ಹ್ಯಾಟ್ರಿಕ್ ಹೀರೊ ಶಿವರಾಜಕುಮಾರ್ ಅವರು ಕನ್ನಡ ಚಿತ್ರರಂಗದ ಮುಂದಾಳತ್ವ ವಹಿಸುತ್ತಾರೊ ಅಥವಾ ಇಲ್ಲವೋ!!!

shivaraj kumar will lead kannad film industry

ಚಿತ್ರರಂಗದಲ್ಲಿ ಯಾರಾದರೂ ಒಬ್ಬರು ಹಿರಿಯನಾಯಕರು ಮುಂದಾಳತ್ವ ವಹಿಸಿಕೊಂಡು, ಚಿತ್ರ ರಂಗದಲ್ಲಿ ಯಾವುದೇ ಸಮಸ್ಯೆ ಬಂದರೆ ಅದರ ವಿರುದ್ಧ ಧ್ವನಿ ಎತ್ತಿ, ಅದಕ್ಕೆ ಸರಿಯಾದ ಪರಿಹಾರ ಒದಗಿಸಿಕೊಡುತ್ತಿದ್ದವರು. ಡಾ. ರಾಜಕುಮಾರ್ ಅವರ ನಂತರ ಇಲ್ಲಿಯವರೆಗೂ ಹಿರಿಯ ನಟರಾದ ರೆಬೆಲ್ ಸ್ಟಾರ್ ಅಂಬರೀಶ್ ಅವರು ನಾಯಕತ್ವವನ್ನು ವಹಿಸಿಕೊಂಡಿದ್ದರು. ಆದರೆ ಅಂಬರೀಶ್ ಅವರ ನಂತರ ಈಗ ಸ್ಯಾಂಡಲ್ ವುಡ್ನಲ್ಲಿ ನಾಯಕರ ಕೊರತೆ ಉಂಟಾಗಿದೆ. ಯಾವದಾದರು ಸಮಸ್ಯೆ ಚಿತ್ರರಂಗದಲ್ಲಿ ಎದುರಾದರೆ, ಯಾರು ಅದರ ವಿರುದ್ದ ದ್ವನಿ ಎತ್ತಿ, ಸಮಸ್ಯೆ ಬಗೆಹರಿಸುತ್ತಾರೆ ಎಂಬ ಪ್ರಶ್ನೆ ಚಿತ್ರರಂಗದಲ್ಲಿರುವವರಿಗೆ ಕಾಡುತ್ತಿದೆ.

ನೋಡುಮಗ.ಕಂ ವಿಡಿಯೋ ನ್ಯೂಸ್ ಗಳನ್ನು ನೋಡಲು ನಮ್ಮ   YOUTUBE  ಚಾನೆಲ್  SUBSCRIBE  ಮಾಡಿ — >>

ಸಂಪೂರ್ಣ ವಿಶ್ವವೇ ಕೊರೊನಾದಿಂದ ತತ್ತರಿಸಿ ಹೋಗಿದೆ. ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪಾಸಿಟಿವ್ ಕೇಸ್ ಗಳು ಹೆಚ್ಚುತ್ತಲೇ ಇವೆ. ಚಿತ್ರ ರಂಗದಲ್ಲೂ ತುಂಬಾ ಜನರಿಗೆ ಕೊರೊನಾ ಆಗಿದೆ. ಕೊರೊನಾದಿಂದ ಚಿತ್ರರಂಗದಲ್ಲಿ ಬಹಳ ಸಮಸ್ಯೆಗಳು ಎದುರಾಗುತ್ತಿವೆ. ಇಂತಹ ಸಂದರ್ಭದಲ್ಲಿ ಕೇಂದ್ರಾಡಳಿತ ದಿಂದ ಎಲ್ಲ ಉದ್ಯಮಗಳಿಗೆ ಪ್ಯಾಕೇಜ್ ಗಳನ್ನು ನೀಡಲಾಗಿತ್ತು, ಆದರೆ ಕನ್ನಡ ಚಿತ್ರರಂಗಕ್ಕೆ ಯಾವುದೇ ಪ್ಯಾಕೇಜ್ ಲಭ್ಯವಾಗಿಲ್ಲ. ಇಂತಹ ಕಠಿಣ ಪರಿಸ್ಥಿತಿಯಲ್ಲೂ ಚಿತ್ರರಂಗದಲ್ಲಿ ಯಾರೂ ಮುಂದಾಳತ್ವ ವಹಿಸದಿದ್ದರೆ, ನಾಯಕರ ಕೊರತೆಯಿಂದಾಗಿ ಚಿತ್ರರಂಗ ಇನ್ನು ತುಂಬಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

nodu maga website logo

ಎಲ್ಲಾವುದನ್ನು ಗಮನದಲ್ಲಿಟ್ಟುಕೊಂಡು, ನಮ್ಮ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅವರು ಮುಂದಾಳತ್ವ ವಹಿಸಿಕೊಳ್ಳುವಂತೆ ಮನವಿ ಮಾಡಿಕೊಳ್ಳಲು ಚಿತ್ರರಂಗದ ಗಣ್ಯರು, ನಿರ್ಮಾಪಕರು, ನಿರ್ದೇಶಕರು, ಕಲಾವಿದರು, ತಂತ್ರಜ್ಞರು ಮತ್ತು ವಾಣಿಜ್ಯ ಮಂಡಳಿಯ ಅಧ್ಯಕ್ಷರೆಲ್ಲ ಸೇರಿ ಜುಲೈ ೨೪ ರಂದು ಶಿವರಾಜಕುಮಾರ್ ರವರ ಮನೆಯಲ್ಲಿ ಸಭೆ ನಡೆಸಲಿದ್ದಾರೆ.

ಇನ್ನೂ ಹೆಚ್ಚು ಕನ್ನಡ ನ್ಯೂಸ್ ಓದಲು ನೋಡುಮಗ.ಕಂ INSTAGRAM ಪೇಜ್ Follow ಮಾಡಿ -->>

 ನಮಗೆಲ್ಲರಿಗೂ ತಿಳಿದ ಹಾಗೆ ಶಿವರಾಜಕುಮಾರ್ ರವರು ಸುಮಾರು ಮೂರು ದಶಕಗಳಿಂದ ಚಿತ್ರರಂಗದಲ್ಲಿದ್ದುಕೊಂಡು, ತಮ್ಮ ಅಮೋಘವಾದ ನಟನೆಯಿಂದ ನಮ್ಮೆಲ್ಲರ ಮನಸ್ಸನ್ನು ಗೆದ್ದಿದ್ದಾರೆ. ಶಿವರಾಜಕುಮಾರ್ ಅವರು ಒಬ್ಬ ಸ್ನೇಹಜೀವಿ. ಚಿತ್ರರಂಗದಲ್ಲಿ ಎಲ್ಲರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಕೇವಲ ಕನ್ನಡ ಚಿತ್ರ ರಂಗದಲ್ಲಿ ಮಾತ್ರವಲ್ಲ ಬೇರೆ ಬೇರೆ ಇನ್ನಿತರ ಚಿತ್ರರಂಗದಲ್ಲೂ ಕೂಡ ಉತ್ತಮ ಬಾಂದವ್ಯವನ್ನು ಹೊಂದುವುದರ ಮೂಲಕ ಚಿರಪರಿಚಿತರಾಗಿದ್ದಾರೆ. ಆದ್ದರಿಂದ ಶಿವರಾಜಕುಮಾರ್ ಅವರು ನಾಯಕತ್ವ ವಹಿಸಿದರೆ ಸೂಕ್ತ ಎಂದು ಕನ್ನಡ ಚಿತ್ರರಂಗ ಮಂಡಳಿಯ ಅಭಿಪ್ರಾಯ.

ಇನ್ನೂ ಹೆಚ್ಚು ಕನ್ನಡ ನ್ಯೂಸ್ ಓದಲು ನೋಡುಮಗ.ಕಂ ಫೇಸ್ಬುಕ್ ಪೇಜ್ ಲೈಕ್ ಮಾಡಿ -->>

 

  ಕುರಿತಾಗಿ ಜುಲೈ 24 ರಂದು ಸಭೆ ನಡೆಯಲಿದೆ. ಸಭೆಯಲ್ಲಿ ಶಿವಣ್ಣನವರಿಗೆ ನಾಯಕತ್ವ ವಹಿಸಲು ಮನವಿ ಮಾಡಿಕೊಳ್ಳಬೇಕೆಂದು ಕನ್ನಡ ಚಿತ್ರರಂಗ ಮಂಡಳಿ ನಿರ್ಧರಿಸಿದೆ. ಶಿವಣ್ಣ ನಾಯಕತ್ವ ವಹಿಸುತ್ತಾರೊ ಅಥವಾ ಇಲ್ಲವೋ ಎಂಬುವುದು ಸಭೆಯ ನಂತರ ತಿಳಿಯುತ್ತದೆ. ಒಂದು ವೇಳೆ ಶಿವರಾಜಕುಮಾರ್ ರವರು ನಾಯಕತ್ವ ವಹಿಸಿದರೆ ಚಿತ್ರರಂಗದಲ್ಲಿ ಏನೇನು ಬದಲಾವಣೆ ತರಬಹುದು ಎಂದು ಕಾದುನೋಡಬೇಕು.

(Visited 196 times, 1 visits today)

You Might Be Interested In

LEAVE YOUR COMMENT

Your email address will not be published. Required fields are marked *