15 ವರ್ಷಗಳ ಬಳಿಕ ಪ್ರೇಯಸಿಯ ಮನೆಗೆ ಬೇಟಿ ನೀಡಿದ ಕಿಚ್ಚ

ಅಭಿನಯ ಚಕ್ರವರ್ತಿ ಸುದೀಪ್ ಇದ್ದಕ್ಕಿದ್ದಂತೆ ಕೇರಳದಲ್ಲಿರುವ ಒಂದು ಮನೆಗೆ ಭೇಟಿ ನೀಡಿದ್ದಾರೆ. ಬರೋಬ್ಬರಿ 15 ವರ್ಷಗಳ ಬಳಿಕ ಇಲ್ಲಿಗೆ ಭೇಟಿ ನೀಡಿದ ಅವರು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಕೇರಳದಲ್ಲಿ ಸುದೀಪ್ ಹೋಗಿದ್ದಾದ್ದರೂ ಯಾರ ಮನೆಗೆ ಎಂದು ಯೋಚಿಸುತ್ತೀರಾ? ಸುದೀಪ್ ಭೇಟಿ ನೀಡಿದ್ದು ಮೈ ಅಟೋಗ್ರಾಫ್ ಸಿನಿಮಾ ಶೂಟಿಂಗ್ ನಡೆದ ಮನೆಗೆ. 15 ವರ್ಷಗಳಾದ ನಂತರ ಈ ಮನೆಗೆ ಭೇಟಿ ನೀಡಿದ ಸುದೀಪ್, ವಿಡಿಯೋ ಮೂಲಕ ತಮ್ಮ ಭಾವನೆ ಹಂಚಿಕೊಂಡಿದ್ದಾರೆ.

ಸಲ್ಮಾನ್ ಖಾನ್ ಕೊಟ್ಟ ಉಡುಗೊರೆ ಸಮೇತ ಬರ್ತ್ ಡೇ ವಿಶ್ ಮಾಡಿದ ಕಿಚ್ಚ ಸುದೀಪ್

2006ರಲ್ಲಿ ಬಿಡುಗಡೆಯಾದ ಮೈ ಅಟೋಗ್ರಾಫ್ ಚಿತ್ರ ಸೂಪರ್ ಹಿಟ್ ಆಗಿತ್ತು. ಚಿತ್ರದಲ್ಲಿ ಒಂದು ದೊಡ್ಡ ಮನೆಯನ್ನು ಚಿತ್ರದಲ್ಲಿನ ಸುದೀಪ್  ಪ್ರೇಯಸಿ ಲತಿಕಾ ಮನೆ ಎಂದು ತೋರಿಸಲಾಗಿತ್ತು. ಈಗ ಅದೇ ಲತಿಕಾ ಮನೆಗೆ ಸುದೀಪ್ ಭೇಟಿ ನೀಡಿದ್ದಾರೆ. ಅಲ್ಲದೆ ಅಲ್ಲಿ ಒಂದು ವಿಡಿಯೋ ಕೂಡಾ ಮಾಡಿದ್ದಾರೆ. ಸುದೀಪ್ ಚಿತ್ರದಲ್ಲಿ ಶಂಕರ್ ಪಾತ್ರ ನಿರ್ವಹಿಸಿದ್ದು, ಲತಿಕಾ ಪಾತ್ರದಲ್ಲಿ ಮಲಯಾಳಂ ನಟಿ ಶ್ರೀದೇವಿಕಾ ಮಿಂಚಿದ್ದರು.

https://twitter.com/i/status/1343847725482176513

ಇಷ್ಟು ವರ್ಷಗಳ ಬಳಿಕ ಈ ಜಾಗಕ್ಕೆ ಬಂದ ಸುದೀಪ್ , ಈ ಪ್ರದೇಶದಲ್ಲಿ ಓಡಾಡಿ ತಮ್ಮ ಹಳೆ ನೆನಪುಗಳನ್ನು ತಾಜಾ ಮಾಡಿಕೊಂಡಿದ್ದಾರೆ. ಅಲ್ಲದೆ 2005ರಲ್ಲಿ ಇಲ್ಲಿ ಚಿತ್ರೀಕರಣ ನಡೆಸಿದ್ದು, ಇದೀಗ 15 ವರ್ಷಗಳಾಗಿವೆ. ಇಲ್ಲಿಗೆ ಬಂದು ಬಹಳ ಸಂತೋಷವಾಗುತ್ತಿದೆ. ಕೆಲವೊಂದು ಕ್ಷಣಗಳನ್ನು ಮರೆಯಲು ಸಾಧ್ಯವಿಲ್ಲ ಎಂದಿದ್ದಾರೆ.

ಮೈ ಅಟೋಗ್ರಾಫ್ ಸುದೀಪ್ ನಿರ್ದೇಶನದ ಚಿತ್ರವಾಗಿದ್ದು, ಮೈ ಆಟೋಗ್ರಾಫ್‌ ಸಿನಿಮಾ ಯಾವಾಗಲೂ ನನ್ನ ಜೀವನದ ಒಂದು ಭಾಗವಾಗಿರುತ್ತದೆ. ಮುಂದೇ ನಾನು ಎಷ್ಟೇ ಸಿನಿಮಾಗಳನ್ನು ನಿರ್ದೇಶಿಸಿದರೂ, ಮೈ ಅಟೋಗ್ರಾಫ್ ಸಿನಿಮಾ  ನನ್ನ ಪಾಲಿಗೆ ಸ್ಪೆಷಲ್‌’ ಎಂದಿದ್ದಾರೆ ಸುದೀಪ್‌.

(Visited 73 times, 1 visits today)

You Might Be Interested In

LEAVE YOUR COMMENT

Your email address will not be published. Required fields are marked *