ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡಲಿದ್ದಾರೆ ‘ಬಾಲಿವುಡ್ ಬ್ಯೂಟಿ’

ಬಾಲಿವುಡ್‌ನಲ್ಲಿ ನಟಿ ಜಾಕ್ವೇಲಿನ್‌ ಫರ್ನಾಂಡಿಸ್‌ಗೆ ದೊಡ್ಡ ಹೆಸರು. ಸಲ್ಮಾನ್ ಖಾನ್‌ ಬಳಗದಲ್ಲಿ ಗುರುತಿಸಿಕೊಂಡಿರುವ ನಟಿ ಜಾಕ್ವೇಲಿನ್‌ಗೆ ಸದ್ಯ ಕೈತುಂಬ ಅವಕಾಶಗಳಿವೆ. ಇದುವರೆಗೂ ಹಿಂದಿ ಬಿಟ್ಟರೆ, ಒಂದು ಶ್ರೀಲಂಕಾದ ಸಿನಿಮಾ, ಒಂದು ಬ್ರಿಟಿಷ್ ಸಿನಿಮಾ ಹಾಗೂ ಬಹುಭಾಷೆಯ ‘ಸಾಹೋ’ದಲ್ಲಿ ಜಾಕ್ವೇಲಿನ್ ಬಣ್ಣ ಹಚ್ಚಿದ್ದಾರೆ. ಆದರೆ, ಇದೀಗ ಅವರು ಸ್ಯಾಂಡಲ್‌ವುಡ್‌ನತ್ತ ಬರುವ ಸೂಚನೆ ನೀಡಿದ್ದಾರೆ. ಹಾಗಾದರೆ, ಕನ್ನಡದ ಯಾವ ಸಿನಿಮಾದಲ್ಲಿ ಅವರು ನಟಿಸಲಿದ್ದಾರೆ.

ಮತ್ತೇ ಮನರಂಜಿಸಲು ಬರುತ್ತಿದ್ದಾರೆ ಮಠದ ಜೋಡಿ

ಹೈದರಾಬಾದ್‌ನಲ್ಲಿ ಚಿತ್ರೀಕರಣ ಕಂಪ್ಲೀಟ್‌ ಮಾಡಿರುವದ ‘ಕಿಚ್ಚ’ ಸುದೀಪ್‌ ಅಭಿನಯದ ‘ಫ್ಯಾಂಟಮ್’ ತಂಡ, ಡಿಸೆಂಬರ್‌ ಮೊದಲ ವಾರದಿಂದ ಕೇರಳದಲ್ಲಿ 30 ದಿನಗಳ ಚಿತ್ರೀಕರಣ ಆರಂಭಿಸಿದೆ. ಸದ್ಯ ಈ ಚಿತ್ರದ ವಿಶೇಷ ಹಾಡೊಂದಕ್ಕೆ ಖ್ಯಾತ ನಟಿ ಬೇಕಾಗಿತ್ತು. ಅದಕ್ಕಾಗಿ ಈಗ ಜಾಕ್ವೇಲಿನ್‌ರನ್ನು ಅಪ್ರೋಚ್ ಮಾಡಿದೆ ಚಿತ್ರತಂಡ. ಈಗಾಗಲೇ ಅವರೊಂದಿಗೆ ಮಾತುಕತೆ ನಡೆಸಿರುವ ತಂಡ, ಅವರ ಕಡೆಯಿಂದ ಅಧಿಕೃತ ಮಾಹಿತಿಗಾಗಿ ಕಾಯುತ್ತಿದೆ ಎಂಬ ಮಾಹಿತಿ ಸಿಕ್ಕಿದೆ. ಬರೀ ಹಾಡಿನಲ್ಲಿ ಮಾತ್ರವಲ್ಲದೆ, ಒಂದೆರಡು ದೃಶ್ಯಗಳಲ್ಲೂ ಅವರು ಇರಲಿದ್ದಾರಂತೆ. ಎಲ್ಲ ಅಂದುಕೊಂಡಂತೆ ಆದರೆ, ಏಪ್ರಿಲ್‌ನಲ್ಲಿ ಈ ಹಾಡಿನ ಚಿತ್ರೀಕರಣ ನಡೆಯುವ ಸಾಧ್ಯತೆ ಇದೆ.ಆರಂಭದಲ್ಲಿ ಕತ್ರಿನಾ ಕೈಫ್ ಈ ಹಾಡಿನಲ್ಲಿ ನಟಿಸಲಿದ್ದಾರೆ ಎನ್ನಲಾಗಿತ್ತು.

ಅವರು ಡೇಟ್ಸ್ ಹೊಂದಾಣಿಕೆ ಆಗದೇ ಇದ್ದರೆ, ನೋರಾ ಫತೇಹಿ ಅವರಿಂದ ಡ್ಯಾನ್ಸ್ ಮಾಡಿಸುವ ಯೋಜನೆ ಹಾಕಿಕೊಂಡಿತ್ತು ತಂಡ. ಈ ಬಗ್ಗೆ ನಿರ್ಮಾಪಕ ಜಾಕ್‌ ಮಂಜು ಮಾಹಿತಿ ನೀಡಿದ್ದರು. ‘ಈ ಚಿತ್ರದಲ್ಲಿ ಸೂಪರ್‌ ಆಗಿರುವ ಹಾಡೊಂದು ಇದೆ. ಆ ಹಾಡಿಗೆ ವಿಶೇಷ ವ್ಯಕ್ತಿಯೊಬ್ಬರು ಬೇಕಿರುವುದರಿಂದ ಕತ್ರಿನಾ ಕೈಫ್‌ ಅಥವಾ ನೋರಾ ಫತೇಹಿ ಅವರನ್ನು ಕರೆತರಲು ನಿರ್ಧಾರ ಮಾಡಿದ್ದೇವೆ.

ಈಗಾಗಲೇ ಕತ್ರಿನಾ ಅವರ ಬಳಿ ಮಾತನಾಡಿ ಆಗಿದೆ. ಡೇಟ್ಸ್‌ ಮತ್ತಿತರ ಮಾತುಕತೆಗಳು ನಡೆಯುತ್ತಿವೆ. ಮುಖ್ಯ ಹಾಡಾದ್ದರಿಂದ ಅವರು ಇದ್ದರೆ ಸಿನಿಮಾಗೆ ಒಂದು ವಿಶೇಷ ಕಳೆ ಬರಲಿದೆ. ಇನ್ನು ಕತ್ರಿನಾ ಅವರ ಡೇಟ್‌ ಇಲ್ಲ ಅಂದರೆ ನೋರಾ ಫತೇಹಿ ಬರಲಿದ್ದಾರೆ’ ಎಂದು ಹೇಳಿದ್ದರು ಅವರು.’ಫ್ಯಾಂಟಮ್‌’ ಸಿನಿಮಾದ ಟೀಸರ್ ಅನ್ನು ದುಬೈನ ಬುರ್ಜ್ ಖಲೀಫಾದಲ್ಲಿ ಲಾಂಚ್‌ ಮಾಡುವ ಬಗ್ಗೆ ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ.

‘ಬುರ್ಜ್ ಖಲೀಫಾದಲ್ಲಿ ಟೀಸರ್‌ ರಿಲೀಸ್‌ ಮಾಡುವ ಬಗ್ಗೆ ಈಗಾಗಲೇ ತೀರ್ಮಾನವಾಗಿದೆ ಮತ್ತು ಅನುಮತಿ ಕೂಡ ಸಿಕ್ಕಿದೆ. ಚಿತ್ರತಂಡ ಹೋಗುವುದಾ ಬೇಡವಾ ಎಂಬ ಬಗ್ಗೆ ಸದ್ಯದಲ್ಲೇ ತೀರ್ಮಾನ ಮಾಡುತ್ತೇವೆ. ಏಕೆಂದರೆ ಸದ್ಯ ಕೊರೊನಾದ ಎರಡನೇ ಹಂತದಿಂದಾಗಿ ವಿಮಾನ ಹಾರಾಟ ನಿಂತು ಹೋಗಿದೆ. ಮುಂದಿನ ದಿನಗಳಲ್ಲಿ ಯಾರು ಹೋಗಬೇಕು ಅಥವಾ ಬೇಡ ಎಂಬುದನ್ನು ನಿರ್ಧರಿಸುತ್ತೇವೆ.
ಸುದೀಪ್‌ ಅವರ ಜತೆ ಚರ್ಚಿಸುತ್ತೇನೆ’ ಎಂದು ನಿರ್ಮಾಪಕ ಜಾಕ್‌ ಮಂಜು ತಿಳಿಸಿದ್ದಾರೆ.

(Visited 13 times, 1 visits today)

You Might Be Interested In

LEAVE YOUR COMMENT

Your email address will not be published. Required fields are marked *