ಡಿ ಕೆ ಶಿವಕುಮಾರ್ ರವರೆ ಕೊತ್ವಾಲ್ ಸಂಸ್ಕೃತಿಯಿಂದ ಆಚೆ ಬನ್ನಿ- ಸಿ ಪಿ ಯೋಗೀಶ್ವರ್

ನನ್ನ ವಿರುದ್ಧ ಡಿ ಕೆ ಶಿವಕುಮಾರ್ ಮಾಡಿರುವಂತಹ ಆರೋಪಗಳಿಗೆ ಸ್ಪಷ್ಟಿಕರಣ ಕೊಡುತ್ತಿದ್ದೇನೆ ಎಂದು ಮಾತು ಆರಂಭಿಸಿದ ಯೋಗೀಶ್ವರ್ ರವರು, ಡಿ ಕೆ ಶಿವಕುಮಾರ್ ಮಾಡಿರುವ ಎಲ್ಲ ಆರೋಪಗಳು ಸತ್ಯಕ್ಕೆ ದೂರವಾದದ್ದು ಎಂದು ಹೇಳಿದ್ದಾರೆ.

ಕೆಪಿಸಿಸಿಯ ಅಧ್ಯಕ್ಷರಾಗಿ ಜವಾಬ್ದಾರಿಯುತ ಸ್ಥಾನದಲ್ಲಿದ್ದು ಅವರ ಮಾತುಗಳು ಹಾಸ್ಯಾಸ್ಪದವಾಗಿದೆ ಎಂದು ಯೋಗೀಶ್ವರ್ ಅವರು ಹೇಳಿದ್ದಾರೆ.

ರಾಜಕೀಯದಲ್ಲಿ ಕೆಲವು ತತ್ವ, ಸಿದ್ದಂಥವನ್ನು ಇಟ್ಟುಕೊಂಡು ಬಂದಿದ್ದೇನೆ, ಬಿಜೆಪಿ ಯಲ್ಲಿ ನನಗೆ ಒಳ್ಳೆಯ ಸ್ಥಾನಮಾನವನ್ನು ಪಕ್ಷ ಕೊಡುತ್ತ ಬಂದಿದೆ,ಯೆಡಿಯೂರಪ್ಪನವರು ನನಗೆ ಮೇಲ್ಮನೆ ಸದಸ್ಯತ್ವ ಕೊಡುತ್ತೇನೆಂಬ ಭರವಸೆಯನ್ನು ಕೊಟ್ಟಿದ್ದಾರೆ, ನಾನು ಪಕ್ಷಕ್ಕೆ ನಿಷ್ಠಾವಂಥನಾಗಿದ್ದೇನೆ ಎಂದು ಹೇಳಿದರು.

ಡಿ ಕೆ ಶಿವಕುಮಾರ್ ರವರು ನನ್ನ ಮತ್ತು ಬಿಜೆಪಿ ಪಕ್ಷದ ನಡುವೆ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ನಾನು ಇಂದಿಗೂ ಶಿವಕುಮಾರ್ ರವರ ಕಾಲಿಗೆ ಬೀಳುವ ಸಂದರ್ಭ ಬರುವುದಿಲ್ಲ, ಶಿವಕುಮಾರ್ ರವರು ಡಾನ್ ಕೊತ್ವಾಲ್ ರಾಮಚಂದ್ರ ರವರ ಸಂಸ್ಕೃತಿ ಇಂದ ಆಚೆ ಬಂದು ಕೆಪಿಸಿಸಿ ಅಧ್ಯಕ್ಷರ ಘನತೆಗೆ ತಕ್ಕಂತೆ ಮಾತಾಡಬೇಕು ಅಂದು ಹೇಳಿದ್ದಾರೆ.

15 ದಿನಗಳ ಹಿಂದೆ ಅವರನ್ನು ಭೇಟಿ ಮಾಡಿದ್ದು ಕಾಲು ಹಿಡಿದಿದ್ದೆ ಎನ್ನುವ ಎಲ್ಲ ಮಾತುಗಳು ಸತ್ಯಕ್ಕೆ ದೂರ ಎಂದು ಸ್ಪಷ್ಟನೆ ನೀಡಿದರು.

ಕನಸಿನ ಸರ್ಕಾರ : ಯೆಡಿಯೂರಪ್ಪನವರು ಮುಖ್ಯಮಂತ್ರಿ ಆಗಬೇಕು ಎನ್ನುವ ಆಸೆಯಿಂದ ನಾನು ಕೆಲವು ಅಳಿಲು ಸೇವೆಯನ್ನು ಸರ್ಕಾರ ಮಾಡಲು ಮಾಡಿದ್ದೇನೆ, ಸರ್ಕಾರ ಬೀಳಿಸುವ ಯಾವುದೇ ಪ್ರಯತ್ನ ನನ್ನಿಂದ ಆಗಿಲ್ಲ ಆಗುವುದು ಇಲ್ಲ, ಯೆಡಿಯೂರಪ್ಪನವರೇ ನಮ್ಮ ನಾಯಕರು ಎನ್ನುವ ಭರವಸೆನ್ನು ನೀಡಿದ್ದಾರೆ.

(Visited 149 times, 1 visits today)

You Might Be Interested In