ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟ ಝಾರಾ ಯಾಸ್ಮಿನ್

ರಿಯಲ್​ ಸ್ಟಾರ್​ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ಅಭಿನಯದ ‘ಸೂಪರ್​​ಸ್ಟಾರ್’ ಸಿನಿಮಾ ಘೋಷಣೆಯಾಗಿ ನಾಲ್ಕು ತಿಂಗಳಾಗಿವೆ. ಚಿತ್ರದ ಮುಹೂರ್ತ ಆಗಿ ಎರಡು ತಿಂಗಳಾಗಿವೆ. ಆದರೆ, ಚಿತ್ರದ ನಾಯಕಿಯ ಆಯ್ಕೆ ಮಾತ್ರ ಇನ್ನೂ ಆಗಿರಲಿಲ್ಲ. ಇದೀಗ ನಾಯಕಿಯ ಆಯ್ಕೆ ಆಗಿದ್ದು, ಝಾರಾ ಯಾಸ್ಮಿನ್ ಎಂಬ ಬೆಡಗಿ ಮುಂಬೈನಿಂದ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟಿದ್ದಾರೆ.

ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡಲಿದ್ದಾರೆ ‘ಬಾಲಿವುಡ್ ಬ್ಯೂಟಿ’

ಈ ಝಾರಾ ಯಾಸ್ಮಿನ್ ಮುಂಬೈ ಮೂಲದವರಾಗಿದ್ರೂ ಈವರೆಗೂ ಯಾವುದೇ ಚಿತ್ರದಲ್ಲಿ ನಟಿಸಿರಲಿಲ್ಲ. ಹಾಗಾಗಿ ಬಾಲಿವುಡ್ ನಟಿ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಝಾರಾ ಈವರೆಗೂ ಮಾಡಲಿಂಗ್‍ನಲ್ಲಿ ಗುರುತಿಸಿಕೊಂಡಿದ್ದರು. ಒಂದಿಷ್ಟು ವಿಡಿಯೋ ಸಾಂಗ್‍ಗಳಲ್ಲಿ ಕಾಣಿಸಿದ್ದರು. ಬಾಲಿವುಡ್‍ನ ಯಾವುದಾದ್ರೂ ಚಿತ್ರದಲ್ಲಿ ನಟಿಸಬೇಕು ಎನ್ನುವಷ್ಟರಲ್ಲೇ ಅವರಿಗೆ ಕನ್ನಡದಲ್ಲಿ ‘ಸೂಪರ್​​ಸ್ಟಾರ್’ ಚಿತ್ರದಲ್ಲಿ ನಟಿಸುವುದಕ್ಕೆ ಅವಕಾಶ ಸಿಕ್ಕಿದೆ. ಜನವರಿ ಮೂರನೇ ವಾರದಿಂದ ಝಾರಾ ಅವರು ‘ಸೂಪರ್​​ಸ್ಟಾರ್’ ಚಿತ್ರತಂಡ ಸೇರಲಿದ್ದಾರೆ.

ರಮೇಶ್ ವೆಂಕಟೇಶ್ ಅನ್ನೋರು ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದ್ದು, ಒಂದಿಷ್ಟು ದೃಶ್ಯ ಮತ್ತು ಫೈಟ್‍ಗಳ ಚಿತ್ರೀಕರಣ ಅದಾಗಲೇ ಮುಗಿದಿದೆ. ಸೂಕ್ತ ನಾಯಕಿ ಸಿಕ್ಕದಿದ್ದ ಕಾರಣ ನಾಯಕಿ ಭಾಗದ ಚಿತ್ರೀಕರಣವನ್ನು ಬಾಕಿ ಇಡಲಾಗಿತ್ತು. ಇದೀಗ ಝಾರಾ ಬಂದಿರುವುದರಿಂದ, ಹಿರೋಯಿನ್​ ದೃಶ್ಯ ಚಿತ್ರೀಕರಣ ಮಂಗಳೂರಿನಲ್ಲಿ ನಡೆಯಲಿದೆ.

ಈ ಚಿತ್ರದಲ್ಲಿ ನೃತ್ಯ ನಿರ್ದೇಶಕ ಮತ್ತು ನಟ ಪ್ರಭುದೇವ ಅವರ ತಂದೆ ಮುಗೂರು ಸುಂದರಂ ಸಹ ಒಂದು ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ.

(Visited 7 times, 1 visits today)

You Might Be Interested In

LEAVE YOUR COMMENT

Your email address will not be published. Required fields are marked *