆರೆಯ ಹೆಸರು ಮಾಡಿರುವ ಜ್ಯೋತಿ ರೈಯವರ ಮಗ ಕೂಡ ಆಟಿಸಂ ಗೆ ಒಳಗಾಗಿರುವುದರಿಂದ ಈ ಪಾತ್ರಕ್ಕೆ ಇವರೇ ಉತ್ತಮವೆಂದು , ಈ ಪಾತ್ರಕ್ಕೆ ಮತ್ತಷ್ಟು ಜೀವ ತುಂಬಲು ಇವರಿಗೆ ಸಹಾಯವಾಗುತ್ತದೆ ಎನ್ನುವ ಉದ್ದೇಶದಿಂದ ನಿರ್ಧೇಶಕರು ಅಯ್ಕೆ ಮಾಡಿರುವುದು ಎನ್ನುವುದಲ್ಲದೇ ಈ ಚಿತ್ರದಲ್ಲಿ ಅರವಿಂದ್ ರಾವ್ ,ಅನುಪ್ ಸಾಗರ್ ,ಬೇಬಿ ಅನ್ಷಿಕಾ, ಬೇಬಿ ಧನಿಕ ,ಕುಮಾರಿ ಹನ್ಷಿಕಾ, ಇಂದ್ರಾಣಿ ನಾಯರ್ , ಶ್ರೀಕಾಂತ್ ಹೆಬ್ಲೀಕರ್ , ಚೇತನ್ ರೈ ಮಾಣಿ ,ಗುರು ಹೆಗ್ಡೆ ,ಅರ್ಜುನ್ ,ಇಳಾವಿಟ್ಲಾ ಜೊತೆಗೆ ಹಲವು ಭಾಷೆಯಲ್ಲಿ ನಟಿಸಿರುವ ಹಿರಿಯ ನಟಿ ” ಶ್ರೀಮತಿ ಸುಹಾಸಿನಿ ಮಣಿರತ್ನಂ ” ಯವರು ಒಂದು ವಿಶೇಷ ಪಾತ್ರದಲ್ಲಿ ನಟಿಸಿ ಕತೆಗೆ ಜೀವ ತುಂಬಿದ್ದಾರೆ.

ಇನ್ನೂ ಹೆಚ್ಚು ಕನ್ನಡ ನ್ಯೂಸ್ ಓದಲು ನೋಡುಮಗ.ಕಂ INSTAGRAM ಪೇಜ್ Follow ಮಾಡಿ -->>

ಚಲನಚಿತ್ರ ಕ್ಕೆ KGF ಖ್ಯಾತಿ ಯ ಶ್ರೀಕಾಂತ್ ರವರ ಸಂಕಲನ, ಗಣೇಶ್ ಹೆಗ್ಡೆಯವರ ಕ್ಯಾಮರಾ ಕೈಚಳಕ, ಹರ್ಷವರ್ಧನ್ ರಾಜ್ ರವರ ಸಂಗೀತ , ಜೊತೆಗೆ A.P Arjun ರವರು Creative Head ಆಗಿ ಮಾರ್ಗದರ್ಶನ ಮಾಡಿರುವುದರ ಜೊತೆಗೆ ಕಾರ್ತಿಕ್‌ ಸರ್ಗೂರ್ ರವರು ಈ ಚಿತ್ರಕ್ಕೆ ಬರೆದಿರುವ ನಾಲ್ಕು ಹಾಡುಗಳು ಎಲ್ಲಾ ಕೇಳುಗರಿಗೆ ಖಂಡಿತವಾಗಿ ಖುಷಿ ಕೊಡುತ್ತದೆ ಎನ್ನುತ್ತಿದೆ ಚಿತ್ರ ತಂಡ . ಈ ಚಲನಚಿತ್ರ ಕ್ಕೆ ಮಾರ್ಗದರ್ಶನ ಮಾಡಿರುವುದು ಖುಷಿಕೊಟ್ಟಿದೆ ಅನ್ನುತ್ತಾರೆ ನಿರ್ಮಾಪಕರು. ದೇಶವನ್ನು ಆವರಿಸಿದ ಕರೋನ ಕಡಿಮೆಯಾಗುತ್ತಿದ್ದಂತೆ ಬರೆದ ಈ
ಚಿತ್ರದ Trailer ತೆರೆಕಾಣಿಸುವ ನಿರ್ಧಾರ ಮಾಡಿದೆ ಚಿತ್ರತಂಡ.

ನೋಡುಮಗ.ಕಂ ವಿಡಿಯೋ ನ್ಯೂಸ್ ಗಳನ್ನು ನೋಡಲು ನಮ್ಮ   YOUTUBE  ಚಾನೆಲ್  SUBSCRIBE  ಮಾಡಿ — >>

(Visited 370 times, 1 visits today)

You Might Be Interested In

LEAVE YOUR COMMENT

Your email address will not be published. Required fields are marked *