ಡಿಕೆ ಸುರೇಶ್ Covid -19 ಸೋಂಕಿತರ ಜೊತೆಗೆ…ಮುಂದೆ ಓದಿ

ಡಿಕೆ ಸುರೇಶ್ ಅವರು ರೋಗಿಗಳೊಂದಿಗೆ ಆಡಿದ ಮನದಾಳದ ಮಾತುಗಳು

ಸಮಾಜದಲ್ಲಿ ಕೊರೋನಾ ವೈರಸ್ ಬಗ್ಗೆ ಇರುವ ಭಯ, ಅವೈಜ್ಞಾನಿಕ, ತಪ್ಪು ತಿಳುವಳಿಕೆಗಳನ್ನು ಹೋಗಲಾಡಿಸಲು ಹಾಗೂ ನನ್ನ ಕ್ಷೇತ್ರದ ಕೊರೋನಾ ಸೋಂಕಿತರ ಯೋಗಕ್ಷೇಮ ವಿಚಾರಿಸಲು ಇಂದು ರಾಮನಗರದ Covid19 ಸೆಂಟರ್ ಗೆ ಭೇಟಿ ನೀಡಿದ್ದೆ.

ಅಲ್ಲಿರುವವರಿಗೆ ಸೂಕ್ತ ಚಿಕಿತ್ಸೆ, ಊಟೋಪಚಾರ, ಆರೈಕೆ ಸರಿಯಾಗಿ ಆಗುತ್ತಿಲ್ಲ ಎಂಬ ದೂರುಗಳ ಹಿನ್ನೆಲೆಯಲ್ಲಿ ಅದನ್ನು ಖುದ್ದು ಅರಿಯಲು ಅಲ್ಲಿಗೆ ಹೋಗಿದ್ದೆ.

ಸೋಂಕಿತರಿಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಸೋಂಕು ತಗುಲಿದೆ. ಈ ಕಠಿಣ ಪರಿಸ್ಥಿತಿಯಲ್ಲಿ ನಾವು ವೈರಸ್ ನಿಂದ ದೂರ ಇರಬೇಕೇ ಹೊರತು, ಸೋಂಕಿತರಿಂದ ಅಲ್ಲ. ಅವರನ್ನು ಕೀಳಾಗಿ ಕಾಣಬಾರದು. ಅವರಿಗೆ ಆತ್ಮಸ್ಥೈರ್ಯ ತುಂಬಬೇಕಿರುವುದು ನಮ್ಮೆಲ್ಲರ ಜವಾಬ್ದಾರಿ.

Covid ವಾರ್ಡ್ ಗಳಲ್ಲಿ ಇರುವ 131 ಸೋಂಕಿತರ ಜೊತೆ ಕೆಲ ಕಾಲ ಕಳೆದು, ಅವರ ಆರೋಗ್ಯ, ಅಲ್ಲಿನ ವ್ಯವಸ್ಥೆಗಳ ಪರಿಶೀಲನೆ ನಡೆಸಿದೆ. ಅವರಲ್ಲಿ ಆತ್ಮಸ್ಥೈರ್ಯ ತುಂಬಲು ಮತ್ತು ಸೋಂಕಿತರ ಮನಸ್ಸಿನ ಒಳಗಿರುವ ಭಯ ಮತ್ತು ಕೊರೋನಾ ವೈರಸ್ ಬಗೆಗಿನ ತಪ್ಪು ಗ್ರಹಿಕೆ ಹೊರಹಾಕುವ ಪ್ರಯತ್ನ ಈ ಭೇಟಿ ಹಿಂದಿನ ಉದ್ದೇಶವಾಗಿತ್ತು.

ಸೋಂಕಿತರ ಜತೆಗೆ ಕೊರೋನಾ ವಾರಿಯರ್ಸ್ ಗಳಾದ ವೈದ್ಯರು, ನರ್ಸ್ಗಳು, ಸಿಬ್ಬಂದಿ ಜತೆಗೆ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸುತ್ತಿರುವವರೊಂದಿಗೂ ಮಾತುಕತೆ ನಡೆಸಿದೆ. ಯಾವುದೇ ರೀತಿಯ ಭಯಕ್ಕೆ ಒಳಗಾಗಬೇಡಿ, ಅದರ ಅಗತ್ಯವಿಲ್ಲ ಎಂದು ಧೈರ್ಯ ತುಂಬಿದೆ.

 

ಸೋಂಕಿತರು ಯಾವುದೇ ಹಂತದಲ್ಲೂ ಭಯ ಪಡದೇ ಸೂಕ್ತ ಚಿಕಿತ್ಸೆ ಪಡೆದು ಗುಣಮುಖರಾಗಲಿ. ಎಲ್ಲರೂ ಆರೋಗ್ಯವಂತರಾಗಿ ಹೊರಬರಲಿ ಎಂದು ಹಾರೈಸುತ್ತೇನೆ.

(Visited 36 times, 1 visits today)

You Might Be Interested In