ಗಾಯಕಿ ನೇಹಾ ಕಕ್ಕರ್ ಗರ್ಭಿಣಿ ಅಲ್ಲ

ಗಾಯಕಿ ನೇಹಾ ಕಕ್ಕರ್ ಅಮ್ಮನಾಗುತ್ತಿದ್ದಾರೆ ಎಂಬುದು ಎರಡು ದಿನಗಳ ಹಿಂದೆ ಸುದ್ದಿಯಾಗಿತ್ತು. ಶುಕ್ರವಾರ ಪತಿ
ರೋಹನ್​ಪ್ರೀತ್ ಜತೆಯಿರುವ ಫೋಟೊವೊಂದನ್ನು ಶೇರ್ ಮಾಡಿದ್ದ ನೇಹಾ #KhyaalRakhyaKar ಎಂಬ ಹ್ಯಾಷ್ ಟ್ಯಾಗ್ ಹಾಕಿದ್ದರು.

ಫೋಟೊದಲ್ಲಿ ನೇಹಾ ಗರ್ಭಿಣಿಯಂತೆ ಕಾಣುತ್ತಿದ್ದು, ಹಲವಾರು ಮಂದಿ ಶುಭಾಶಯ ಕೋರಿದ್ದರು.

ಸಲ್ಮಾನ ಖಾನ್ ಸಹೋದರನ ಹುಟ್ಟುಹಬ್ಬಕ್ಕೆ ಕಿಚ್ಚ ಶುಭ ಕೋರಿಕೆ

ಆಕೆಯ ಪತಿ ರೋಹನ್, ಇನ್ನು ನಾನು ಸ್ವಲ್ಪ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ ಎಂದು ಕಾಮೆಂಟಿಸಿದ್ದರು. ನೇಹಾ ಸಹೋದರ ಟೋನಿ ಕಕ್ಕರ್ ‘ನಾನು ಮಾವ ಆಗುತ್ತಿದ್ದೇನೆ’ ಎಂದು ಕಾಮೆಂಟ್ ಮಾಡಿದ್ದರಿಂದ ಬಹುತೇಕ ಮಂದಿ ನೇಹಾ ಅಮ್ಮನಾಗುತ್ತಿದ್ದಾಳೆ ಎಂದೇ ನಂಬಿದ್ದರು.

ಯುವರತ್ನ ತಂಡದಿಂದ ಭರ್ಜರಿ ಉಡುಗಡೆ

ಆದರೆ ಶನಿವಾರ ಇನ್​ಸ್ಟಾಗ್ರಾಮ್​ನಲ್ಲಿ ತನ್ನ ಹೊಸ ಮ್ಯೂಸಿಕ್ ವಿಡಿಯೊದ ಪ್ರೊಮೊ ಪೋಸ್ಟರ್ ಶೇರ್ ಮಾಡಿ #KhyaalRakhyaKar 22nd December ಎಂದು ಬರೆದುಕೊಂಡಿದ್ದರಿಂದ ಇದು ಪ್ರಚಾರ ತಂತ್ರ ಎಂಬುದು ಸ್ಪಷ್ಟವಾಗಿದೆ

(Visited 18 times, 1 visits today)

You Might Be Interested In

LEAVE YOUR COMMENT

Your email address will not be published. Required fields are marked *