ಮತ್ತೇ ಮನರಂಜಿಸಲು ಬರುತ್ತಿದ್ದಾರೆ ಮಠದ ಜೋಡಿ

‘ಮಠ’ ಸಿನಿಮಾ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಹಾಗೂ ‘ನವರಸನಾಯಕ’ ಜಗ್ಗೇಶ್ ಇಬ್ಬರೂ ಬಹಳ ದಿನಗಳ ನಂತರ ಜೊತೆಯಾಗಿ ಮಾಡುತ್ತಿರುವ ಚಿತ್ರ ‘ರಂಗನಾಯಕ’ ಈ ಚಿತ್ರದ ಮುಹೂರ್ತ ಕಾರ್ಯಕ್ರಮ ಸೋಮವಾರ ಬೆಳಿಗ್ಗೆ 6.30ಕ್ಕೆ ಬೆಂಗಳೂರಿನ ಬುಲ್‍ಟೆಂಪಲ್ ರಸ್ತೆಯಲ್ಲಿರುವ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನಡೆದಿದೆ.ನಟ ಜಗ್ಗೇಶ್ ಅವರು ರಾಯರ ಮುಂದೆ ನಿಂತು ಪ್ರಾರ್ಥನೆ ಮಾಡುತ್ತಿರುವ ಚಿತ್ರದ ಪ್ರಥಮ ದೃಶ್ಯಕ್ಕೆ ನಿರ್ಮಾಪಕ ದೇವೇಂದ್ರ ರೆಡ್ಡಿ ಅವರು ಕ್ಲಾಪ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ವಿಖ್ಯಾತ್ ಫಿಲಂಸ್ ಬ್ಯಾನರ್ ಮೂಲಕ ‘ಪುಷ್ಪಕವಿಮಾನ’, ‘ಇನ್‍ಸ್ಪೆಕ್ಟರ್ ವಿಕ್ರಂ’ ಚಿತ್ರಗಳ ನಂತರ ವಿಖ್ಯಾತ್ ನಿರ್ಮಿಸುತ್ತಿರುವ ಮೂರನೇ ಚಿತ್ರ ಇದಾಗಿದೆ.

15 ವರ್ಷಗಳ ಬಳಿಕ ಪ್ರೇಯಸಿಯ ಮನೆಗೆ ಬೇಟಿ ನೀಡಿದ ಕಿಚ್ಚ

ಈ ಚಿತ್ರಕ್ಕೆ ಮಠ ಗುರುಪ್ರಸಾದ್ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್‍ಕಟ್ ಹೇಳುತ್ತಿದ್ದಾರೆ.ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ನಗಿಸುತ್ತಲೇ ಸಮಾಜದ ಅಂಕು ಡೊಂಕುಗಳನ್ನು, ಕಂದಾಚಾರಗಳನ್ನು ವಿಡಂಬನಾತ್ಮಕವಾಗಿ ಹೇಳುವ ಗುರು ಪ್ರಸಾದ್ ‘ರಂಗನಾಯಕ’ ಸಿನಿಮಾದಲ್ಲಿ ಏನು ಹೇಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ಯಕ್ಷಗಾನ ಪ್ರಸಂಗದಲ್ಲಿ ಸಾಮಾನ್ಯವಾಗಿ ಬಳಸುವ ಪದ ರಂಗನಾಯಕ.

ಈ ಚಿತ್ರದಲ್ಲಿ ರಂಗನಾಯಕ ಆಗಿರುವುದು ಜಗ್ಗೇಶ್ ಅಂತ ಎಲ್ಲರಿಗೂ ಗೊತ್ತು, ಆದರೆ ಈ ರಂಗನಾಯಕ ಆಡಿಸುವ ಸೂತ್ರದ ಗೊಂಬೆಗಳು ಯಾರಾಗಿರ್ತಾರೆ ಎನ್ನುವುದು ಮುಂದಿನ ದಿನಗಳಲ್ಲಷ್ಟೇ ಗೊತ್ತಾಗಬೇಕಿದೆ.ಜನವರಿ 15ರ ಸಂಕ್ರಾಂತಿಯ ದಿನದಿಂದ ರಂಗನಾಯಕನ ಚಿತ್ರೀಕರಣ ಪ್ರಾರಂಭಿಸುವ ಯೋಜನೆಯನ್ನು ಚಿತ್ರತಂಡ ಹಾಕಿಕೊಂಡಿದೆ. ಈ ಚಿತ್ರದಲ್ಲಿ ರಂಗಾಯಣ, ನೀನಾಸಂ, ಬಿಂಬ ಸೇರಿದಂತೆ ಹಲವಾರು ರಂಗಶಾಲೆಯ ನೂರಾರು ಕಲಾವಿದರು ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕೆ ಅನೂಪ್ ಸೀಳನ್ ಅವರ ಸಂಗೀತ ನಿರ್ದೇಶನವಿದ್ದು, ಮನೋಹರ್ ಜೋಷಿ ಅವರ ಛಾಯಾಗ್ರಹಣವಿದೆ.

ಚಿತ್ರದ ಕಥೆ, ಚಿತ್ರಕಥೆಯ ಜೊತೆ ಸಂಭಾಷಣೆ ಹಾಗೂ ಸಾಹಿತ್ಯ ಕೂಡ ಗುರುಪ್ರಸಾದ್ ಅವರೇ ರಚಿಸಿದ್ದಾರೆ. ವೀರಂ ಖ್ಯಾತಿಯ ಶಶಿಧರ್ ಹಾಗೂ ಉದ್ಯಮಿ ದೇವೇಂದ್ರ ರೆಡ್ಡಿ ಈ ಚಿತ್ರದ ಸಹನಿರ್ಮಾಪಕರು.

(Visited 114 times, 1 visits today)

You Might Be Interested In

LEAVE YOUR COMMENT

Your email address will not be published. Required fields are marked *