ಕಾಫಿ ಕಿಂಗ್ ವಿ ಜೆ ಸಿದ್ದಾರ್ಥ ಅವರ ಅಮೃತಶಿಲೆಯ ಪ್ರತಿಮೆಯ ಕೆಲಸ ಬರದಿಂದ ಸಾಗಿದೆ

ವೀರಪ್ಪ ಹೆಗ್ಗಡೆ ಗಂಗಯ್ಯ ಹೆಗ್ಗಡೆ ಸಿದ್ದಾರ್ಥ ಹೆಗ್ಗಡೆ(ವಿ.ಜಿ.ಸಿದ್ದಾರ್ಥ ಹೆಗ್ಡೆ) ಅವರ ನೆನಪಿನಾರ್ಥ ಅವರ ಭಾವನವರಾದ ರತ್ನಾಕರ್ ಗೌಡ ಕೋಡಿಹಳ್ಳಿಲಕ್ಕವಳ್ಳಿ ನಳಿನಿ ತನುಡಿ (ಸಿದ್ದಾರ್ಥ ಹೆಗ್ಗಡೆಯವರ ಅಕ್ಕ) ದಂಪತಿಗಳು ಅವರ ಮಗ ನಿರೂಪ್ ಇವರುಗಳು ಕುದ್ರೆಗುಂಡಿ ತೋಟದಲ್ಲಿ ಇವರ ಅಮೃತ ಶಿಲೆಯ ಪ್ರತಿಮೆಯನ್ನು ಅಂದಾಜು 50 ಲಕ್ಷದಲ್ಲಿ ನಿರ್ಮಾಣ ಮಾಡಿಸುತ್ತಿದ್ದು ಮಲೆನಾಡಿನ ಕರ್ನಾಟಕದ ಬಡವರ ಕಣ್ಮಣಿ ,ಬದುಕು ಕಟ್ಟಿಕೊಂಡ ಎಷ್ಟೋ ಮಧ್ಯಮ ವರ್ಗದ ಮನೆಯ ಮಕ್ಕಳ ಪಾಲಿನ ದೇವರಾಗಿದ್ದ ಸಿದ್ಧಾರ್ಥ್ ಹೆಗ್ಡೆ ದೇಶದ 73 ನೆ ದೊಡ್ಡ ಉದ್ಯಮಿಯಾಗಿದ್ದರು

ಕಳೆದ 2019 ಜುಲೈ 29 ಈ ದೇಶಕ್ಕೆ ಕಹಿ ನೆನಪು ಇವರ ಸಾವು ಅದೆಷ್ಟೋ ಜನರು ಮಾತು ಬಾರದ ಕಂಬನಿಗಳಾಗಿದ್ದರು ಅನ್ನೋದಿಕ್ಕೆ ಮಂಗಳೂರಿನಿಂದ ಚಿಕ್ಕಮಗಳೂರಿಗೆ ಇವರ ಪಾರ್ಥಿವ ಶರೀರ ಜುಲೈ 31 ರಂದು ಬರುವಾಗ ಸೇರಿದ ಅಪಾರ ಜನಸ್ತೋಮ ಆ ದಿನ ರಾಜ್ಯಕ್ಕೆ ರಾಜ್ಯವೇ ಸೂತಕದ ಛಾಯೆಯಲ್ಲಿ ಮುಳುಗಿ ಹೋಗಿತ್ತು ಸಿದ್ದಾರ್ಥಣ್ಣ ನೀವು ಬದುಕಿ ತೋರಿಸಬೇಕಿತ್ತು

ವಿ.ಜಿ.ಸಿದ್ದಾರ್ಥ ಹೆಗ್ಡೆ

ಅಣ್ಣ ಇಂದಿಗೂ ನೀವು ಹೋದ ದಿನದಿಂದ ನಮ್ಮ ಜಿಲ್ಲೆಗೆ ಏನೋ ಗರ ಬಡಿದಂತಿದೆ ಹೋದ 11 ನೆ ದಿನಕ್ಕೆ ಭೋ ಕುಸಿತ ಆಯ್ತು ಆ ಭೂಮಿ ತಾಯಿಗೆ ಅಷ್ಟು ನೋವಾಗಿ ಹೋಗಿತ್ತು ನಿಮ್ಮ ನೋವಲ್ಲೇ ಆ ವರುಣ ದೇವ ಕಣ್ಣೀರು ಹರಿಸಿದ ಇಲ್ಲ ಅಣ್ಣಾ ನೀವು ಇಂದಿಗೂ ನಮ್ಮೊಳಗಿದ್ದೀರಿ ನೀವು ಸತ್ತಿಲ್ಲ ಆ ದಿನವನ್ನ ನೆನಸಿದರೆ ಆ ದೇವರಿಗು ನಿಮ್ಮನ್ನ ಉಳಿಸಿಕೊಳ್ಳೋ ಮನಸ್ಸು ಇರಲಿಲ್ವಾ ಅನ್ನೋ ಸಿಟ್ಟು, ದುಃಖ ಎಲ್ಲ ಬರುತ್ತೆ, ಇವರ ನೆನಪು ಸದಾ ಅಜರಾಮರವಾಗಿರಲಿ ಎಂಬ ನಿಮ್ಮ ಉದ್ದೇಶಕ್ಕೆ ನಿಮಗಿದೋ ನಮ್ಮ ನಮನಗಳು ಇದೆ ತಿಂಗಳು 29ರಂದು ಈ ಪ್ರತಿಮೆಯನ್ನು ಕುಟುಂಬದ ಸದಸ್ಯರು ಪತ್ನಿ,ಮಕ್ಕಳು,ಮತ್ತು ರಾಜ್ಯದ ಹೆಮ್ಮೆಯ ಮಾಜಿ ಮುಖ್ಯ ಮಂತ್ರಿಗಳು ಎಸ್.ಎಂ.ಕೃಷ್ಣರವರು ಲೋಕಾರ್ಪಣೆ ಮಾಡಲಿದ್ದಾರೆ

(Visited 379 times, 1 visits today)

You Might Be Interested In